ಸ್ಕಾರ್ಪಿಯೊಗೆ ಕೊಕ್; ಸಿಂಗಂ ರಿಟರ್ನ್ಸ್‌ನಲ್ಲಿ ಸಫಾರಿ ಸವಾರಿ
ಮುಂಬರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ 'ಸಿಂಗಂ ರಿಟರ್ಟ್ಸ್'ನಲ್ಲಿ ಸಾಲು ಸಾಲು ಟಾಟಾ ಕಾರುಗಳ ದರ್ಶನವಾಗಲಿದೆ. ಹೌದು, ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ರಿಟರ್ನ್ಸ್‌ನಲ್ಲಿ ಟಾಟಾದ ಜನಪ್ರಿಯ ಆವೃತ್ತಿಗಳಾದ ಸಫಾರಿ ಸ್ಟ್ರೋಮ್, ಸುಮೋ, ಆರಿಯಾ, ಸುಮೋ ಗ್ರಾಂಡ್, ಕ್ಸೆನಾನ್ ಅಷ್ಟೇ ಯಾಕೆ ನ್ಯಾನೋ ಕಾರುಗಳು ಸಹ ಕಾಣಿಸಿಕೊಳ್ಳಲಿದೆ.
ಮೂಲತ: ತಮಿಳು ಚಿತ್ರವಾಗಿರುವ ಸೂರ್ಯ ಅಭಿನಯದ 'ಸಿಂಗಂ' ಬಾಲಿವುಡ್ ರಿಮೇಕ್ ಚಿತ್ರದಲ್ಲಿ ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಲಭಿಸಿರುವ ಭರ್ಜರಿ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಎರಡನೇ ಅವತರಣಿಕೆ ಬಿಡುಗಡೆ ಮಾಡಲು ಚಿತ್ರತಂಡ ತಯಾರಾಗಿ ನಿಂತಿದೆ.

ಇದರೊಂದಿಗೆ ಮಹೀಂದ್ರ ಸ್ಕಾರ್ಪಿಯೊ ಕಾರುಗಳಿಗೆ ಭಾರಿ ಹಿನ್ನಡೆಯಲಾಗಲಿದೆ. ಸಿಂಗಂ ರಿಟರ್ನ್ಸ್ ಚಿತ್ರವು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2014 ಆಗಸ್ಟ್ 15 ರಂದು ತೆರೆ ಕಾಣಲಿದೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ನಿರ್ದೇಶಕ ರೋಹಿತ್ ಶೆಟ್ಟಿ, 'ನಾಯಕ ಅಜಯ್ ದೇವಗನ್ ಮಗದೊಮ್ಮೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟಾಟಾ ಮೋಟಾರ್ಸ್ ವಾಹನಗಳನ್ನು ಸಹ ಬಳಕೆ ಮಾಡಲಾಗಿದೆ' ಎಂದಿದ್ದಾರೆ.


Click it and Unblock the Notifications








