ಹೆದ್ದಾರಿಯಲ್ಲಿ ಈ ಪೊಲೀಸರು ಮಾಡಿದ ಕೆಲಸವನ್ನು ಮೆಚ್ಚಲೇಬೇಕು..
ಬೆಸಿಗೆಯ ಸಮಯ ಸುಡುತ್ತಿರುವ ಬಿಸಿಲಿನಲ್ಲಿ ಹೊರಗೆ ಹೋಗಲೆ ಹೆದರುವಷ್ಟು ತಾಪಮಾನವು ಅಧಿಕವಾಗುತ್ತಿದೆ. ಇದರಿಂದ ಮನೆಯ ಹ್ಹೊರಗೆ ಅಥವಾ ಬೇರೆ ಕಡೆಯಲ್ಲಿ ಪಾರ್ಕಿಂಗ್ ಮಾಡಲಾದ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿರುವ ದೃಶ್ಯಗಳನ್ನು ಮತ್ತು ಸುದ್ಧಿಗಳನ್ನು ನಾವೀಗಾಗಲೆ ಕೇಳಿದ್ದೆವೆ. ಇಂದು ಕೂಡಾ ನಿಮಗೆ ಅಂತಹ ಮಾಹಿತಿಯನ್ನು ನೀಡಲಿದ್ದೇವೆ.

ಸುಡುಬಿಸಿನಲ್ಲಿ ಉತ್ತರಪ್ರದೇಶದ ಹೆದ್ದಾರಿಯಲಿ ಸಂಚರಿಸುತ್ತಿದ್ದ ಟಿವಿಎಸ್ ಅಪಾಚೆ ಆರ್‍ಟಿಆರ್ ಬೈಕಿಗೆ ಬೆಂಕಿ ಹತ್ತುಕೊಂಡಿದ್ದು, ಇದನ್ನು ಗಮನಿಸಿದ್ದ ಪೊಲೀಸರು ಆ ಬೈಕ್ ಅನ್ನು ಓವರ್ ಟೇಕ್ ಮಾಡಿ ರೈಡರ್ ಅನ್ನು ನಿಲ್ಲಿಸಿ ಸಮಯಕ್ಕೆ ಬಂದು ಇನ್ನಷ್ಟು ಬೆಂಕಿ ಹೊತ್ತಿಕೊಳ್ಳುವುದಕ್ಕು ಮುನ್ನ ಸಮಸ್ಯೆಯನ್ನು ಪರಿಹಸಿದ್ದಾರೆ.

ಹೌದು, ಈ ಘಟನೆಯ ಕುರಿತಾದ ವಿಡಿಯೋ ಒಂದನ್ನು ಆದಿತ್ಯ ಟಿವಾರಿ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ದೃಷ್ಯವು ಪೊಲೀಸ್ ವಾಹನದ ಮುಂಭಾಗದಲ್ಲಿದ್ದ ಕ್ಯಾಮೆರಾನಲ್ಲಿ ಸಂಪೂರ್ಣವಾಗಿ ರೆಕಾರ್ಡ್ ಮಾಡಲಾಗಿದೆ.

ಪೊಲೀಸರ ಮುಂಭಾಗದಲ್ಲಿ ಚಲಿಸುತ್ತಿದ್ದ ಟಿವಿಎಸ್ ಅಪಾಚೆ ಆರ್‍ಟಿಆರ್ ಬೈಕ್ ಅನ್ನು ತಡೆಯಲು ಪೊಲೀಸರು ಸೈರನ್ ಅನ್ನು ಬಳಸಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೇರೆಲ್ಲಾ ವಾಹನಗಳನ್ನು ಓವರ್‍ಟೇಕ್ ಮಾಡಿಕೊಂಡು ಅಧಿಕವಾದ ಸ್ಪೀಡ್‍ನಲ್ಲಿ ಹೋಗಿದ್ದಾರೆ.

ಆದರೆ ಬೈಕಿಗೆ ಬೆಂಕಿ ಹತ್ತಿರುವ ವಿಷಯವನ್ನು ತಿಳಿಯದ ರೈಡರ್, ತನ್ನ ಹಿಂಭಾಗದಲ್ಲಿ ಒಂದು ಹೆಂಗಸನ್ನು ಮತ್ತು ಒಂದು ಮಗುವನ್ನು ಕರೆದುಕೊಂಡು ಡ್ರೈವಿಂಗ್ ಮಾಡುತ್ತಿದ್ದ. ಅದ್ರೆ ಹಿಂದೆ ಕೂತ ಮಹಿಳೆಯು ಹೆಲ್ಮೆಟ್ ಧರಿಸದೆ ಇರುವ ದೃಷ್ಯವನು ನೀವು ವಿಡಿಯೋನಲ್ಲಿ ಕಾಣಬಹುದಾಗಿದೆ.
ಕಂಟ್ರೋಲ್ ರೂಂ ನಿಂದ ಸಂದೇಶ ಬಂದ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ತಮ್ಮ ವಾಹನವನ್ನು ಅತೀ ವೇಗದಲ್ಲಿ ಚಲಿಸಿ, ಆಗಬೇಕಿದ್ದ ಅಪಘಾತವನ್ನು ತಡೆದಿದ್ದಾರೆ. ಬೈಕ್ ಅನ್ನು ನಿಲ್ಲಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿರುವ ವಿಷಯವನ್ನು ಅರಿತ ಬೈಕ್ ರೈಡರ್ ಮತ್ತು ಆ ಹೆಂಗಸು ಧಾವಿಸಿದ್ದು, ಪೊಲೀಸರು ತಮ್ಮ ಕಾರಿನಲ್ಲಿದ್ದ ಫೈರ್ ಎಷ್ಟಿಂಗ್ಯುಶರ್ ಅನ್ನು ಉಪಯೋಗಿಸಿ ಬೆಂಕಿಯನ್ನು ಆರಿಸಿದ್ದಾರೆ.

ಬೈಕಿಗೆ ಬೆಂಕಿ ಅಂಟಿಕೊಂಡಿದ್ದು ಹೇಗೆ.?
ವಿಡಿಯೋವನು ಗಮನಿಸಿದರೆ ಬೈಕಿನ ಎರಡು ಕಡೆ ಬ್ಯಾಗಿನಲ್ಲಿ ವಸ್ತುಗಳನ್ನು ಇಟ್ಟಿಕೊಂಡಿರುವುದನ್ನು ನಾವು ಕಾಣಬಹುದಾಗಿದ್ದು, ಅವುಗಳಲ್ಲಿ ಬಹುತೇಕ ವಸ್ತುಗಳು ಪ್ಲಾಸ್ಟಿಕ್‍ನಿಂದ ಕೂಡಿದೆ. ಆದುದರಿಂದ ಸುಡುಬಿಸಿಲಿನಲ್ಲಿ ಧೀರ್ಘ ಕಾಲದ ಪ್ರಯಾಣದ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ.

ಎಲ್ಲಾ ವಾಹನಗಳ ಸೈಲೆನ್ಸರ್‍ಗಳು ಬಹುಬೇಗ ಬಿಸಿಯಾಗುವುದು ನಮಗೆ ತಿಳಿದಿರುವ ಸಂಗತಿ ಹಾಗೆಯೆ ಸೈಲೆನ್ಸರ್‍ಗಳ ಮೇಲೆ ಯಾವುದೇ ಸುಡುವ ವಸ್ತುವನ್ನು ಇಟ್ಟರೆ ಬೆಂಕಿ ಅಂಟಿಕೊಳ್ಳುವುದು ಸಹಜ. ಹೀಗಾಗಿ ಬಿಸಿಲಿನಲ್ಲಿ ಧೀರ್ಘ ಕಾಲದ ಪ್ರಯಾಣ ಮಾಡುವಾಗ ನಿಮ್ಮ ಜೋತೆ ಎಂತಹ ವಸ್ತುಗಳನ್ನು ಕೊಂಡೊಯ್ಯುತ್ತಿದ್ದೀರಿ ಎಂದು ತಿಳಿಯುವುದು ಮುಖ್ಯ.

ಇಂತಹ ಅಪಘಾತವನ್ನು ತಡೆಯುವುದು ಹೇಗೆ.?
ಲಗೇಜನ್ನು ಹೊತ್ತೊಯ್ಯುತ್ತಿರುವಾಗ, ಪಿಲಿಯಾನ್ ಸೀಟಿನಲ್ಲಿ ಭದ್ರಪಡಿಸಬಹುದಾದ ಸರಿಯಾದ ಒಂದು ಸ್ಯಾಡಲ್ ಬ್ಯಾಗ್‍ಗಳನ್ನು (ಉತ್ತಮ ಗುಣಮಟ್ಟದ ಚೀಲಗಳು) ಬಳಸಬೇಕು. ಈ ಚೀಲಗಳಲ್ಲಿ ಹೆಚ್ಚಿನವು ಮೋಟಾರ್ಸೈಕಲ್ಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲ್ಪಟ್ಟಿವೆ, ಅವುಗಳು ಸೈಲೆನ್ಸರ್‍ನಿಂದ ಉತ್ತಮವಾದ ಅಂತರವನ್ನು ಕಾಪಾಡಿಕೊಳ್ಳುತ್ತವೆ.

ಅಂತಹ ಚೀಲಗಳನ್ನು ಬಳಸುವುದು ಸಾಮಾನುಗಳನ್ನು ಸೈಲೆನ್ಸರ್‍ನಿಂದ ಸುರಕ್ಷಿತ ದೂರದಲ್ಲಿ ಉಳಿಯುವಂತೆ ಖಚಿತಪಡಿಸುತ್ತದೆ. ಯಾವುದೇ ಸ್ಯಾಡಲ್ಬ್ಯಾಗ್ ಇಲ್ಲದಿದ್ದರೆ, ಸಾಮಾನು ಸರಂಜಾಮುಗಳನ್ನು ಕಟ್ಟಲು ಬಹು ಬಂಗೀ ಹಗ್ಗಗಳನ್ನು ಬಳಸಬೇಕು ಮತ್ತು ಕಟ್ಟಲ್ಪಟ್ಟ ದಾರಗಳು ಕೂಡಾ ಸುಡುವ ಹಾಗಿರಬಾರದು ಎಂದು ಖಚಿತ ಪಡಿಸಿಕೊಳ್ಳಿ.


Click it and Unblock the Notifications








