ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ ಬುಕ್ ಸ್ನೇಹಿತರು

Bangalore Traffic Police facebook Page Driving Tips and Awareness
ಇದು ಸೋಷಿಯಲ್ ಮೀಡಿಯಾ ಕಾಲ. ಫೇಸ್ ಬುಕ್, ಟ್ವಿಟ್ಟರ್ ಇಲ್ಲಿ ಜನಪ್ರಿಯ. ಸಾಮಾಜಿಕ ಜಾಲತಾಣಗಳನ್ನು ಹೇಗೆ ಅತ್ಯುತ್ತಮವಾಗಿ ಬಳಕೆ ಮಾಡಬಹುದು? ಇದಕ್ಕೆ ಸೂಕ್ತ ಉದಾಹರಣೆ ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ ಬುಕ್ ಪುಟ. ಇಲ್ಲೂ ಟ್ರಾಫಿಕ್ ಜಾಮ್!

ಬೆಂಗಳೂರು ಟ್ರಾಫಿಕ್ ಪೊಲೀಸ್(ಬಿಟಿಪಿ)ರಿಗೂ ಒಂದು ಪೇಸ್ ಬುಕ್ ಪುಟವಿದೆ. ಇಲ್ಲಿ ಪ್ರತಿಪುಟದಲ್ಲೂ ಫೇಸ್ ಬುಕ್ ಸ್ನೇಹಿತರ ದೂರು, ಸಲಹೆ, ಅಹವಾಲು, ಮಾಹಿತಿ, ವಿಡಿಯೋ, ಟಿಪ್ಪಣಿಗಳು ಇರುತ್ತದೆ. ಇದಕ್ಕೆ ಸಾವಧಾನವಾಗಿ ಉತ್ತರಿಸುವ ಕಾರಣದಿಂದ ಬಿಟಿಪಿ ಪುಟ ಆಪ್ತವಾಗುತ್ತದೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿದರೆ, ಸಿಗ್ನಲ್ ಜಂಪ್ ಮಾಡಿದರೆ, ಕುಡಿದು ಚಲಾಯಿಸಿದರೆ ಫೇಸ್ ಬುಕ್ ಸ್ನೇಹಿತರು ಸುಮ್ಮನಿರುವುದಿಲ್ಲ. ಅಂತಹ ಕಾರಿನ ನಂಬರ್ ಪ್ಲೇಟ್ ಸಮೇತ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ ಬಿಟಿಪಿ ಪುಟದಲ್ಲಿ ಅಪ್ ಲೋಡ್ ಮಾಡುತ್ತಾರೆ.

ಸಂಚಾರ ನಿಯಮ ಉಲ್ಲಂಘಿಸಿದವರ ಕಾರು, ಬೈಕು ನಂಬರ್ ಉಲ್ಲೇಖಿಸಿ ಪ್ರಶ್ನಿಸುತ್ತಾರೆ. ಕೆಲವೊಮ್ಮೆ ಆ ಕಾರಿನ ಮಾಲಿಕನೇ ಇದಕ್ಕೆ ಸ್ಪಷ್ಟನೆ ನೀಡುತ್ತಾನೆ. ಸಣ್ಣ ಪುಟ್ಟ ಜಗಳಗಳೂ ಇಲ್ಲಿ ನಡೆಯುತ್ತದೆ. ಕೊನೆಗೆ ಮೇಸ್ಟ್ರು ತರಹ ಟ್ರಾಫಿಕ್ ಪೊಲೀಸ್ ಇಲ್ಲಿಗೆ ಬಂದು ಸಮರ್ಪಕ ಮಾಹಿತಿ ನೀಡುತ್ತಾರೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ.

ಟ್ರಾಫಿಕ್ ಪೊಲೀಸ್ ವೆಬ್ ಸೈಟ್ ಕೆಲಸ ಮಾಡುತ್ತಿಲ್ಲವೆಂದು ಒಬ್ಬರು ಕಾಮೆಂಟ್ ಮಾಡುತ್ತಾರೆ. ಅದಕ್ಕೆ ಬಿಟಿಪಿ ಬಂದು ಸರಿಪಡಿಸಲಾಗಿದೆ ಎಂದು ಮಾರುತ್ತರ ನೀಡುತ್ತಾರೆ. ಯಾವ ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಅತ್ಯಂತ ಎಚ್ಚರ ವಹಿಸಬೇಕು? ಎಲ್ಲಿ ಜಾಸ್ತಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತದೆ? ಇತ್ಯಾದಿ ಮಾಹಿತಿಗಳು ಇಲ್ಲಿ ಸಿಗುತ್ತವೆ.

ಕೆಲವು ಫನ್ನಿ ಅನ್ನಿಸುವ ಅಪ್ ಡೇಟ್ ಗಳು ಕಾಣಸಿಗುತ್ತವೆ. ನನ್ನಲ್ಲಿ ದುಬೈ ಡ್ರೈವಿಂಗ್ ಲೈಸನ್ಸ್ ಇದೆ. ಅದನ್ನು ಬೆಂಗಳೂರಿನಲ್ಲಿ ಉಪಯೋಗಿಸಬಹುದಾ? ಎನ್ನುವರಿದ್ದಾರೆ. ಅದಕ್ಕೆ ಮಾರುತ್ತರವಾಗಿ ಮತ್ತೊಬ್ಬ ಬಂದು ಅದನ್ನು ಅಲ್ಲೇ ಬಳಸು. ಬೆಂಗಳೂರಲ್ಲಿ ಬೇರೆ ಬಳಸು ಎಂದು ಆತನ ತಲೆಗೆ ಮೊಟಕುತ್ತಾನೆ.

ಇತ್ತೀಚೆಗೆ ಗಾರೆಬಾವಿಪಾಲ್ಯ ಜಂಕ್ಷನ್ ನಲ್ಲಿ ನಡೆದ ಅಪಘಾತದ ವಿಡಿಯೋ ತುಣುಕಿಗೆ 300ರಷ್ಟು ಪ್ರತಿಕ್ರಿಯೆಗಳು, ನೂರಾರು ಲೈಕ್ ಗಳು ಕಂಡು ಬಂದಿತ್ತು. ಸುಮಾರು ಹತ್ತು ಸಾವಿರದಷ್ಟು ಜನರು ಈ ವಿಡಿಯೋ ಹಂಚಿಕೊಂಡಿದ್ದರು. ಇದೇ ವಿಡಿಯೋ ನೆರವಿನಿಂದ ಅಪಘಾತ ನಡೆಸಿದ ಕಾರನ್ನು ಪತ್ತೆ ಹಚ್ಚಲಾಗುವುದಂತೆ.

ಫೇಸ್ ಬುಕ್ ಸ್ನೇಹಿತರು ಎಷ್ಟು ಸೂಕ್ಷ್ಮರೆಂದರೆ ಸಣ್ಣಪುಟ್ಟ ವಿಷಯಗಳನ್ನೂ ಬಿಡುವುದಿಲ್ಲ. ಜಯನಗರ ಮೂರನೇ ಬ್ಲಾಕಿನಲ್ಲಿರುವ ಸಿಗ್ನಲ್ ನಲ್ಲಿ ಟ್ರಾಫಿಕ್ ದೀಪ ಗೊಂದಲ ಉಂಟು ಮಾಡುವಂತ್ತಿದೆ ಎಂದು ಬರೆದರೆ ಅದಕ್ಕೆ ಬಿಟಿಪಿ ತಕ್ಷಣ ಮಾರುತ್ತರ ಬರೆದು ಅದನ್ನು ಪರಿಶೀಲಿಸಲಾಗುತ್ತದೆ ಎನ್ನುತ್ತಾರೆ.

ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಸಾಮಾಜಿಕ ಜಾಲತಾಣಗಳನ್ನು ಎಷ್ಟು ಉತ್ತಮವಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಇದು ಸೂಕ್ತ ಉದಾಹರಣೆ. ಸಂಚಾರಿ ನೀತಿ ನಿಯಮ ಪಾಲನೆಗೆ ಜನರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ಸೇತುವೆಯಾಗಿರುವ ಬಿಟಿಪಿ ಫ್ಯಾನ್ ಪುಟದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಲಿ ಮತ್ತು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಲಿ ಅನ್ನೋದು ಕನ್ನಡ ಡ್ರೈವ್ ಸ್ಪಾರ್ಕ್ ಆಶಯ.

More from DriveSpark

Article Published On: Monday, November 28, 2011, 11:47 [IST]
English summary
How to use social networking sites for good purpose? Bangalore Traffic Police facebook fan page a good example. Here we find traffic awareness, dialogue with People, Suggestions, Saftey driving tips etc
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+