ಅನಿಲ್ ಕಪೂರ್ ಸಿನಿಮಾ: ಬಿಎಂಡಬ್ಲ್ಯು ಡಿಶ್ಯೂಂ... ಡಿಶ್ಯೂಂ

ಕೆಲವರಿಗೆ ಮಚ್ಚುಲಾಂಗು ಸಿನಿಮಾ ಇಷ್ಟ. ಇನ್ನು ಕೆಲವರಿಗೆ ಪ್ರೀತಿ, ಪ್ರೇಮ, ಪ್ರಣಯ ಸಿನಿಮಾ ಇಷ್ಟ. ಇನ್ನು ಕೆಲವರಿಗೆ ಹಸಿಬಿಸಿ ದೃಷ್ಯಗಳಿದ್ದರೆ ಸಿನಿಮಾ ಸೂಪರ್. ಆದರೆ ಈಗ ಇವೆಲ್ಲಕ್ಕಿಂತ ಹಾರ್ಸ್ ಪವರ್ ಕಾರುಗಳು ಸಿನಿಮಾದಲ್ಲಿ ಪ್ರಮುಖ ಆಕರ್ಷಣೆ. ಇದಕ್ಕೆ ಇತ್ತೀಚೆಗೆ ತೆರೆಕಂಡ ರಾ.ಒನ್ ಒಂದು ಉದಾಹರಣೆ.

ನಾಡಿದ್ದು ಡಿಸೆಂಬರ್ 16ರಂದು ಬಹುನಿರೀಕ್ಷಿತ ಹಾಲಿವುಡ್ ಸಿನಿಮಾ ದೇಶಾದ್ಯಂತ ತೆರೆಕಾಣಲಿದೆ. ಚಿತ್ರದ ಹೆಸರು "ಮಿಷನ್ ಇಂಪಾಸಿಬಲ್: ಘೋಸ್ಟ್ ಪ್ರೊಟೊಕಾಲ್". ಇದು ಪತ್ತೆದಾರಿ, ಥ್ರಿಲ್ಲರ್ ಚಿತ್ರ. ಸಿನಿಮಾ ಹೊರತರುತ್ತಿರುವುದು ವಿಯಾಕಾಮ್ 18 ಮೋಷನ್ ಪಿಕ್ಚರ್ಸ್.

ತಾರಾಗಣದಲ್ಲಿ ಹಾಲಿವುಡ್ ನಟರಾದ ಟೋಮ್ ಕ್ರೂಸ್, ಪೌಲಾ ಪಾಟನ್ ಮತ್ತು ಅನಿಲ್ ಕಪೂರ್ ಮತ್ತಿತ್ತರರು ಪ್ರಮುಖ ಆಕರ್ಷಣೆ. ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಈ ಚಿತ್ರದೊಂದಿಗೆ ಬಿಎಂಡಬ್ಲ್ಯು ಇಂಡಿಯಾ ನಂಟಿದೆ. ರಾ.ಒನ್ ಸಿನಿಮಾದಲ್ಲಿ ಫೋಕ್ಸ್ ವ್ಯಾಗನ್ ಮಿಂಚಿದ ಹಾಗೇ ಇಂಪಾಸಿಬಲ್ ಸಿನಿಮಾದಲ್ಲಿ ಬಿಎಂಡಬ್ಲ್ಯು ಕಾರುಗಳು ಇರಲಿವೆ.

ಇತ್ತೀಚೆಗೆ ನಡೆದ ಮಿಷನ್ ಇಂಪಾಸಿಬಲ್ ಘೋಸ್ಟ್ ಪ್ರೊಟೊಕಾಲ್ ಚಲನಚಿತ್ರದ ಸಮಾರಂಭವೊಂದರಲ್ಲಿ ಸುಮಾರು 400 ಬಿಎಂಡಬ್ಲ್ಯು ಕಾರುಗಳು ಭಾಗವಹಿಸಿದವು. ಈ ಕಾರ್ಯಕ್ರಮದಲ್ಲಿ ಟೋಮ್ ಕ್ರೂಸ್, ಪೌಲಾ ಪಾಟನ್ ಮತ್ತು ಅನಿಲ್ ಕಪೂರ್ ಮಾತ್ರವಲ್ಲದೇ ಸಿನಿಮಾದ ನಿರ್ಮಾಪಕ ಬ್ರೆಯನ್ ಬರ್ಕ್ ಕೂಡ ಭಾಗವಹಿಸಿದರು.

ಈ ಪತ್ತೆದಾರಿ ರೋಮಾಂಚಕ ಸಿನಿಮಾದಲ್ಲಿ ನೂತನ ಬಿಎಂಡಬ್ಲ್ಯು 6 ಸೀರಿಸ್ ಮತ್ತು ಇತರ ಮಾಡೆಲ್ ಕಾರುಗಳು ಇರಲಿವೆಯೆಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷರಾದ ಡಾ. ಆಂಡ್ರಿಯಸ್ ಸ್ಕಾಫ್ ಹೇಳಿದ್ದಾರೆ. ಇದರಲ್ಲಿ ಬಿಎಂಡಬ್ಲ್ಯು ವಿಷನ್ ಎಂಬ ಕಾನ್ಸೆಪ್ಟ್ ಕಾರು ಕೂಡ ಇರಲಿದೆಯಂತೆ.

ಮಿಷನ್ ಇಂಪಾಸಿಬಲ್ ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ನೂರಾರು ಬಿಎಂಡಬ್ಲ್ಯು ಕಾರು ಮಾಲಿಕರು ಭಾಗವಹಿಸಿದ್ದು ವಿಶೇಷ. ಟಾಮ್ ಕ್ರೂಷ್ ರ ಸೆನ್ಷೆಷನ್ ಸಿನಿಮಾ "ಮಿಷನ್ ಇಂಪಾಸಿಬಲ್: ಘೋಸ್ಟ್ ಪ್ರೊಟೊಕಾಲ್" ನಲ್ಲಿ ಬಿಎಂಡಬ್ಲ್ಯು ಕಂಪನಿಯ ಪ್ರಮುಖ ಕಾರುಗಳು ಸಿನಿಮಾ ವೀಕ್ಷಕರಿಗೆ ಅತ್ಯುತ್ತಮ ಮನರಂಜನೆ ನೀಡುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಮಿಷನ್ ಇಂಪಾಸಿಬಲ್ ಸಿನಿಮಾ ದೇಶಾದ್ಯಂತ ಡಿಸೆಂಬರ್ 16ರಂದು ತೆರೆಕಾಣಲಿದೆ. ಬಿಎಂಡಬ್ಲ್ಯು ಕಾರು ಪ್ರೇಮಿಗಳು ಈ ಸಿನಿಮಾದಲ್ಲಿ ತಮ್ಮ ಅಚ್ಚುಮೆಚ್ಚಿನ ಕಂಪನಿಯ ಕಾರುಗಳನ್ನು ಕಣ್ತುಂಬಿಕೊಳ್ಳಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, December 8, 2011, 11:44 [IST]
English summary
BMW India, co-hosted the official fan screening of Hollywood’s movie “Mission Impossible: Ghost Protocol”. Tom Cruise along Paula Patton and Anil Kapoor welcomed around 400 BMW patrons on the occasion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+