ಆರ್ಮಿ ಪರೀಕ್ಷೆ ಪಾಸ್ ಮಾಡಿದ ಸಫಾರಿ ಸ್ಟ್ರೋಮ್, ಸ್ಕಾರ್ಪಿಯೊ

Written By:

ಭಾರತೀಯ ಸೇನೆಯು ಹೊಸತಾದ ಟೆಂಡರ್ ಕರೆದಿದ್ದು, ಇದರಂತೆ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಹಾಗೂ ಮಹೀಂದ್ರ ಸ್ಕಾರ್ಪಿಯೊ ಯಶಸ್ವಿಯಾಗಿದೆ.

ವಾಹನ ವಿತರಣೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಹೊಸ ಬಿಡ್ ಕರೆಯಲಿರುವ ಭಾರತೀಯ ಸೇನೆಯು 500 ಕೋಟಿ ರು.ಗಳಿಂದ 750 ಕೋಟಿ ರು.ಗಳ ವರೆಗಿನ ಒಪ್ಪಂದಕ್ಕೆ ಸಹಿ ಹಾಕಲಿದೆ.

tata safari storme

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇದುವರೆಗೆ ಸೇನೆಯು ಮಾರುತಿ ಸುಜುಕಿ ಜಿಪ್ಸಿ ಹಾಗೂ ಮಹೀಂದ್ರ ಕಮಾಂಡರ್ ವಾಹನಗಳನ್ನು ಬಳಕೆ ಮಾಡಲಾಗಿತ್ತು. ಆದರೆ ಇವೆರಡು ಗರಿಷ್ಠ 500 ಕೆ.ಜಿ ಭಾರವನ್ನಷ್ಟೇ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿತ್ತು.

ಆದರೆ ಸೈನ್ಯಯು ಈಗ ಜನರಲ್ ಸರ್ವೀಸ್ ಭಾಗವಾಗಿ 800 ಕೆ.ಜಿ ಭಾರವನ್ನು ಹೊತ್ತುಕೊಂಡು ಹೋಗುವ ವಾಹನಗಳ ಹುಡುಕಾಟದಲ್ಲಿದೆ. ಇದರಂತೆ ಎರಡು ವರ್ಷಗಳ ಹಿಂದೆಯೇ ಫೋರ್ಡ್, ಹೋಂಡಾ, ಟೊಯೊಟಾ ಸೇರಿದಂತೆ 15 ಸಂಸ್ಥೆಗಳು ಪ್ರಾರಂಭಿಕ ಮಾತುಕತೆಯಲ್ಲಿ ಭಾಗಿಯಾಗಿದ್ದರೂ ಕೇವಲ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರ ಆಂಡ್ ಮಹೀಂದ್ರ ಕೊನೆಯ ಹಂತದ ವರೆಗೂ ತಲುಪುವಲ್ಲಿ ಯಶ ಕಂಡಿದೆ.

mahindra scorpio

ಸೈನ್ಯವು ಎಸಿ ಹಾಕಿಸಿ ಗರಿಷ್ಠ 800 ಕೆ.ಜಿ ಭಾರವನ್ನು ಸಾಗಿಸುವ ವಾಹನಗಳನ್ನು ಎದುರು ನೋಡುತ್ತಿದೆ. ಹಾಗೊಂದು ವೇಳೆ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾದ್ದಲ್ಲಿ ಟಾಟಾ ಹಾಗೂ ಮಹಿಂದ್ರ ಪಾಲಿಗಿದು ದೊಡ್ಡ ಯಶಸ್ಸನ್ನು ನೀಡಲಿದೆ.

English summary
The Safari Storme and Scorpio have passed the rigorous tests conducted by the Indian Army. Now these manufacturers can place their tenders and the officials will decide what is best for them.
Story first published: Thursday, January 22, 2015, 17:05 [IST]
Please Wait while comments are loading...

Latest Photos