ಈ ನಾಲ್ಕು ಬೈಕುಗಳಲ್ಲಿ ನಿಮ್ಮ ಆಯ್ಕೆ ಯಾವುದು?

ವರ್ಷದ ಬೈಕ್ ವಿಭಾಗದಲ್ಲಿ ನಾಲ್ಕು ಬೈಕುಗಳನ್ನು ಆಯ್ಕೆ ಮಾಡಲಾಗಿದೆ. ಬಜಾಜ್ ಬಾಕ್ಸರ್ 150, ನ್ಯೂ ಹೀರೋ ಹೋಂಡಾ ಇಂಪಲ್ಸ್, ಹೋಂಡಾ ಸಿಬಿಆರ್ 250ಆರ್ ಮತ್ತು ಯಮಹಾ ಆರ್15 ವರ್ಷನ್ 2.0. ಪಟ್ಟಿ ಸಣ್ಣದಾಗಿದೆ ಎನಿಸುವುದೇ? ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ಬೈಕ್ ಬಿಡುಗಡೆಗೊಂಡಿರುವುದೇ ಇದಕ್ಕೆ ಕಾರಣ.
ಇದರಲ್ಲಿ ಬಾಕ್ಸರ್ 150 ಬಗ್ಗೆ ಕೊಂಚ ನೋಡೋಣ. ಇದು ಗ್ರಾಮೀಣ ಭಾರತಕ್ಕಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ಬೈಕ್. ಇದರ ಕಡಿಮೆ ದರ ಹೆಚ್ಚು ಜನರಿಗೆ ಇಷ್ಟವಾಗಿದೆ. ಹೋಂಡಾಕ್ಕೆ ವಿಚ್ಛೇದನ ನೀಡಿದ ನಂತರ ಹೀರೋಮೊಟೊಕಾರ್ಪ್ ಹೊರತಂದ ಮೊದಲ ಬೈಕ್ ಹೀರೋ ಇಂಪಲ್ಸ್.
ಇನ್ನುಳಿದಂತೆ ಹೋಂಡಾ ಸಿಬಿಆರ್ 250ಆರ್ ಹೆಚ್ಚು ಜನರು ಇಷ್ಟಪಟ್ಟ ಸೂಪರ್ ಬೈಕ್. ಇದರ ಇತ್ತೀಚಿನ ಆವೃತ್ತಿ ಕೂಡ ಇತ್ತೀಚೆಗೆ ರಸ್ತೆಗಿಳಿದಿದೆ. ಯಮಹಾ ಆರ್15 ಸೂಪರ್ ಬೈಕ್ ಕೂಡ ಆಕರ್ಷಕ ಸೂಪರ್ ಬೈಕ್. ಇದರ 2.0 ಆವೃತ್ತಿ ಕೂಡ ರಸ್ತೆಗಿಳಿದಿದೆ.
ಈ ನಾಲ್ಕು ಬೈಕುಗಳಲ್ಲಿ ಯಾವುದು ನಿಮಗೆ ಇಷ್ಟ. ಅದಕ್ಕೆ ಓಟ್ ಮಾಡಬಹುದು. ಆದರೆ ಅದಕ್ಕೆ ಮೊದಲು ನೀವು ಅತ್ಯುತ್ತಮ ಕಾರೊಂದನ್ನು ಆಯ್ಕೆ ಮಾಡಿಬಿಡಿ. ಹತ್ತು ಕಾರುಗಳಲ್ಲಿ ನಿಮಗೆ ಇಷ್ಟವಾದ ಒಂದು ಕಾರು ಯಾವುದು?


Click it and Unblock the Notifications








