ಅಮೀರ್ ಖಾನ್ ಗೆ 100 ರು. ದಂಡ ಹಾಕಿದ ಪೊಲೀಸ್

Aamir Khan fined Rs 100
ನಟ ಅಮೀರ್ ಖಾನ್ ಚಲನಚಿತ್ರಗಳಲ್ಲಿ ವಾಹನ ಚಲಾಯಿಸುವಾಗ ಪ್ರೇಕ್ಷಕರ ಎದೆ ಝುಂ ಎನ್ನಬಹುದು. ಕಾರು ಬೈಕುಗಳಲ್ಲಿ ರೌಡಿಗಳನ್ನು ಅಟ್ಟಾಡಿಸಿಕೊಂಡು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿ ಹೊಡೆಯೋದು ನೋಡೋದೆಂದ್ರೆ ಅಮೀರ್ ಅಭಿಮಾನಿಗಳಿಗೆ ಪುಳಕ.

ಹಾಗಂತ ಅದೇಲ್ಲ ನಿಜ ಜೀವನದಲ್ಲಿ ಮಾಡಲು ಸಾಧ್ಯವಿಲ್ಲ. ನಿನ್ನೆ ಹೀಗೆಯೇ ಆಗಿತ್ತು. ನಮ್ಮ ಹಮೀರ್ ಖಾನ್ ಸತಾರ ಸಿಟಿಯಲ್ಲಿ ಪ್ರಯಾಣಿಸುತ್ತಿದ್ದರು. ಅದು ಕೂಡ ತನ್ನ ಪ್ರೀತಿಯ ಸಿಲ್ವರ್ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ. ಆಗ ರಾಂಗ್ ಟರ್ನ್ ಮಾಡಿ ನೋ ಎಂಟ್ರಿ ಝೋನ್ ಪ್ರವೇಶಿಸಿದರು.

"ತಕ್ಷಣ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಅವರ ಕಾರನ್ನು ನಿಲ್ಲಿಸಿದರು. ನೀವು ತಪ್ಪು ರಸ್ತೆಯಲ್ಲಿ ಸಾಗುತ್ತಿದ್ದೀರಿ ಎಂದು ತಿಳಿಸಿದರು" ಎಂದು ಸತಾರ ಸಿಟಿ ಟ್ರಾಫಿಕ್ ಇನ್ ಚಾರ್ಜ್ ಕೆ.ಎನ್ ಪಾಟೀಲ್ ಮಾತನ್ನು ಉಲ್ಲೇಖಿಸಿ ಮಿಡ್ ಡೇ ವರದಿ ಮಾಡಿದೆ.

ತಕ್ಷಣ ಅಮೀರ್ ಖಾನ್ ಭದ್ರತಾ ಸಿಬ್ಬಂದಿ ಟ್ರಾಫಿಕ್ ಪೊಲೀಸರಲ್ಲಿ ವಾದ ಮಾಡಲು ಸುರು ಮಾಡಿದ. "ನೋಡಪ್ಪ ಒಳಗಡೆ ಇರೋದು ಬಿಗ್ ಸ್ಟಾರ್ ಅಮೀರ್ ಖಾನ್" ಎಂದನಂತೆ. ಅದಕ್ಕೆ ಪೊಲೀಸ್ ಯಾವ ರೀತಿ ಪ್ರತಿಕ್ರಿಯೆ ನೀಡಿದರು ಎಂದು ಖಚಿತವಾಗಿಲ್ಲ.

ಆದರೆ ಅಮೀರ್ ಖಾನ್ ಈ ಕುರಿತು ಹೆಚ್ಚು ಮಾತನಾಡಲು ಇಚ್ಚಿಸದೇ ದಂಡ ಪಾವತಿಸಲು ಒಪ್ಪಿದರು ಎಂದು ಪಾಟೀಲ್ ಹೇಳಿದ್ದಾರೆ.

More from DriveSpark

Article Published On: Monday, October 10, 2011, 17:37 [IST]
English summary
Aamir Khan was fined Rs 100 for driving his silver-coloured BMW into a no-entry zone yesterday evening, reports Mid Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+