ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

Written By:

ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ಈ ಹಿಂದೆ ದೇಶಾದ್ಯಂತ 'ಡಿಜಿ ಲಾಕರ್‌' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದ್ರೆ ಡಿಜಿ ಲಾಕರ್‌ ಮೂಲಕ ಡ್ರೈವಿಂಗ್ ಲೈನೆಸ್ಸ್ ತೊರಿಸಿದ್ದ ಬೈಕ್ ಸವಾರನೊಬ್ಬನ ಜೊತೆ ಟ್ರಾಫಿಕ್ ಪೊಲೀಸ್ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಡಿಜಿ ಲಾಕರ್ ಅನ್ನು ರೂಪಿಸಲಾಗಿದೆ. ಆದ್ರೆ ಅದು ದೇಶದಲ್ಲಿ ಸರಿಯಾಗಿ ಕಾರ್ಯರೂಪಕ್ಕೆ ಬರದ ಹಿನ್ನೆಲೆ ವಾಹನ ಸವಾರರು ಗೊಂದಲದಲ್ಲಿ ಸಿಲುಕುವಂತಹ ಪರಿಸ್ಥಿತಿ ಬಂದೊಗಿದೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಕೇಂದ್ರದ ಆಶಯದಂತೆ ಈ ಹಿಂದೆ ವಾಹನ ಸವಾರರು ತಮ್ಮ ದಾಖಲೆ ಪತ್ರಗಳನ್ನು ಸದಾ ಕೊಂಡೊಯ್ಯುವ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಡಿಜಿ ಲಾಕರ್ ಅನ್ನು ಪರಿಚಯಿಸಲಾಗಿತ್ತು. ಆದ್ರೆ ಅಲಹಾಬಾದ್ ಟ್ರಾಫಿಕ್ ಪೊಲೀಸರ ವರ್ತನೆ ಇದೀಗ ಡಿಜಿ ಲಾಕರ್ ಮಾನ್ಯತೆ ಇಲ್ಲವೇ ಎಂಬ ಸಂಶಯಕ್ಕೆ ಕಾರಣವಾಗಿದೆ.

Recommended Video - Watch Now!
[Kannada] Mahindra KUV 100 NXT Launched In India - DriveSpark
ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಘಟನೆಯ ಹಿನ್ನೆಲೆ

ಬೈಕ್ ಸವಾರನೊಬ್ಬ ಕಳೆದ ಕೆಲ ದಿನಗಳ ಹಿಂದೆ ಡ್ರೈವಿಂಗ್ ಲೈನೆಸ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಅಳವಡಿಸಿಕೊಂಡಿದ್ದಾನೆ. ಆದ್ರೆ ನಿನ್ನೆ ತಡ ರಾತ್ರಿ ಟ್ರಾಫಿಕ್ ಪೊಲಸರ ತಪಾಸಣೆ ವೇಳೆ ತನ್ನ ಸ್ಮಾರ್ಟ್ ಫೋನ್ ಮೂಲಕ ಡಿಜಿ ಲಾಕರ್ ಅಪ್ಲಿಕೆಷನ್ ಮೂಲಕ ಅಗತ್ಯ ದಾಖಲೆಗಳನ್ನು ತೊರಿಸಿದ್ದಾನೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಇದರಿಂದ ಕುಪಿತಗೊಂಡ ಟ್ರಾಫಿಕ್ ಪೊಲೀಸ್ ಇದು ನಮ್ಮ ಮುಂದೆ ನಡೆಯೋದಿಲ್ಲ. ಬದಲಾಗಿ ಮೂಲ ದಾಖಲೆಗಳು ಬೇಕು ಇಲ್ಲವಾದ್ರೆ ದಂಡ ಪಾವತಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಜಿ ಲಾಕರ್ ಮಾನ್ಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾನೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಇದರಿಂದ ಮತ್ತಷ್ಟು ಕುಪಿತಗೊಂಡ ಟ್ರಾಫಿಕ್ ಪೊಲೀಸ್, ಇದನ್ನು ತೆಗೆದುಕೊಂಡು ಹೋಗಿ ಮೋದಿಗೆ ತೊರಿಸು ನಮ್ಮ ಮುಂದೆ ನಡೆಯುದಿಲ್ಲ ಎಂದಿದ್ದಾರೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾಗಿ ಬೈಕ್ ಸವಾರನ ವಿರುದ್ಧ ರೂ. 5000 ಸಾವಿರ ದಂಡ ವಿಧಿಸಿದ್ದಾರೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಇದರಿಂದ ಕಂಗಾಲಾದ ಬೈಕ್ ಸವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೊಸ್ಟ್ ಮಾಡಿದ್ದು, ಡಿಜಿ ಲಾಕರ್‌ಗೆ ಟ್ರಾಫಿಕ್ ಪೊಲೀಸರು ಯಾಕೆ ಮಾನ್ಯತೆ ನೀಡುತ್ತಿಲ್ಲ ಏಕೆ ಎನ್ನುವುದರ ಬಗ್ಗೆ ಚಕಾರ ಎತ್ತಿದ್ದಾರೆ.

ತಪ್ಪದೇ ಓದಿರಿ- ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಇನ್ನು ರಾಜ್ಯದಲ್ಲೂ ಈ ಪರಿಸ್ಥಿತಿ ಇದೆ ಇರುವುದು ಬಹುತೇಕ ವಾಹನ ಸವಾರರ ಅಳಲು. ಯಾಕೇಂದ್ರೆ ಕೆಲವು ಕಡೆಗಳಲ್ಲಿ ಸಾಫ್ಟ್ ಡಾಕುಮೆಂಟ್‌ಗಳನ್ನು ಒದಗಿಸಿದಲ್ಲಿ ಸ್ವಿಕರಿಸಲಾಗುತ್ತಿದ್ದು, ಇನ್ನು ಕೆಲ ಕಡೆಗಳಲ್ಲಿ ಸ್ವಿಕರಿಸದಿರುವುದು ಭಾರೀ ದಂಡ ಪಾವತಿಸುವ ಪರಿಸ್ಥಿತಿ ಇದೆ.

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಇನ್ನೊಂಡೆ ವಾಹನ ಸವಾರರು ಡಿಜಿ ಲಾಕರ್ ಬಗೆಗೆ ಇದುವರೆಗೂ ಗೊಂದಲದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಗ್ಗೆ ಸ್ಪಷ್ಟನೆ ನೀಡಬೇಕಾದ ಅವಶ್ಯಕತೆಯಿದೆ. ಒಂದು ವೇಳೆ ಪ್ರಿಯ ಓದುಗರೇ ನೀವು ಕೂಡಾ ಇಂತಹ ಸಮಸ್ಯೆಯಲ್ಲಿ ಸಿಲುಕಿದ್ದರ ಬಗ್ಗೆ ಅಥವಾ ಸಮಸ್ಯೆ ನಿವಾರಣೆ ಬಗ್ಗೆ ಅಭಿಪ್ರಾಯಗಳಿದ್ದಲ್ಲಿ ತಪ್ಪದೇ ಹಂಚಿಕೊಳ್ಳಿ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

English summary
Read in Kannada: Digilocker User Paid Rs. 5000 fine for Cops Not Accepted Digilocker app Documents. Click for Details...
Story first published: Thursday, November 2, 2017, 17:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark