ವೆರ್ನಾ, ಸ್ವಿಫ್ಟ್ ಮತ್ತು ಸನ್ನಿ- ನೀವು ಜೈ ಎನ್ನಿ

ಹ್ಯುಂಡೈ ವೆರ್ನಾ: ಹ್ಯುಂಡೈ ಕಂಪನಿಯ ನೂತನ ವೆರ್ನಾ ಕಾರು ಫ್ಲೂಡಿಕ್ ವಿನ್ಯಾಸದಿಂದ ರಸ್ತೆಗಿಳಿದಿತ್ತು. ಇದರ ಅಂದಚೆಂದವೇ ಗ್ರಾಹಕರಿಗೆ ಇಷ್ಟವಾಗಿದೆ. ಇದು ಕೇವಲ ಸೌಂದರ್ಯ ಮಾತ್ರವಲ್ಲದೇ ಕಾರ್ಯಕ್ಷಮತೆಯಿಂದಲೂ ಗ್ರಾಹಕರಿಗೆ ಇಷ್ಟವಾಗಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿದೆ.
ಮಾರುತಿ ಸುಜುಕಿ ಸ್ವಿಫ್ಟ್: ದೇಶದ ಕಾರು ಮಾರುಕಟ್ಟೆಯಲ್ಲಿ ಈ ವರ್ಷ ಹೆಚ್ಚು ಹವಾ ಸೃಷ್ಟಿಸಿದ ಕಾರು ಸ್ವಿಫ್ಟ್. ಇದರ ಆಕರ್ಷಕ ಇಂಟಿರಿಯರ್ ಹೆಚ್ಚು ಜನರಿಗೆ ಇಷ್ಟವಾಗಿದೆ. ಆದರೆ ಕಂಪನಿಯ ಮಾನೆಸರ್ ಘಟಕದಲ್ಲಿ ನಡೆದ ನೌಕರರ ಪ್ರತಿಭಟನೆ ಇದರ ಮಾರಾಟ ಮತ್ತು ಉತ್ಪಾದನೆಗೆ ಹಿನ್ನಡೆ ನೀಡಿತ್ತು.
ನಿಸ್ಸಾನ್ ಸನ್ನಿ: ಮಧ್ಯಮ ಗಾತ್ರದ ಸೆಡಾನ್ ಕಾರುಗಳಲ್ಲಿ ನಿಸ್ಸಾನ್ ಸನ್ನಿ ಹೆಚ್ಚು ಜನರಿಗೆ ಇಷ್ಟವಾಗಿದೆ. ಇದನ್ನು ಕಂಪನಿಯು ನಿಸ್ಸಾನ್ ಮೈಕ್ರಾ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಿತ್ತು. ಆದರೆ ಇದು ನೋಡಲು ಮೈಕ್ರಾಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಸದ್ಯಕ್ಕೆ ಸನ್ನಿ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ.
ಇನ್ನುಳಿದ ಕಾರುಗಳು ನಿಮಗೆ ಇಷ್ಟವಾದೀತಾ? ಮುಂದಿನ ಪುಟ ನೋಡಿ


Click it and Unblock the Notifications








