ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಕೆಲವು ದಿನಗಳ ಹಿಂದೆ ಬೆಂಗಳೂರು ಪೊಲೀಸರು ಒ‍ಎಲ್‍ಎಕ್ಸ್ ಮೂಲಕ ಬೈಕುಗಳನ್ನು ಕದಿಯುತ್ತಿದ್ದ ಖದೀಮನನ್ನು ಬಂಧಿಸಿದ್ದರು. ಪೊಲೀಸರು ಒ‍ಎಲ್‍ಎಕ್ಸ್ ನಲ್ಲಿ ಬೈಕ್ ಖರೀದಿಸುವವರ ತರಹ ಪೋಸ್ ನೀಡಿ, ನಂತರ ಬೈಕುಗಳ್ಳನನ್ನು ಬಂಧಿಸಿದ್ದರು.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಇದೇ ರೀತಿಯ ಘಟನೆ ಕೇರಳದಲ್ಲಿ ನಡೆದಿದೆ. ಟೆಸ್ಟ್ ಡ್ರೈವ್‍‍ಗಾಗಿ ಹೋಗಿ ಬರುವುದಾಗಿ ಹೇಳಿ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಕದ್ದಿದ್ದ ಖದೀಮರನ್ನು ಕೇರಳದ ಮುಕ್ಕಾಂ ಪೊಲೀಸರು ಬಂಧಿಸಿದ್ದಾರೆ. ಮಾತೃಭೂಮಿ ಪತ್ರಿಕೆಯ ಪ್ರಕಾರ, ಕದ್ದ ಕಾರನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಯ ವೇಳೆಗೆ ಮುಕ್ಕಾಂ ಬಳಿಯಿರುವ ನೀಲೇಶ್ವರಂನಿಂದ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಈ ಘಟನೆಯಲ್ಲಿ ಬಳಸಿರುವ ಮಾರುತಿ ಸ್ವಿಫ್ಟ್ ಕಾರ್ ಅನ್ನು ಅದರ ನಿಜವಾದ ಮಾಲೀಕರು ಒ‍ಎಲ್‍ಎಕ್ಸ್ ನಲ್ಲಿ ಮಾರಾಟ ಮಾಡಲು ಜಾಹೀರಾತು ನೀಡಿದ್ದರು. ಕಾರು ಕೊಳ್ಳುವ ನೆಪದಲ್ಲಿ ಅವರನ್ನು ಕಳ್ಳರು ಭೇಟಿಯಾಗಿ, ಕಾರು ಕೊಳ್ಳುವುದಾಗಿ ನಂಬಿಸಿದ್ದರು. ಕಾರಿನ ಮಾಲೀಕರು ಹಾಗೂ ಕಳ್ಳರು ಜುಲೈ 23ರಂದು ಭೇಟಿಯಾಗುವುದಾಗಿ ಹೇಳಿದ್ದರು.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಅದರಂತೆ ಮಾಲೀಕರು ತಮ್ಮ ಕಾರ್ ಅನ್ನು ಪಾಂಡಿಕ್ಕಾಡ್‍‍ಗೆ ಕೊಂಡೊಯ್ದರು. ಖರೀದಿದಾರರ ಸೋಗಿನಲ್ಲಿದ್ದ ಕಳ್ಳರು ಕಾರು ತಮಗೆ ಇಷ್ಟವಾಗಿದ್ದು, ಕಾರ್ ಅನ್ನು ಕೊಳ್ಳುವ ಮೊದಲು ಟೆಸ್ಟ್ ಡ್ರೈವ್ ಮಾಡಲು ಬಯಸುವುದಾಗಿ ತಿಳಿಸಿದರು. ಟೆಸ್ಟ್ ಡ್ರೈವ್‍‍ಗೆ ಕಾರು ತೆಗೆದು ಕೊಂಡು ಹೋದ ನಂತರ ಕಳ್ಳರು ವಾಪಸ್ ಬರಲೇ ಇಲ್ಲ.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಬೇರೆ ದಾರಿ ಕಾಣದ ಮಾಲೀಕರು, ಪೊಲೀಸರಿಗೆ ದೂರು ನೀಡಿ, ಕಾರ್ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಕಾರ್ ಅನ್ನು ಕದ್ದ ಕಳ್ಳರು ಕಾರಿನಲ್ಲಿದ್ದ ನಂಬರ್ ಪ್ಲೇಟ್ ತೆಗೆದು ಹಾಕಿದ್ದಾರೆ. ಸಿಕ್ಕಿ ಬೀಳುವ ಭಯದಿಂದ ಕಾರಿನಲ್ಲಿ ಅಳವಡಿಸಿದ್ದ ಜಿ‍‍ಪಿ‍ಎಸ್ ಸಿಸ್ಟಂ ಅನ್ನು ಡಿಸ್ ಕನೆಕ್ಟ್ ಮಾಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಈ ಕಾರಿಗಾಗಿ ಶೋಧ ನಡೆಸಿದ್ದರು.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಆದರೆ ಕಳ್ಳರ ಚಾಣಾಕ್ಷ ನಡೆಯಿಂದಾಗಿ ಕಾರ್ ಅನ್ನು ತಕ್ಷಣಕ್ಕೆ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ ಈ ಕಾರ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಇದಕ್ಕಾಗಿ ವಯನಾಡ್‍‍ನಲ್ಲಿದ್ದ ಸ್ಥಳೀಯರನ್ನು ಸಂಪರ್ಕಿಸಿದ್ದಾರೆ. ಕಾರ್ ಅನ್ನು ಕೊಳ್ಳಲು ವ್ಯಕ್ತಿಯೊಬ್ಬರು ಮುಂದೆ ಬಂದು, ಕಾರ್ ಅನ್ನು ಪರೀಕ್ಷಿಸಿದ್ದಾರೆ.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಕಾರಿನ ಮೂಲ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೋಡಿದ ನಂತರ ಅವರಿಗೆ ಕಾರಿನ ಬಗ್ಗೆ ಅನುಮಾನ ಬಂದಿದೆ. ಅವರು ಡಾಕ್ಯುಮೆಂಟ್‍‍ನಲ್ಲಿದ್ದ ಫೋನ್ ನಂಬರಿಗೆ ಕರೆ ಮಾಡಿದ್ದಾರೆ. ಇದರಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಇದು ಕದ್ದ ಕಾರು ಎಂದು ತಿಳಿದ ತಕ್ಷಣ ಖರೀದಿದಾರರು ಕಾರ್ ಅನ್ನು ಖರೀದಿಸಲು ಹಿಂದೇಟು ಹಾಕಿದ್ದಾರೆ. ಕಾರಿನ ನಿಜವಾದ ಮಾಲೀಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಮೇರೆಗೆ ಮುಕ್ಕಾಂ ಪೊಲೀಸರು, ಕಳ್ಳರನ್ನು ಸಂಪರ್ಕಿಸಿ ಕಾರು ಖರೀದಿಸಲು ಆಸಕ್ತಿ ತೋರಿಸಿದ್ದಾರೆ.

ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಪೊಲೀಸರು ತಮ್ಮನ್ನು ನೀಲೇಶ್ವರಂ ನಿವಾಸಿಗಳೆಂದು ತಿಳಿಸಿ ಕಾರನ್ನು ನೀಲೇಶ್ವರಂಗೆ ತರಲು ಹೇಳಿದ್ದಾರೆ. ಇಬ್ಬರೂ ಕಳ್ಳರು ಕಾರ್ ಅನ್ನು ಭೇಟಿಯಾಗುವ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ತಕ್ಷಣವೇ ಇಬ್ಬರನ್ನೂ ಬಂಧಿಸಿದ ಪೊಲೀಸರು, ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ.

Most Read Articles

Kannada
English summary
Thieves steal Maruti Swift from OLX seller - Read in kannada
Story first published: Monday, August 5, 2019, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X