ಬೆಂಗಳೂರು ಡ್ರಾಗ್ ಬೈಕರುಗಳಿಗೆ ಕಾದಿದೆ ಮಾರಿಹಬ್ಬ

ಈಗಾಗಲೇ ಕಳೆದ ಮೂರು ದಿನಗಳಲ್ಲಿ ಹದಿನೈದು ಜನರ ವಾಹನ ಚಾಲನೆ ಪರವಾನಿಗೆಯನ್ನು ರದ್ದುಗೊಳಿಸಲು ಸೂಚಿಸಲಾಗಿದೆಯೆಂದು ವರದಿಗಳು ಹೇಳಿವೆ. ಮೋಟರ್ ಸೈಕಲ್ ನಿಯಮ ಮತ್ತು ಕಾಯಿದೆಯ ವಿರುದ್ಧವಾಗಿ ಸಂಚಾರ ನಿಯಮ ಉಲ್ಲಂಘಿಸುವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣ ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿದೆ. 2010ರಲ್ಲಿ ಇಂತಹ 33 ಲಕ್ಷ ಪ್ರಕರಣ ದಾಖಲಾಗಿದ್ದವು. ಈ ವರ್ಷ ಈಗಾಗಲೇ 18 ಲಕ್ಷ ಪ್ರಕರಣಗಳು ದಾಖಲಾಗಿವೆ.
ಸಂಚಾರ ನಿಯಮಗಳಿಗೆ ವಿರುದ್ಧವಾಗಿ ಸ್ಟಂಟ್ ಬೈಕ್ ರೈಡ್ ಮಾಡಿದರೆ, ಕುಡಿದು ವಾಹನ ಚಲಾಯಿಸಿದರೆ, ಮೊಬೈಲ್ ಫೋನ್ ಬಳಕೆ ಮಾಡಿದರೆ, ಸಿಗ್ನಲ್ ಜಂಪ್ ಮಾಡಿದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಇಂತಹ ಚಾಲಕರ ಪರವಾನಿಗೆ ರದ್ದುಗೊಳಿಸಲು ಟ್ರಾಫಿಕ್ ಪೊಲೀಸರು ರೆಕಮಂಡ್ ಮಾಡಬಹುದು.
ಪರವಾನಿಗೆ ರದ್ದು ಮಾಡುವ ಕಾಯಿದೆ ಕುರಿತು: ವಾಹನ ಸವಾರರ ಪರವಾನಿಗೆ ರದ್ದು ಮಾಡಲು ಮೋಟರ್ ವಾಹನ ಕಾಯಿದೆಯಲ್ಲಿ ಹಲವು ಸೆಕ್ಷನ್ ಗಳಿವೆ. ಸೆಕ್ಷನ್ 20, 21 ಮತ್ತು ಸೆಕ್ಷನ್ 22ರಲ್ಲಿ ಆರೋಪ ಸಾಬೀತಾದರೆ ಆತನ ಚಾಲನೆ ಪರವಾನಿಗೆ ರದ್ದುಗೊಳಿಸುವಂತೆ ನ್ಯಾಯಾಲಯ ಆದೇಶಿಸಬಹುದು.


Click it and Unblock the Notifications








