ಅಶೋಕ್ ಲೇಲಾಂಡ್ ಕಂಪನಿಗೆ ನವೆಂಬರ್ ಶುಭಮಾಸ

ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಿಕಾ ಕಂಪನಿ ಅಶೋಕ್ ಲೇಲಾಂಡ್ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 5,137 ಯುನಿಟ್ ವಾಹನ ಮಾರಾಟ ಮಾಡಿತ್ತು.
ಇದೇ ಸಮಯದಲ್ಲಿ ಕಂಪನಿಯ ದೇಶಿ ಮಾರಾಟ ಕೂಡ ಗಮನಾರ್ಹವಾಗಿ ಏರಿಕೆ ಕಂಡಿದೆ. 2011 ನವೆಂಬರ್ ನಲ್ಲಿ ಕಂಪನಿಯ ದೇಶಿ ಮಾರಾಟ 6,477 ಯೂನಿಟ್ ಗೆ ತಲುಪಿದ್ದು ಶೇಕಡ 67ರಷ್ಟು ಹೆಚ್ಚಾಗಿದೆ. ನವೆಂಬರ್ 2010ರಲ್ಲಿ ಕಂಪನಿಯು 3,885 ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡಿತ್ತು.
ಇದೇ ಸಮಯದಲ್ಲಿ ಕಂಪನಿಯ ವಾಹನ ರಫ್ತು 1,252 ಯೂನಿಟ್ ಗೆ ತಲುಪಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇದು 1,401 ಯೂನಿಟ್ ಆಗಿತ್ತು.


Click it and Unblock the Notifications








