ಬಿಎಸ್ 4 ಜೊತೆಗೆ ಹೊಸ ಬಣ್ಣಗಳಲ್ಲಿ ಲಭ್ಯವಾದ ಟಿವಿಎಸ್ ಎಕ್ಸ್‌ಎಲ್ 100

Written By:

ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಟಿವಿಎಸ್ ಎಕ್ಸ್‌ಎಲ್ 100 ಹೊಸ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.32,209 ಗಳಿಗೆ ಖರೀದಿ ಮಾಡಬಹುದಾಗಿದೆ.

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಗ್ರಾಮೀಣ ಭಾಗಗಳಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಟಿವಿಎಸ್ ಎಕ್ಸ್‌ಎಲ್ 100 ಮಾದರಿಯು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಬಿಎಸ್ 4 ಜೊತೆಗೆ ಹೊಸ ಬಣ್ಣಗಳಲ್ಲಿ ಮರುಬಿಡುಗಡೆ ಮಾಡಲಾಗಿದೆ.

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತಯೇ ಎಕ್ಸ್ಎಲ್ 100 ಮಾದರಿಯು 99.7 ಸಿಸಿ ಫೌರ್ ಸ್ಟೋಕ್ ಸಿಂಗಲ್ ಸಿಲಿಂಡರ್ ಎರ್ ಕೂಲ್ಡ್ ಎಂಜಿನ್‌ನೊಂದಿಗೆ ಮರುಬಿಡುಗಡೆಯಾಗಿದ್ದು, 4.3-ಬಿಎಚ್‌ಪಿ ಮತ್ತು 6.5-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಮೈಲೇಜ್

ಗ್ರಾಮೀಣ ಭಾಗದ ಜನರ ನೀರಿಕ್ಷೆಯಂತೆಯೇ ಎಕ್ಸ್‌ಎಲ್ 100 ಮೈಲೇಜ್ ಅತ್ಯುತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 67 ಕಿಮಿ ಮೈಲೇಜ್ ನೀಡಬಲ್ಲವು. ಜೊತೆಗೆ ಪ್ರತಿ ಗಂಟೆಗೆ 60 ಕಿಮಿ ವೇಗವನ್ನು ಸಾಧಿಸಬಲ್ಲವಾಗಿವೆ.

Recommended Video - Watch Now!
Bajaj Pulsar NS200 ABS Launched In India - DriveSpark
ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ವಿನ್ಯಾಸಗಳು

ಸುಮಾರು 80 ಕೆಜಿ ಭಾರವನ್ನು ಹೊಂದಿರುವ ಎಕ್ಸ್‌ಎಲ್ ಆವೃತ್ತಿಯು ಈ ಹಿಂದಿನ ಮಾದರಿಗಿಂತಲೂ ಹೊಸ ಲುಕ್ ಪಡೆದುಕೊಂಡಿದ್ದು, 130 ಕೆಜಿ ತನಕ ಭಾರ ಸಾಗಿಸುವ ಗುಣ ವೈಶಿಷ್ಟ್ಯತೆಯನ್ನು ಹೊಂದಿರುವುದು ವಾಣಿಜ್ಯ ಚಟುವಟಿಕೆಗೂ ಲಾಭವಾಗಲಿದೆ.

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಜೊತೆಗೆ ಎಕ್ಸ್‌ಎಲ್ 100 ಬೈಕಿನ ಹಿಂದಿನ ಭಾಗದ ಸೀಟುಗಳನ್ನು ಬೇಡವಾದಾಗ ತೆಗೆದುಹಾಕುವ ಸೌಲಭ್ಯವಿದ್ದು, ಕಿಕ್ ಸ್ಟಾರ್ಟ್, ದೊಡ್ಡದಾದ ಟ್ಯಾಂಕರ್, ಸ್ಟೇನ್‌ಲೆಸ್ ಬ್ರೇಕ್ ಕ್ಯಾಪೆಬಲ್ ಅನ್ನು ಜೋಡಣೆ ಮಾಡಲಾಗಿದೆ.

ತಪ್ಪದೇ ಓದಿ-ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಲಭ್ಯವಿರುವ ಬಣ್ಣಗಳು

ಎಕ್ಸ್ಎಲ್ 100 ಆವೃತ್ತಿಯು 6 ಬಣ್ಣಗಳಲ್ಲಿ ಲಭ್ಯವಿದ್ದು, ರೆಡ್, ಗ್ರೀನ್, ಗ್ರೇ, ಬ್ಲ್ಯೂ ಬ್ಲ್ಯಾಕ್, ಕಾಪರ್ ಶೈನ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.

ಬಿಎಸ್ 4 ಹಾಗೂ ಹೊಸ ಬಣ್ಣಗಳಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಮರುಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗ್ರಾಮೀಣ ಭಾಗಗಳಲ್ಲಿ ಟಿವಿಎಸ್ ಎಕ್ಸ್ಎಲ್ ತನ್ನದೇ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಬಿಎಸ್ 4 ಜೊತೆಗೆ ಹೊಸ ಬಣ್ಣಗಳಲ್ಲಿ ಮರುಬಿಡುಗಡೆಯಾಗಿರುವ ಗ್ರಾಹಕರನ್ನು ಸೆಳೆಯಲು ಮತ್ತಷ್ಟು ಸಹಕಾರಿಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Trending On DriveSpark Kannada:

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

English summary
Read in Kannada about TVS XL 100 Launched With New Colour & BSIV Compliant Engine.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark