ಕಳ್ಳರ ಭಯವಿಲ್ಲ: ಡಿಜಿಟಲ್ ಬೈಕ್ ಲಾಕ್ ಸಿಸ್ಟಮ್

Posted By: * ಶರವಣ ರಾಜನ್
Digital Bike Locking System To Prevent Robbery
ಪ್ರಪಂಚದಲ್ಲಿ ಒಂದೇ ಮುಖ ಚರ್ಯೆಯ 7 ಜನರಿರುತ್ತಾರಂತೆ. ಅದೇ ರೀತಿ ಕೆಲವು ಬೈಕ್ ಕೀಲಿಕೈ ಕೂಡ ಕೆಲವೊಮ್ಮೆ ಒಂದೇ ರೀತಿ ಇರುತ್ತವೆ. ಕೀ ಮೇಕರ್ಸ್ ಹೇಳುವ ಪ್ರಕಾರ ಒಂದು ಬೈಕಿನ ಕೀ ಇನ್ನೊಂದಕ್ಕೆ(100 ಬೈಕ್ ಗಳಲ್ಲಿ ಯಾವುದಕ್ಕಾದರೂ ಒಂದಕ್ಕೆ) ಆಗುತ್ತದೆಯಂತೆ!

ಇದೇ ಕಾರಣಕ್ಕೆ ನಗರಗಳಲ್ಲಿ ಬೈಕ್ ಕಳ್ಳತನಗಳು ಹೆಚ್ಚಾಗುತ್ತವೆ. ಮಾಸ್ಟರ್ ಕೀ ಬಳಸಿ ಬೈಕ್ ಕಳ್ಳತನ ಮಾಡುವ ಗ್ಯಾಂಗ್ ಗಳೇ ಇವೆ. ಇಂತಹ ಬೈಕ್ ಕಳ್ಳರಿಂದ ಬೈಕ್ ರಕ್ಷಿಸಿಕೊಳ್ಳುವುದು ನಿಜಕ್ಕೂ ಸವಾಲು. ಇದಕ್ಕೆ ಪರಿಹಾರವನ್ನು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಂಡುಹಿಡಿದಿದ್ದಾನೆ.

ತಮಿಳುನಾಡಿನ ಧನಲಕ್ಷ್ಮಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಕಾರ್ತಿಕ್ ಡಿಜಿಟಲ್ ಬೈಕ್ ಲಾಕಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದಾನೆ. ಇದನ್ನು ಪಾಸ್ ವರ್ಡ್ ಮೂಲಕ ಓಪನ್ ಮಾಡಬೇಕು. ಕಳ್ಳರು ಎಷ್ಟು ತಿಪ್ಪರಲಾಗ ಹಾಕಿದರೂ ಬೈಕ್ ಕೀಲಿಕೈ ತೆರೆಯಲು ಸಾಧ್ಯವಿಲ್ಲವಂತೆ.

ಈ ಡಿಜಿಟಲ್ ಬೈಕ್ ಲಾಕಿಂಗ್ ಸಿಸ್ಟಮ್ ಎರಡು ಪ್ರಮುಖ ಕಾರ್ಯ ಮಾಡುತ್ತದೆ. ಇದನ್ನು ಬಳಸಿ ಬೈಕ್ ಲಾಕ್ ಮಾಡಿದಾಗ ಎಂಜಿನ್ ಗೆ ಇಂಧನ ಹರಿವು ನಿಲ್ಲುತ್ತದೆ ಮತ್ತು ಸ್ಪಾರ್ಕ್ ಪ್ಲಗ್ ಡಿಆಕ್ಟಿವೇಟ್ ಮಾಡುತ್ತದೆ. ಇದರಿಂದ ಎಂಜಿನ್ ಸ್ಟಾರ್ಟ್ ಆಗುವುದಿಲ್ಲ, ಕಳ್ಳರಿಗೆ ಕದಿಯಲು ಸಾಧ್ಯವಿಲ್ಲ. (ಇಡೀ ಬೈಕನ್ನು ಹೊತ್ತುಕೊಂಡು ಹೋಗಬೇಕಷ್ಟೇ!).

ಬೈಕ್ ಕದಿಯಲು ಯಾರಾದರೂ ಯತ್ನಿಸಿದರೆ ಇದರಲ್ಲಿರುವ ಅಲಾರಂ ಕೂಡ ಕೂಗಿಕೊಳ್ಳುತ್ತದೆ.ಇದರಲ್ಲಿರುವ ಡಿಜಿಟಲ್ ಸಿಸ್ಟಮ್ ಗೆ ಸರಿಯಾದ ಪಾಸ್ ವರ್ಡ್ ನೀಡಿದರೆ ಮಾತ್ರ ಅಲಾರಂ ಸದ್ದು ನಿಲ್ಲುತ್ತದೆ. ಡಿಜಿಟಲ್ ಬೈಕ್ ಲಾಕಿಂಗ್ ಸಿಸ್ಟಮ್ ಗೆ ಕಾಪಿರೈಟ್ ಪಡೆಯಲು ಕಾರ್ತಿಕ್ ಪ್ರಯತ್ನಿಸುತ್ತಿದ್ದಾನೆ.

ಇದು ದುಬಾರಿಯಲ್ಲ. ಇದರ ದರ ಸುಮಾರು 700 ರುಪಾಯಿ. ಹೆಚ್ಚು ಸಂಖ್ಯೆಯಲ್ಲಿ ಇದನ್ನು ಉತ್ಪಾದಿಸಿದರೆ ಇದರ ಉತ್ಪಾದನಾ ವೆಚ್ಚ ಕಡಿಮೆಯಾಗಿ ಕಡಿಮೆ ದರಕ್ಕೆ ದೊರಕಲಿದೆ. ಸದ್ಯ ಕಾರ್ತಿಕ್ ಈ ತಂತ್ರಜ್ಞಾನಕ್ಕೆ ಮಾರುಕಟ್ಟೆ ವಿಸ್ತರಿಸಲು ಶ್ರಮಿಸುತ್ತಿದ್ದಾನೆ. ಆತನ ಸಂಪರ್ಕಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Bike thefts have become a huge menace particularly in cities. There are several gangs who use sophisticated equipment to steal bikes parked in offices and on roads. Hereis an Indian innovation that will help in preventing bike thefts. The innovation has been developed by an engineering college student, Karthik, from Dhanalakshmi Engineering College, Tamil Nadu
Story first published: Thursday, November 17, 2011, 12:55 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more