ಈ ಹತ್ತು ಕಾರುಗಳಲ್ಲಿ ನಿಮಗ್ಯಾವುದು ಇಷ್ಟ?

ವರ್ಷದ ಕಾರು ಆಯ್ಕೆಗೆ ಹತ್ತು ಕಾರು. ಬೇಕಾದನ್ನು ಆಯ್ಕೆ ಮಾಡಿಕೊಳ್ಳಿ.
ಷೆವರ್ಲೆ ಬೀಟ್: ನೂತನ ಬೀಟ್ ಡೀಸೆಲ್ ಕಾರು ಷೆವರ್ಲೆ ಕಂಪನಿಯ ಮೊದಲ ಡೀಸೆಲ್ ಚಾಲಿತ ಸಣ್ಣಕಾರು. ನಗರದ ರಸ್ತೆಗಳಲ್ಲಿ ಪ್ರಯಾಣಿಸಲು ಹೆಚ್ಚು ಜನರು ಬೀಟ್ ಕಾರು ಖರೀದಿಸುತ್ತಾರೆ. ಇದರ ಕಾರ್ಯಕ್ಷಮತೆ ಮತ್ತು ಮೈಲೇಜ್ ನಗರದ ರಸ್ತೆಗೆ ಪೂರಕವಾಗಿದೆ.
ಫೋರ್ಡ್ ಫಿಯೆಸ್ಟಾ: ನೂತನ ಫೋರ್ಡ್ ಫಿಯೆಸ್ಟಾ ಕಾರನ್ನು ಕಂಪನಿಯು ಗ್ಲೋಬಲ್ ಕಾರು ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಿತ್ತು. ಹೀಗಾಗಿ ಇದು ಜಾಗತಿಕ ಸ್ಟಾಂಡರ್ಡ್ ಇರುವ ಕಾರು. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದನ್ನು ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬಹುದು.
ಹೋಂಡಾ ಬ್ರಿಯೊ: ನಿಮಗೆ ಆಯ್ಕೆ ಮಾಡಲು ಇರುವ ಇನ್ನೊಂದು ಹ್ಯಾಚ್ ಬ್ಯಾಕ್ ಕಾರು ಬ್ರಿಯೊ. ಹೋಂಡಾ ಕಂಪನಿಯ ಎಂಟ್ರಿ ಲೆವೆಲ್ ಸಣ್ಣ ಕಾರು ಸೆಗ್ಮೆಂಟಿನಲ್ಲಿ ಹೋಂಡಾ ಬ್ರಿಯೊ ರಸ್ತೆಗಿಳಿದಿತ್ತು. ಈ ಕಾರಿನ ಕುರಿತು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಆದರೆ ಕಂಪನಿಯು ಕಡಿಮೆ ಉತ್ಪಾದನೆ ಕೈಕೊಂಡದ್ದು ಮಾರಾಟ ಇಳಿಕೆಗೆ ಕಾರಣವಾಗಿತ್ತು.


Click it and Unblock the Notifications








