ಲಿವಾ, XUV 500: ಇದು ಓಟ್ ಮಾಡೋ ಸಮಯ

ಸ್ಕೋಡಾ ರಾಪಿಡ್: ಪ್ರಸಕ್ತ ವರ್ಷದ ಅತ್ಯುತ್ತಮ ಕಾರುಗಳ ಆಯ್ಕೆ ಪಟ್ಟಿಯಲ್ಲಿ ಸ್ಕೋಡಾ ರಾಪಿಡ್ ಹೆಸರು ಕೂಡ ಇದೆ. ಸ್ಕೋಡಾ ಕಂಪನಿಯು ಇತ್ತೀಚೆಗೆ ರಾಪಿಡ್ ಕಾರನ್ನು ಅನಾವರಣ ಮಾಡಿತ್ತು. ಇದು ಒಕ್ಟೊವಿಯಾ ಕಾರಿನ ಸ್ಥಾನಕ್ಕೆ ಬಂದ ಕಾರು. ನೋಡಲು ಕೊಂಚ ವೆಂಟೊ ತರಹನೇ ಇದೆ. ಇದರ ಸಂಪೂರ್ಣ ವಿಮರ್ಶೆ ಕೆಲವು ದಿನದ ಹಿಂದೆ ನಾವು ನೀಡಿದ್ದೇವು.
ಟೊಯೊಟಾ ಎಟಿಯೋಸ್ ಲಿವಾ: ಟೊಯೊಟಾ ಕಂಪನಿಯ ಮೊದಲ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಎಟಿಯೋಟ್ ಲಿವಾ ಕಾರು. ಇದು ಮಾರುಕಟ್ಟೆಗೆ ಬಂದಾಗ ಹೆಚ್ಚಿನ ಹವಾ ಸೃಷ್ಟಿಸಿತ್ತು. ಆದರೆ ಇತ್ತೀಚೆಗೆ ಮಾರಾಟ ತುಸು ಇಳಿಕೆ ಕಂಡಿದೆ. ಲಿವಾ ಡೀಸೆಲ್ ಆವೃತ್ತಿ ರಸ್ತೆಗಿಳಿದರೆ ಹೆಚ್ಚು ಜನರು ಖರೀದಿಸುವ ನಿರೀಕ್ಷೆಯಿದೆ.
ಮಹೀಂದ್ರ XUV 500: ಎಕ್ಸ್ ಯುವಿ 5ಒಒ ಸ್ಪರ್ಧೆಯಲ್ಲಿರುವ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡುವ ಕಾರು. ಇದು ಮಹೀಂದ್ರ ಕಂಪನಿಯ ಮೊದಲ ಗ್ಲೋಬಲ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್. ವಿನ್ಯಾಸ ಮತ್ತು ಶಕ್ತಿ ಇದನ್ನು ಜಾಗತಿಕ ಕಾರು ಬ್ರಾಂಡ್ ಗಳ ಸ್ಥಾನದಲ್ಲಿ ನಿಲ್ಲಿಸಿದೆ. ಸದ್ಯ ಇದರ ಬುಕ್ಕಿಂಗ್ ಸ್ಥಗಿತಗೊಂಡಿದೆ. ಯಾಕೆಂದರೆ ಇದು ಕಂಪನಿಯ ನಿರೀಕ್ಷೆಗಿಂತ ಹೆಚ್ಚು ಬುಕ್ಕಿಂಗ್ ಆಗಿದ್ದು, ಕಂಪನಿಯು ಉತ್ಪಾದನೆ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ.
ರೆನಾಲ್ಟ್ ಫ್ಲೂಯೆನ್ಸ್: ಎನ್ ಡಿಟಿವಿ ಕಾರು ಬೈಕು ಪ್ರಶಸ್ತಿಯಲ್ಲಿರುವ ಕೊನೆಯ ಕಾರು ರೆನಾಲ್ಟ್ ಫ್ಲೂಯೆನ್ಸ್. ಇದರು ಪ್ರೀಮಿಯಂ ಸೆಡಾನ್ ಕಾರು. ಇದು ದೇಶದಲ್ಲಿ ಸ್ವತಂತ್ರ ವಹಿವಾಟು ಆರಂಭಿಸಿದ ನಂತರ ರೆನಾಲ್ಟ್ ಹೊರತಂದ ಮೊದಲ ಕಾರು. ಈ ಕಾರಿನ ಮೇಲೆ ಕಂಪನಿಯು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಹತ್ತು ಕಾರು ಮತ್ತು ನಾಲ್ಕು ಬೈಕುಗಳನ್ನು ನೋಡಿದ್ದೀರಲ್ಲ. ಈಗ ಓಟ್ ಹಾಕೋ ಸಮಯ. ಎಲ್ಲಿ ಓಟು ಹಾಕುವುದು ಅನ್ನುವಿರಾ? ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








