Subscribe to DriveSpark

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

Written By:

ಈ ಹಿಂದೆ 2 ಹೊಸ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದ ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಆರಂಭಿಕ ಬೆಲೆಯನ್ನು ರೂ.57,827 ಗಳಿಗೆ ನಿಗದಿಗೊಳಿಸಲಾಗಿದೆ.

To Follow DriveSpark On Facebook, Click The Like Button
ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿವಿಧ ಮಾದರಿಗಳಲ್ಲಿ ಗ್ರಾಜಿಯಾ ಅಭಿವೃದ್ಧಿ ಮಾಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!
ಗ್ರಾಜಿಯಾ ಮಾದರಿಗಳು ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)
ಗ್ರಾಜಿಯಾ ಎಸ್‌ಟಿಡಿ ರೂ. 57,827
ಗ್ರಾಜಿಯಾ ಅಲಾಯ್ ರೂ. 57,897
ಗ್ರಾಜಿಯಾ ಡಿಎಲ್ಎಕ್ಸ್ ರೂ. 62,269
ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಗ್ರಾಜಿಯಾ ಎಂಜಿನ್ ಸಾಮರ್ಥ್ಯ

ಹೋಂಡಾ ಗ್ರಾಜಿಯಾ ಸ್ಕೂಟರ್ ಆವೃತ್ತಿಯು ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.52-ಬಿಎಚ್‌ಪಿ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

Recommended Video
[Kannada] Mahindra KUV 100 NXT Launched In India - DriveSpark
ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಗ್ರಾಜಿಯಾ ವಿನ್ಯಾಸಗಳು

ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

ತಪ್ಪದೇ ಓದಿ-ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಗ್ರಾಜಿಯಾ ಹೊರನೋಟ

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಮುಂಭಾಗದಲ್ಲಿ ವಿ ಆಕಾರವನ್ನು ಪಡೆದುಕೊಂಡಿದ್ದು, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮತ್ತು 18 ಲೀಟರ್‌ನಷ್ಟು ಸೀಟ್ ತಳಹದಿ ಸ್ಪೆಸ್ ಬಿಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಲಭ್ಯವಿರುವ ಬಣ್ಣಗಳು

ಗ್ರಾಜಿಯಾ ಹೊಸ ಸ್ಕೂಟರ್ ನಿಯೋ ಆರೇಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಸ್ಪ್ಯಾರ್ಟನ್ ರೆಡ್, ಪರ್ಲ್ ಅಮೆಜಿಂಗ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್ ಮತ್ತು ಮ್ಯಾಟೆ ಮಾರ್ರವೆಲ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

125 ಸಿಸಿ ವಿಭಾಗದಲ್ಲಿ ಹೊಸ ಸ್ಕೂಟರ್ ಉತ್ಪನ್ನವನ್ನು ಪರಿಚಯಿಸಿರುವ ಹೋಂಡಾ ಸಂಸ್ಥೆಯು ಗ್ರಾಜಿಯಾ ಆವೃತ್ತಿಯನ್ನು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಮಾಡಿದ್ದು, ಸ್ಪೋರ್ಟ್ ಲುಕ್ ಹಿನ್ನೆಲೆ ಯುವ ಸಮುದಾಯವನ್ನು ಸೆಳೆಯುವುದಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ರಸ್ತೆ ಬದಿಯಲ್ಲಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ

English summary
Read in Kannada about Honda Grazia Launched In India. Prices Start At Rs 57,827.
Story first published: Wednesday, November 8, 2017, 15:46 [IST]
Please Wait while comments are loading...

Latest Photos