ಉಪಸಂಹಾರ: ಬಣ್ಣದಿಂದ ಹಣೆಬರಹ ಬದಲಾಗಬಹುದೇ?

ಬಣ್ಣ ಮತ್ತು ಕಾರು ಜೊತೆಯಾಗಿ ಅದರ ಮಾಲಿಕರ ಭವಿಷ್ಯ ಹೇಳುತ್ತದೆ. ಆದರೆ ಕಾರಿನ ಬಣ್ಣ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ. ನೀವು ಶ್ರೀಮಂತ ವ್ಯಕ್ತಿಯಾಗಬೇಕೆಂದು ಬಯಸಿ ಸಾಲ ಮಾಡಿ ಕೆಂಪು ಕಾರು ಖರೀದಿಸಬೇಕೆಂದಿಲ್ಲ. ಯಾಕೆಂದರೆ ಇದರಿಂದ ನಿಮ್ಮ ಇದ್ದ ಪರಿಸ್ಥಿತಿ ಬದಲಾಗದು.
ನೀವು ತೆಳು ಕಪ್ಪು ಬಣ್ಣದ ಕಾರು ಖರೀದಿಸಿದರೆ ಕಾನ್ಫಿಡೆಂಟ್ ಹೊಂದುವಿರಿ ಎಂದಲ್ಲ. ಆದರೆ ಈ ಲೇಖನದ ಅರಿವಿಲ್ಲದೇ ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಖರೀದಿಸಿದ ಕಾರು ಗ್ರಾಹಕರೆಲ್ಲ ತಮ್ಮ ಕಾರಿನ ಬಣ್ಣವನ್ನು ನೋಡಿಕೊಳ್ಳಬಹುದು. ಇಲ್ಲಿ ತಿಳಿಸಿದ ಭವಿಷ್ಯ ನಿಮಗೆ ಸೂಕ್ತವಾಗಿದೆಯೇ ಪರಿಶೀಲಿಸಬಹುದು. ಬಣ್ಣದ ಸವಾರಿಗೆ ಶುಭಂ. ಸರ್ವರಿಗೂ ಒಳಿತಾಗಲಿ.


Click it and Unblock the Notifications








