ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ಓಡಿಸಲು ಲೈಸೆನ್ಸ್ ಹೊಂದಿರುವವರು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಬಂದಾಗ, ಹೊಸ ಚಾಲನಾ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಹೌದು ಈ ರೀತಿಯ ಪರೀಕ್ಷೆಯನ್ನು ನಾಸಿಕ್‍‍ನಲ್ಲಿ ಶುರು ಮಾಡಲಾಗಿದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಈ ಪರೀಕ್ಷೆಯು ಚಾಲಕರ ಚಾಲನಾ ಶೈಲಿ ಹಾಗೂ ಅದರಿಂದ ಇಂಧನ ಬಳಕೆಯ ಮೇಲೆ ಉಂಟಾಗುವ ಪರಿಣಾಮ ತಿಳಿದು ಬರಲಿದೆ. ಈ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸಿದರೆ, ಅವರ ಚಾಲನಾ ಪರವಾನಗಿಯನ್ನು ನವೀಕರಿಸುವುದಿಲ್ಲ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಅಂತಹವರು ಪುನಃ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ನಾಸಿಕ್‍‍ನ ಆರ್‍‍ಟಿ‍ಒದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಪರೀಕ್ಷೆಯನ್ನು ಈ ವರ್ಷದ ಏಪ್ರಿಲ್ 1ರಿಂದ ಆರಂಭಿಸಲಾಗಿದೆ. ಈ ಪರೀಕ್ಷೆಯನ್ನು ಕೇವಲ ಟ್ರಕ್ ಹಾಗೂ ಬಸ್‍‍ಗಳ ಚಾಲಕರಿಗೆ ಮಾತ್ರ ನಡೆಸಲಾಗುತ್ತದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಈ ವಾಹನಗಳ ಚಾಲಕರು ಬೇರೆ ವಾಹನಗಳ ಚಾಲಕರಿಗೆ ಹೋಲಿಸಿದರೆ ಹೆಚ್ಚು ಬೇಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಾರೆ. ನಾಸಿಕ್‍‍ನಲ್ಲಿ ಭಾರೀ ವಾಹನಗಳ ಚಾಲನಾ ತರಬೇತಿಗಾಗಿ ನಾಲ್ಕು ಚಾಲನಾ ಶಾಲೆಗಳಿವೆ. ಈ ಚಾಲನಾ ಶಾಲೆಗಳಿಗೆ ಇಂಧನ ಬಳಕೆಯ ಉಪಕರಣಗಳನ್ನು ಖರೀದಿಸಲು ಸೂಚಿಸಲಾಗಿದೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಇದರಿಂದಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಿಸುವ ಭಾರೀ ವಾಹನಗಳ ಚಾಲಕರು ಚಾಲನಾ ಪರೀಕ್ಷೆಯನ್ನು ಎದುರಿಸಲು ಅನುಕೂಲವಾಗಲಿದೆ. ಇಂಧನ ಬಳಕೆಯ ಉಪಕರಣಗಳು, ಎಷ್ಟು ಪ್ರಮಾಣದಲ್ಲಿ ಇಂಧನವನ್ನು ಬಳಸಲಾಗಿದೆ ಎಂಬುದನ್ನು ಮುದ್ರಿಸಿ ನೀಡುತ್ತವೆ.

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಚಾಲಕನು ಹೆಚ್ಚಿನ ಪ್ರಮಾಣದಲ್ಲಿ ಇಂಧನವನ್ನು ಬಳಸಿದ್ದರೆ, ಅವನು ಈ ಪರೀಕ್ಷೆಯಲ್ಲಿ ವಿಫಲನಾಗುತ್ತಾನೆ. ಮತ್ತೆ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಂಧನ ಬಳಕೆಯ ಮುದ್ರಿತ ವಿವರವನ್ನು ಆರ್‌ಟಿಒ ಅಧಿಕಾರಿಗಳಿಗೆ ನೀಡಲಾಗುತ್ತದೆ.

MOST READ: ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ನಂತರ ಅಧಿಕಾರಿಗಳು ಚಾಲನಾ ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸುತ್ತಾರೆ. ಈ ಪರೀಕ್ಷೆಗಾಗಿ 5 ಕಿ.ಮೀ ಉದ್ದದ ರಸ್ತೆಯನ್ನು ಬಳಸಲಾಗುತ್ತದೆ. ಈ ರಸ್ತೆಯು ಕೆಲವು ಕಡೆ ಸಮನಾಗಿದ್ದರೆ, ಕೆಲವು ಕಡೆ ತಿರುವುಗಳನ್ನು, ಕೆಲವು ಕಡೆ ಇಳಿಜಾರುಗಳನ್ನು ಹೊಂದಿರುತ್ತದೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಅಧಿಕಾರಿಗಳ ಪ್ರಕಾರ, ಭಾರೀ ವಾಹನಗಳು ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸುತ್ತವೆ. ಆದ ಕಾರಣ ಭಾರೀ ವಾಹನಗಳ ಚಾಲಕರು ತಮ್ಮ ಚಾಲನಾ ಶೈಲಿಯನ್ನು ಸುಧಾರಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಯೋಜನೆಯಾಗಿದೆ. ಇದರಿಂದ ಇಂಧನದ ಉಳಿತಾಯವಾಗಲಿದೆ. ಪರಿಸರ ಮಾಲಿನ್ಯವೂ ಸಹ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More from DriveSpark

Article Published On: Thursday, August 8, 2019, 14:14 [IST]
English summary
Drivers of heavy commercial vehicles to take fuel consumption test to renew license - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+