10 ತಿಂಗಳಲ್ಲಿ 10 ಲಕ್ಷ ಮಾರುತಿ ಮಾರಾಟ

Maruti Suzuki Sales
ಪ್ರಸಕ್ತ ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ಕಂಪನಿಯ ಕಾರ್ ಮಾರಾಟ 10 ಲಕ್ಷ ಗಡಿ ದಾಟಿರುವುದಾಗಿ ದೇಶದ ಬೃಹತ್ ಕಾರ್ ತಯಾರಿಕಾ ಕಂಪನಿ ಮಾರುತಿ ಸುಜುಕಿ ಹೇಳಿದೆ. ಕಳೆದ ಆರ್ಥಿಕ ವರ್ಷದಲ್ಲೂ ಕಂಪನಿಯ ಮಾರಾಟ 10 ಲಕ್ಷ ತಲುಪಿತ್ತು.

ಆದರೆ ಮಾರುತಿ ಈ ವರ್ಷ 2 ತಿಂಗಳು ಮುಂಚೆಯೇ ಗುರಿ ತಲುಪಿದೆ. 2010ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕಂಪನಿಯು 9,27,655 ಯೂನಿಟ್ ಮಾರಾಟ ಮಾಡಿದೆ. ಪ್ರಸಕ್ತ ವರ್ಷದ ಜನವರಿ 5ರವರೆಗೆ ರಫ್ತು ಸೇರದೇ ಮಾರುತಿ 73,874 ಯೂನಿಟ್ ಮಾರಾಟ ಮಾಡಿದೆ. ಹೀಗಾಗಿ ಈಗಾಗಲೇ ಕಂಪನಿಯು 10,01,529 ಕಾರ್ ಮಾರಾಟ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಕಂಪನಿಯ ಮಾರಾಟ ಒಂದು ಲಕ್ಷ ಯೂನಿಟ್ ದಾಟಿತ್ತು.

ಹೆಚ್ಚುತ್ತಿರುವ ಬೇಡಿಕೆ ಹಿನ್ನಲೆಯಲ್ಲಿ ಕಂಪನಿಯು ಮಾನೆಸರ್ ನಲ್ಲಿ ಮೂರನೇ ಘಟಕ ನಿರ್ಮಿಸುತ್ತಿದೆ. ಇದಕ್ಕೆ 1,700 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು ವಾರ್ಷಿಕ 2.5 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಎರಡನೇ ಘಟಕಕ್ಕೂ ಇಷ್ಟೇ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿತ್ತು. ಎರಡನೇ ಘಟಕ ಮುಂದಿನ ವರ್ಷ ಕಾರ್ಯನಿರ್ವಹಣೆ ಆರಂಭಿಸಲಿದೆ. ಆದರೆ ಮೂರನೇ ಘಟಕದಲ್ಲಿ ಉತ್ಪಾದನೆಯೂ 2012ಕ್ಕೆ ಅಥವಾ 2013ಕ್ಕೆ ಆರಂಭವಾಗುವ ನಿರೀಕ್ಷೆಯಿದೆ. ಗುರ್ ಗಾಂವ್ ನಲ್ಲಿರುವ ಕಂಪನಿಯ ಘಟಕವು ವಾರ್ಷಿಕ 85 ಸಾವಿರ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Sunday, January 30, 2011, 12:51 [IST]
English summary
India’s largest car maker Maruti Suzuki has scaled the one million mark in the first ten months of the financial year. Maruti’s contribution to the global volume is more than 50% and the net sale volume for 2009-10 is 10,18,365 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+