ಪೆಟ್ರೊಲ್ ಯಾರಿಗೆ ಬೇಕು? ಇನ್ನು ಡೀಸಲ್ ಕಾರು ಜಮಾನ

ಈ ಕುರಿತು ಮಾರುತಿ ಸುಜುಕಿ ಇಂಡಿಯಾದ ಎಂಡಿ ಶಶಾಂಕ್ ಶ್ರೀವಾತ್ಸವ್ ಹೇಳೋದು ಹೀಗೆ. ಈಗ ಪೆಟ್ರೊಲ್ ಆವೃತ್ತಿಗಳಿಗೆ ಹೋಲಿಸಿದರೆ ಡೀಸಲ್ ಕಾರುಗಳು ಕಡಿಮೆ ಇವೆ. ಎಲ್ಲಾದರೂ ಪೆಟ್ರೊಲ್ ಕಾರುಗಳಷ್ಟೇ ಡೀಸಲ್ ಕಾರುಗಳೂ ಲಭ್ಯವಿದ್ದರೆ ಡೀಸಲ್ ಕಾರುಗಳ ಮಾರಾಟವೇ ಹೆಚ್ಚಾಗುತ್ತಿತ್ತು ಎನ್ನುತ್ತಾರೆ. ಮಾರುತಿ ಸ್ವಿಫ್ಟ್, ಡಿಜೈರ್, ಪೊಲೊ ಮತ್ತು ಫಿಗೊ ಡೀಸಲ್ ಆವೃತ್ತಿಗಳಿಗೆ ಬೇಡಿಕೆ ಏರಿಕೆ ಕಾಣುತ್ತಿದೆ.
ಕಳೆದ 2-3 ವರ್ಷ ಹಿಂದಕ್ಕೆ ಹೋಲಿಸಿದರೆ ಈಗ ಡೀಸಲ್ ಕಾರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ ಎಂದು ಫೋಕ್ಸ್ ವ್ಯಾಗನ್ ಪ್ರಯಾಣಿಕ ಕಾರು ಮಾರಾಟ ವಿಭಾಗದ ನಿರ್ದೇಶಕ ನೀರಜ್ ಗಾರ್ಗ್ ಹೇಳುತ್ತಾರೆ. ಕಂಪನಿಯ ಪೊಲೊ ಹ್ಯಾಚ್ ಬ್ಯಾಕ್ ಮತ್ತು ವೆಂಟೊ ಸೆಡಾನ್ ಡೀಸಲ್ ಕಾರುಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ ಎಂದರು.
ಮಾರುತಿ, ಜನರಲ್ ಮೋಟರ್ಸ್ ಮತ್ತು ಫೋರ್ಡ್ ಕಂಪನಿಗಳಂತೆ ಹ್ಯುಂಡೈ ಕೂಡ ಡೀಸಲ್ ಎಂಜಿನ್ ಘಟಕ ನಿರ್ಮಿಸುತ್ತಿದೆ. ಆದರೆ ಹ್ಯುಂಡೈ ಇಂಡಿಯಾ ನಿರ್ದೇಶಕ ಅರವಿಂದ್ ಸಕ್ಸೆನಾ ಡೀಸಲ್ ಕಾರುಗಳು ಭಾರಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುದನ್ನು ಒಪ್ಪುವುದಿಲ್ಲ. ಮುಂದಿನ 3-4 ವರ್ಷಗಳಲ್ಲಿ ಡೀಸಲ್ ಕಾರುಗಳಿಗೆ ಶೇ. 5-7ರಷ್ಟು ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಅವರದ್ದು.
ಒಂದೆಡೆ ಪೆಟ್ರೊಲ್ ದರಗಳು ಗಗನಕ್ಕೆ ನೆಗೆಯುತ್ತಿರುವುದು. ಇನ್ನೊಂದೆಡೆ ಡೀಸಲ್ ಕಾರುಗಳಲ್ಲಿನ ಆಕರ್ಷಕ ಫೀಚರ್ ಗಳು. ಮೈಲೇಜ್, ಹಾರ್ಸ್ ಪವರ್ ಗಳು, ಪೆಟ್ರೊಲ್ ಮತ್ತು ಡೀಸಲ್ ಕಾರುಗಳ ದರಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದು ಜನರು ಡೀಸಲ್ ಎಂಜಿನ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.


Click it and Unblock the Notifications








