ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

Written By:

ಸುಜುಕಿ ಇಂಟ್ರುಡರ್ 150 ಭಾರತದಲ್ಲಿ ಬಿಡುಗಡೆಯಾಗಿದೆ. ಸುಜುಕಿ ಇಂಟ್ರುಡರ್ 150 ಬೈಕ್ ರೂ. 98,340 ಎಕ್ಸ್ ಶೋರೂಂ(ದೆಹಲಿ) ದರ ಪಡೆದುಕೊಳ್ಳಲಿದ್ದು, ಬಜಾಜ್ ಸಂಸ್ಥೆಯ ಅವೆಂಜರ್ 150 ಮೋಟಾರ್ ಸೈಕಲ್‌ನೊಂದಿಗೆ ಸ್ಪರ್ಧಿಸಲಿದೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಬಹು ನಿರೀಕ್ಷಿತ ಸುಜುಕಿ ಸಂಸ್ಥೆಯ ಇನ್‌ಟ್ರುಡರ್ 150 ಮೋಟಾರ್ ಸೈಕಲ್ 154.9 ಸಿಸಿ ಇಂಜಿನ್ ಹೊಂದಿದ್ದು, ಇದು ಭಾರತದಲ್ಲಿ ಜಿಕ್ಸರ್ 150 ಬೈಕನ್ನು ಮುಂದೂಡುತ್ತದೆ. ಹೊಸ ಇನ್‌ಟ್ರುಡರ್ 150 ಬೈಕಿನ ಎಂಜಿನ್ 14.6 ಬಿಎಚ್‌ಪಿ ಮತ್ತು 14 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಸುಜುಕಿ ಇಂಟ್ರುಡರ್ 150 ಇಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಜೋಡಣೆಯೊಂದಿಗೆ ಅನಾವರಣಗೊಂಡಿದ್ದು, ತಕ್ಷಣದ ಬ್ರೇಕ್ ನಿಲುಗಡೆಗಾಗಿ ಎಬಿಎಸ್ ಜೊತೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಿಕೊಳ್ಳಲಾಗಿದೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಬಿಡುಗಡೆಗೊಂಡಿರುವ ಹೊಸ ಇಂಟ್ರುಡರ್ 150 ಬೈಕ್, ಸುಜುಕಿ ಸಂಸ್ಥೆಯು ಉತ್ಪಾದಿಸುವ ಅತಿದೊಡ್ಡ ಕ್ರೂಸರ್ ಆಗಿರುವ ಇಂಟ್ರುಡರ್ ಎಂ1800ಆರ್ ಮೋಟಾರ್ ಸೈಕಲ್‌ನಿಂದ ಹೆಸರು ಮತ್ತು ವಿನ್ಯಾಸವನ್ನು ಪಡೆದುಕೊಳ್ಳುತ್ತದೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಮುಖ್ಯಾಂಶಗಳನ್ನು ಈ ಇಂಟ್ರುಡರ್ 150 ಹೊಂದಿರಲಿದೆ. ಮುಂಭಾಗದ ಇಂಡಿಕೇಟರ್‌ಗಳು ಕೋಳಿಯ ಮೂತಿಯ ಹಾಗೆ ವಿನ್ಯಾಸಗೊಂಡಿದ್ದು, ಹಿಂಬದಿಯನ್ನು ಗಮನಿಸುವ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಇಂಟ್ರುಡರ್ 150 ಬೈಕಿನ ಮುಂಭಾಗವು ಗಿಕ್ಸ್‌ರ್ 150ಗೆ ಹೋಲಿಸಿದರೆ ಹೆಚ್ಚು ಬದಲಾವಣೆಗಳನ್ನು ಹೊಂದಿದೆ. ಮತ್ತು ಶಾಂತವಾಗಿ ಸವಾರಿ ಮಾಡುವ ಶೈಲಿಯನ್ನು ಅನುಮತಿಸುತ್ತದೆ. ಹೊಸ ಇಂಟ್ರುಡರ್ 150 ಸಂಪೂರ್ಣ ಡಿಜಿಟಲ್ ಸಲಕರಣೆ ಕನ್ಸೋಲ್ ಪಡೆದುಕೊಂಡಿದೆ.

ತಪ್ಪದೇ ಓದಿ-ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ದೇಹದ ಪ್ಯಾನಲ್‌ಗಳು ಡ್ಯುಯಲ್-ಟೋನ್ ಬಣ್ಣದ ಸ್ಕೀಮ್ ಹೊಂದಿದ್ದು, ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಹೊಂದಿರುವ ಈ ಬೈಕ್ ಖಂಡಿತವಾಗಿ ಕ್ರೂಸರ್ ಪ್ರಿಯರನ್ನು ಸೆಳೆಯಲಿರುವುದು ಖಂಡಿತ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಹೊಸ ಇಂಟ್ರುಡರ್ 150 ಬೈಕಿನ ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸಿಂಗಲ್ ಪೀಸ್ ಗ್ರಾಬ್ ರೈಲ್ ನೀಡಲಾಗಿದ್ದು, ಎಂ1800ಆರ್ ಬೈಕಿನಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಟ್ರೈಯಾಂಗಲ್ ಎಲ್ಇಡಿ ಟೈಲ್ ದೀಪಗಳು ಮತ್ತು ವಿಶಾಲವಾದ ಹಿಂಭಾಗದ ಫೆಂಡರ್ ಒಳಗೊಂಡಿದೆ.

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಭಾರತದಲ್ಲಿ ಬಿಡುಗಡೆ

ಈ ಎಂಟ್ರಿ ಲೆವೆಲ್ ಕ್ರೂಸರ್ ವಾಹನವು ತನ್ನ ಹಿರಿಯ ಸಹೋದರ ಎಂ1800ಆರ್‌ನಿಂದ ಎರವಲು ಪಡೆದ ಹಲವಾರು ಸ್ಟೈಲಿಂಗ್ ಸೂಚನೆಗಳನ್ನು ಇಂಟ್ರುಡರ್ 150 ಒಳಗೊಂಡಿದ್ದು, ಭಾರತದಲ್ಲಿ ಪ್ರಖ್ಯಾತ ಬಜಾಜ್ ಅವೆಂಜರ್ 150 ಬೈಕಿನೊಂದಿಗೆ ಸ್ಪರ್ಧೆ ನೆಡೆಸಲಿದೆ.

Trending On DriveSpark Kannada:

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!

Read more on suzuki ಸುಜುಕಿ
English summary
Suzuki Intruder 150 launched in India. The Suzuki Intruder 150 is priced at Rs 98,340 ex-showroom (Delhi) and will compete with the Bajaj Avenger 150.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark