ಆಡಿ ಏರ್ ಬ್ಯಾಗ್ ಸ್ಟಿಚ್ಚಿಂಗ್ ಸರಿಯಾಗಿಲ್ವಂತೆ!!

"ಪ್ರಸಕ್ತ ವರ್ಷದ ಏಪ್ರಿಲ್ 8ರಿಂದ ಮೇ 26ರವರೆಗೆ ಉತ್ಪಾದಿಸಿದ ಆಡಿ ಎ6 ಕಾರುಗಳಲ್ಲಿ ಈ ತೊಂದರೆ ಕಂಡುಬಂದಿದೆ. ಒಂದು ದಿನದ ಏರ್ ಬ್ಯಾಗ್ ಉತ್ಪಾದನೆಯಲ್ಲಿ ಉಂಟಾದ ತೊಂದರೆಯು ಈ ಎರರ್ ಗೆ ಕಾರಣ" ಎಂದು ಕಂಪನಿ ಹೇಳಿದೆ.
ರಾಷ್ಟ್ರೀಯ ಹೆದ್ದಾರಿ ಸಂಚಾರಿ ಆಡಳಿತ ನೀಡಿದ ಸೂಚನೆಯ ಮೇರೆಗೆ ಈ ಕಾರುಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದೆ. ಈ ಏರ್ ಬ್ಯಾಗುಗಳ ಸ್ಟಿಚ್ಚಿಂಗ್ ಸಮರ್ಪಕವಾಗಿರದ ಹಿನ್ನಲೆಯಲ್ಲಿ ಅಪಘಾತದ ಸಂದರ್ಭಗಳಲ್ಲಿ ಅಪಾಯಕಾರಿ ಎಂದು ಹೇಳಲಾಗಿದ.ೆ
ಕಂಪನಿಯು ಒಟ್ಟು 317 ಎ6 ಕಾರುಗಳನ್ನು ಹಿಂಪಡೆಯಲಿದೆ. ಆಡಿ ಕಂಪನಿಯು ಎಡಭಾಗದ, ಬಲಭಾಗದ ಏರ್ ಬ್ಯಾಗ್ ಗಳನ್ನು ಮರುಜೋಡಿಸಲಿದೆ. ಏರ್ ಬ್ಯಾಗ್ ಮರುಜೋಡನೆ ಕಾರ್ಯ ಮೂರುಗಂಟೆಯದ್ದಾಗಿದ್ದು ಉಚಿತವಾಗಿ ಏರ್ ಬ್ಯಾಗ್ ಅಳವಡಿಸಲಿದೆ. ಅಂದಹಾಗೆ ಸದ್ಯ ಈ ಸಮಸ್ಯೆ ಕಂಡುಬಂದಿರುವುದು ಅಮೆರಿಕ ಕಾರುಗಳಲ್ಲಿ ಮಾತ್ರ.


Click it and Unblock the Notifications