ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!
ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ನೀವು ಹರಸಾಹಸ ಪಡಬೇಕಿಲ್ಲ. ಯಾಕೇಂದ್ರೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಹೊಸ ಆ್ಯಪ್ ನಿಮ್ಮ ಸಹಾಯಕ್ಕೆ ಬರಲಿದೆ.
ವಾಹನ ನೋಂದಣಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ನೀವು ಹರಸಾಹಸ ಪಡಬೇಕಿಲ್ಲ. ಯಾಕೇಂದ್ರೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಹೊಸ ಆ್ಯಪ್ ನಿಮ್ಮ ಸಹಾಯಕ್ಕೆ ಬರಲಿದೆ.
ವಾಹನಗಳ ನೋಂದಣಿ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭದ ಕೆಲಸ ಎಂದರೇ ತಪ್ಪಾಗಲಾರದು.

ಹೊಸ ಯೋಜನೆ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವ ಪಿ.ರಾಧಾಕೃಷ್ಣನ್, ಭ್ರಷ್ಟಾಚಾರ ತಡೆಯುವಲ್ಲಿ ಈ ಯೋಜನೆ ಸಹಕಾರಿಯಾಗಿದೆ ಎಂದಿದ್ದಾರೆ. ಹೀಗಾಗಿ ವಾಹನ ನೋಂದಣಿ, ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ನು ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯಲಿದೆ.

ವಾಹನ ನೋಂದಣಿ ಹೇಗೆ?
ಕೇಂದ್ರ ಸರ್ಕಾರ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದಕ್ಕಾಗಿ "ವಾಹನ್ 4.0" ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಏನಿದು "ವಾಹನ್ 4.0"..?
ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನೀವು ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.

ಲೈಸೆನ್ಸ್ ಪಡಿಯೋಕೆ "ಸಾರಥಿ 4.0"
ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದೆ. ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.

ಡಿಜಿಟಲ್ ಇಂಡಿಯಾಕ್ಕೆ ಮನ್ನಣೆ
ಡಿಜಿಟಲ್ ಇಂಡಿಯಾ ಯೋಜನೆ ಅಂಗವಾಗಿಯೇ ಈ ಹೊಸ ಆ್ಯಪ್ ಬಿಡುಗಡೆಗೊಂಡಿದೆ. ಇದರಿಂದ ಸಾರ್ವಜನಿಕರು ದಿನಗಟ್ಟಲೇ ಅರ್ಜಿ ಹಿಡಿದು ನಿಲ್ಲುವ ತಾಪತ್ರಯ ತಗ್ಗಲಿದ್ದು, ನಿಗದಿತ ಅವಧಿಯಲ್ಲಿ ನಿಮ್ಮ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ದೊರೆಯಲಿದೆ.

ಹೊಸ ಯೋಜನೆಯಿಂದ ಲಾಭವೇನು?
ಆರ್‌ಟಿಓ ಕಚೇರಿಗಳಿಗೆ ಅಲೆದು ಇಲ್ಲವೇ ಮಧ್ಯವರ್ತಿಗಳು ಕೇಳಿದಷ್ಟು ಹಣ ನೀಡಿ ಡಿಎಲ್ ಪಡೆಯುವ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಕಾರಣ ಆನ್ ಲೈನ್‌ನಲ್ಲೇ ವಾಹನ ನೋಂದಣಿ ಹಾಗೂ ಲೈಸೆನ್ಸ್ ಸಿಗಲಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಇರಬಹುದಾಗಿದೆ.

ಅನೇಕ ಜನ ವಾಹನಗಳನ್ನು ಅದೇಗೋ ಖರೀದಿ ಮಾಡ್ತಾರೆ. ಆದ್ರೆ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವರು ಪಡೋ ಕಷ್ಟ ಅಷ್ಟಿಲ್ಲ. ಹೀಗಾಗಿ ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ ಸಹಾಯವಾಗಲಿವೆ.

ವಾಹನ ನೋಂದಣಿ ವೇಳೆ ಒಂದಿಲ್ಲೊಂದು ಕಾರಣ ಹೇಳಿ ಆಗುಬಹುದಾದ ನೋಂದಣಿಗೂ ಸತಾಯಿಸುವ ಅಧಿಕಾರಿಗಳು, ಲಂಚ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಹೀಗಾಗಿ ಹೊಸ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಹಾಕಲಿದೆ.

ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್‌ಗಳನ್ನು ಈಗಾಗಲೇ ಹಲವಾರು ಜನ ಡೌನ್‌ಲೋಡ್ ಮಾಡಿದ್ದು, ಈ ಮೂಕವೇ ಅರ್ಜಿ ಸಲ್ಲಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಹಲವು ಕಡೆ ಸಾರಥಿ 4.0 ಆ್ಯಪ್‌ನ್ನು ಆರ್‌ಟಿಓ ಕಚೇರಿಗಳಲ್ಲೇ ಜಾರಿಗೆ ತಂದಿದ್ದು, ಖುದ್ದು ನೀವೇ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಸುವ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹೊಸ ಯೋಜನೆ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದ್ದು, ಮಧ್ಯವರ್ತಿಗಳ ಹಾವಳಿಯೂ ತಗ್ಗಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಬೈಕ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿ ವೀಕ್ಷಿಸಿ.


Click it and Unblock the Notifications








