ಅನಿಲ್ ಕಪೂರ್‌ಗೆ ಅಜಯ್ ದೇವಗನ್ ಚಾಲೆಂಜ್
ಮಹಿಳೆಯರು ಹರಟೆ ಹೊಡೆಯುವಾಗ ಸೀರೆ, ಬಂಗಾರ, ಫ್ಯಾಷನ್ ಇತ್ಯಾದಿಗಳ ಬಗ್ಗೆ ಹೆಚ್ಚು ಮಾತನಾಡುತ್ತಾರಂತೆ. ಅದೇರೀತಿ ಪುರುಷರು ಕಾರು ಬೈಕುಗಳ ಕುರಿತು ಮಾತನಾಡುವುದು ಹೆಚ್ಚಂತೆ. ಇದೇ ರೀತಿ ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ನಡುವಿನ ಹರಟೆ ಹೊಸ ಫೈಟಿಗೆ ದಾರಿಯಾಗಿದೆ.
ಇತ್ತೀಚೆಗೆ ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ರೆಸ್ಟೋರೆಂಟೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಮಾತಿನಲ್ಲೂ ತಾನು ಮೇಲು ಎಂಬ ಅಹಂ ಇದ್ದಿರಬೇಕು. ಇಂತಹ ಸಮಯದಲ್ಲಿ ವಿಷಯ ಕಾರುಗಳತ್ತ ತಿರುಗಿತ್ತು.
ಕಾರುಶೋಕಿಯಲ್ಲಿ ಇಬ್ಬರೂ ಮುಂದಿದ್ದಾರೆ. ಇಬ್ಬರಲ್ಲೂ ಐಷಾರಾಮಿ, ಸೂಪರ್ ಕಾರುಗಳಿವೆ. ಹರಟೆ ಹೊಡೆಯುತ್ತ ಇರುವಾಗ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ಫಾರ್ಮುಲಾ ಒನ್ ಟ್ರಾಕ್‌ನಲ್ಲಿ ಟ್ರಾಕ್ ಡೇ ಆರಂಭಿಸಿರುವ ಕುರಿತು ಮಾತನಾಡಿದ್ದಾರೆ.
ಇಬ್ಬರೂ ತಮ್ಮಲ್ಲಿರುವ ಕಾರುಗಳ ಕುರಿತು ಪೌರುಷ ಕೊಚ್ಚಿಕೊಳ್ಳುತ್ತಿದ್ದರು. ಎಫ್1 ಟ್ರಾಕ್‌ನಲ್ಲಿ ಒಂದು ಕೈನೋಡೋಣವೆಂದು ಅಜಯ್ ದೇವಗನ್ ಚಾಲೆಂಜ್ ಮಾಡಿದ್ರು. ಅಜಯ್ ಚಾಲೆಂಜಿಗೆ ಅನಿಲ್ ಓಕೆ ಎಂದಿದ್ದಾರೆ. ಇಬ್ಬರ ನಡುವೆ ಹೊಸ ರೇಸಿಂಗ್ ಫೈಟ್ ಆರಂಭವಾಗಲಿದೆ.
ತಮ್ಮಲ್ಲಿರುವ ಲಂಬೊರ್ಗಿನಿ ಕಾರುಗಳ ಮೂಲಕ ಇವರಿಬ್ಬರು ರೇಸ್ ಮಾಡಲಿದ್ದಾರೆ. ಅಜಯ್ ದೇವಗನ್ ಬಳಿ ಹಳದಿ ಬಣ್ಣದ ಲಂಬೊರ್ಗಿನಿ ಮತ್ತು ಅನಿಲ್ ಕಪೂರ್ ಬಳಿ ಸಿಲ್ವರ್ ಬಣ್ಣದ ಲಂಬೊರ್ಗಿನಿ ಕಾರಿದೆ.
ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ಕಳೆದ ವರ್ಷ ಉದ್ಘಾಟನೆಗೊಂಡಿತ್ತು. ನಂತರ ಶೀಘ್ರದಲ್ಲಿ ಇದು ಸಾರ್ವಜನಿಕರಿಗೂ ಮುಕ್ತವಾಗಿತ್ತು. ಜೆಪಿ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್ ಏಪ್ರಿಲ್ 22ರಿಂದ ಟ್ರಾಕ್ ಡೇ ಆರಂಭಿಸಿದೆ.


Click it and Unblock the Notifications









