ಸದ್ಯದಲ್ಲೇ ಟಾಟಾ ಸಫಾರಿ ಸ್ಟ್ರೋಮ್ ಫೇಸ್‌ಲಿಫ್ಟ್ ಬಿಡುಗಡೆ
ದೇಶದ ಅತ್ಯಂತ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ಶೀಘ್ರದಲ್ಲೇ ತನ್ನ ಅತ್ಯಂತ ಜನಪ್ರಿಯ ಸಫಾರಿ ಸ್ಟ್ರೋಮ್ ಫೇಸ್‌ಲಿಫ್ಟ್ ಎಸ್‌ಯುವಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಬಲ್ಲ ಮೂಲಗಳ ಪ್ರಕಾರ 2014 ಸಫಾರಿ ಸ್ಟ್ರೋಮ್ ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಸಂಸ್ಥೆಯು ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ತರಲಿದೆ. ಪರಿಷ್ಕೃತ ಟಾಟಾ ಸಫಾರಿ ಸ್ಟೋಮ್ ಕಾರಿನ ಹೊರ ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಫ್ರಂಟ್ ಬಂಪರ್ ಮತ್ತು ಹೊಸ ಹನಿಕೊಂಬ್ ಗ್ರಿಲ್ ಪಡೆಯಲಿದೆ.

ಇನ್ನು ಕಾರಿನೊಳಗೆ ನೂತನ ಮಾಹಿತಿ ಮನರಂಜನಾ ವ್ಯವಸ್ಥೆಯು ಲಭ್ಯವಾಗಲಿದೆ. ಇನ್ನುಳಿದಂತೆ ಮೂರನೇ ಸಾಲಿನಲ್ಲಿ 'ಫೇಸ್ ಟು ಫೇಸ್' ಆಸನ ವ್ಯವಸ್ಥೆ ಕಾಣಬಹುದಾಗಿದೆ.
ಇವೆಲ್ಲದಕ್ಕಿಂತಲೂ ಮಿಗಿಲಾಗಿ ಹೆಚ್ಚು ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಟರ್ಬೊ ಎಂಜಿನ್ ಜೋಡಣೆ (6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್) ಮಾಡುವ ಸಾಧ್ಯತೆಯಿದೆ. ಪರಿಷ್ಕೃತ ಆರಿಯಾ ಕ್ರಾಸೋವರ್‌ನಲ್ಲೂ ಇದಕ್ಕೆ ಸಮಾನವಾದ ಎಂಜಿನ್ ಲಭ್ಯವಿದ್ದು, 148 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.
ಅಂತಿಮವಾಗಿ ನಮಗೆ ಲಭಿಸಿದ ಮಾಹಿತಿಗಳು ಸರಿಯಾದ್ದಲ್ಲಿ ಸ್ಮರ್ಧಾತ್ಮಕ ದರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟಾಟಾ ಸಫಾರಿ ಸ್ಟ್ರೋಮ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬರಲಿದೆ. ಈಗಿರುವ ಮಾದರಿವು 9.93 ಲಕ್ಷ ರು.ಗಳಿಂದ 13.70 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.


Click it and Unblock the Notifications








