ಹೊಸ ಸ್ವರೂಪದಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಎಂಟ್ರಿ

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹೊಸ ಸ್ವರೂಪದ ಸಫಾರಿ ಸ್ಟ್ರೋಮ್ ಕಾರನ್ನು ಬಿಡುಗಡೆಗೊಳಿಸಿದೆ. ಸಂಸ್ಥೆಯ ಕ್ರಾಂತಿಕಾರಿ ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದ ಪ್ರಕಾರ ಹೊಸ ಕಾರಿನಲ್ಲಿ ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ನೀತಿಯನ್ನು ಅನುಸರಿಸಲಾಗಿದೆ.

ಆಲ್ ನ್ಯೂ ಟಾಟಾ ಸಫಾರಿ ಸ್ಟ್ರೋಮ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಪ್ರಾರಂಭಿಕ ಬೆಲೆ 10.42 ಲಕ್ಷ ರು.ಗಳಾಗಿರಲಿದ್ದು, ಟಾಪ್ ಎಂಡ್ ವೆರಿಯಂಟ್ 14.65 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಕ್ಸ್ ಶೋ ರೂಂ ಮುಂಬೈ). ಈ ಮೂಲಕ ದೇಶದ ಜನಪ್ರಿಯ ಸಂಸ್ಥೆಯು ತನ್ನೆಲ್ಲ ಮಾದರಿಗಳಿಗೆ ಹೊಸ ಸ್ಪರ್ಶವನ್ನು ನೀಡುವ ಪ್ರಯತ್ನದಲ್ಲಿದೆ [ನ್ಯಾನೋ ಜೆನ್ ಎಕ್ಸ್ ಈಸಿ ಶಿಫ್ಟ್ - ನಿಮಗೆ ಗೊತ್ತಿರದ ಅಂಶಗಳು].

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಆಲ್ ನ್ಯೂ ಟಾಟಾ ಸಫಾರಿ ಸ್ಟ್ರೋಮ್, 2.2 ಲೀಟರ್ ವ್ಯಾರಿಕೋರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 150 ಅಶ್ವಶಕ್ತಿ ಉತ್ಪಾದಿಸಲಿದೆ. ಹಿಂದಿನ ಮಾದರಿಯು 138 ಪಿಎಸ್ ಮಾತ್ರ ಶಕ್ತಿ ಉತ್ಪಾದಿಸುತ್ತಿತ್ತು ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ. ಹಾಗೆಯೇ 320 ತಿರುಗುಬಲದ ಜೊತೆಗೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ವಿಶೇಷತೆ

ವಿಶೇಷತೆ

ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಭಾಗವಾಗಿ ನೂತನ ಸಫಾರಿ ಸ್ಟ್ರೋಮ್ ನಲ್ಲಿ ಹರ್ಮಾನ್‌ನ ಮಾಹಿತಿ ಮನರಂಜನಾ ವ್ಯವಸ್ಥೆಯು ಕಂಡುಬರಲಿದೆ. ಇದರಲ್ಲಿ ಎಲ್ ಸಿಡಿ ಸ್ಕ್ರೀನ್, ಬ್ಲೂಟೂತ್, ಐಪಾಡ್-ಇನ್, ಯುಎಸ್ ಬಿ-ಇನ್, ಆಕ್ಸ್-ಇನ್, ಸಿಡಿ, ಎಫ್‌ಎಂ ಪ್ಲೇಯರ್, ಆರು ಸ್ಪೀಕರುಗಳ ಜೊತೆಗೆ ಸ್ಟೀರಿಂಗ್ ಮೌಂಟೆಡ್ ನಿಯಂತ್ರಣ ವ್ಯವಸ್ಥೆಯಿರಲಿದೆ.

ವಿನ್ಯಾಸ

ವಿನ್ಯಾಸ

ಫೇಸ್ ಲಿಫ್ಟ್ ಭಾಗವಾಗಿ ಕಾರಿನ ಹೊರಮೈ ವಿನ್ಯಾಸದಲ್ಲೂ ಕೆಲವೊಂದು ಬದಲಾವಣೆ ಕಾಣಬಹುದಾಗಿದೆ. ಇದು ಕಾರಿಗೆ ತಾಜಾ ನೋಟ ಪ್ರದಾನ ಮಾಡುತ್ತದೆ. ಕಾರಿನ ಒಳಗಡೆಯೂ ನಿಮಗಿದು ಭಾಸವಾಗಲಿದೆ.

ವೆರಿಯಂಟ್

ವೆರಿಯಂಟ್

  • ಎಲ್ ಎಕ್ಸ್ (4x2)
  • ಇಎಕ್ಸ್ (4x2)
  • ವಿಎಕ್ಸ್ (4x2
  • ವಿಎಕ್ಸ್ (4x4)
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

    • ಎಲ್ ಎಕ್ಸ್ (4x2): 10.42 ಲಕ್ಷ ರು.
    • ಇಎಕ್ಸ್ (4x2): 11.67 ಲಕ್ಷ ರು.
    • ವಿಎಕ್ಸ್ (4x2: 13.28 ಲಕ್ಷ ರು.
    • ವಿಎಕ್ಸ್ (4x4): 14.65 ಲಕ್ಷ ರು.
    • ಸುರಕ್ಷತೆ

      ಸುರಕ್ಷತೆ

      • ಎಬಿಎಸ್ ಜೊತೆ ಇಬಿಡಿ,
      • ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್,
      • ಬಾಗಿಕೊಳ್ಳಬಹುದಾದ ಸ್ಟೀರಿಂಗ್ ಅಂಕಣ,
      • ಎಂಜಿನ್ ಇಂಮೊಬಿಲೈಝರ್
      • ಬಣ್ಣಗಳು

        ಬಣ್ಣಗಳು

        • ಆರ್ಕಟಿಕ್ ಸಿಲ್ವರ್,
        • ಅರ್ಬರ್ ಬ್ರಾನ್ಝ್,
        • ಪಿಯರ್ಲ್ ವೈಟ್,
        • ಆಸ್ಟರ್ನ್ ಬ್ಲ್ಯಾಕ್,
        • ಆರ್ಕಟಿಕ್ ವೈಟ್.
        • ಆಲ್ ನ್ಯೂ ಟಾಟಾ ಸಫಾರಿ ಸ್ಟ್ರೋಮ್ ಬಿಡುಗಡೆ

          ಇನ್ನು ಹೊಸ ಸಫಾರಿ ಸ್ಟ್ರೋಮ್ ಕಾರಿಗೆ ಮೂರು ವರ್ಷಗಳ ಅಥವಾ 1,00,000 ಲಕ್ಷ ಕೀ.ಮೀ.ಗಳ ವಾರಂಟಿ ಸೇವೆಯೂ ಲಭ್ಯವಿರಲಿದೆ.

More from DriveSpark

Article Published On: Tuesday, June 2, 2015, 15:09 [IST]
English summary
Tata Motors is revamping their line of vehicles in the Indian market. The Indian manufacturer recently launched its new GenX Nano. They have now launched their new Safari Storme in India based on their philosophy of ConnectNext and DriveNext.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+