ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕಿದ್ರೆ ಬೀಳುತ್ತೆ ದಂಡ

Written By:

ಯಾರ್ ಬೇಕಾದ್ರು ಏನ್ ಬೇಕಾದ್ರು ಮಾಡ್ಕೊಳಿ... ಯಾರು ಏನು ಕೊಳೋದಿಲ್ಲ ಎನ್ನುವ ಮನೋಭಾವ ನಮ್ಮಲ್ಲಿ ಎಷ್ಟೋ ಜನಕ್ಕಿದೆ. ನಿಯಮಗಳಿರುವುದೇ ಮುರಿಯಲಿಕ್ಕೆ ಎಂಬ ಮನಸ್ಥಿತಿ ನಮ್ಮಲ್ಲಿ ಮನೆ ಮಾಡಿದೆ ಎನ್ನಬಹುದು.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಯಾಕಪ್ಪ ಈ ರೀತಿಯ ಏನ್ ಏನ್ ಮಾತಾಡ್ತಾ ಇದ್ದಾರೆ ಅನ್ಕೊಂಡ್ರಾ ? ವಿಚಾರ ಇದೆ ಸ್ನೇಹಿತರೆ. ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಯಾವುದೇ ಸಂಘಟನೆಯಾಗಲಿ, ಅದಕ್ಕೆ ಆದಂತಹ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಇತ್ಯಾದಿ ಮಂದಿಗಳನ್ನು ನೀವು ನೋಡಿರುತ್ತೀರಿ.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಅವರು ತಮ್ಮ ತಮ್ಮ ವಾಹನಗಳ ಮೇಲೆ ನಾನು ಆ ಸಂಘದ ಅಧ್ಯಕ್ಷ... ಈ ಸಂಘದ ಅಧ್ಯಕ್ಷ ಅಂತೆಲ್ಲಾ ದೊಡ್ಡ ದೊಡ್ಡ ಹಸಿರು ಬಣ್ಣದ ಬೋರ್ಡ್‌ಗಳನ್ನ ಹಾಕಿಕೊಂಡು ಓಡಾಡುವುದನ್ನು ಹೆಚ್ಚಿಗೆಯಾಗಿರುವುದು ದುಃಖಕರವಾದ ವಿಚಾರವಾಗಿದೆ.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಈ ರೀತಿ ಹಸಿರು ಬಣ್ಣದ ಬೋರ್ಡ್ ಹಾಕಿಕೊಂಡು ಶೋಕಿ ಮಾಡ್ತಿದ್ದ ವಿವಿಧ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮುಂತಾದ ಪದಾಧಿಕಾರಿಗಳಿಗೆ ಪೊಲೀಸರು ಲಗಾಮು ಹಾಕಲು ಮುಂದಾಗಿದ್ದಾರೆ. ಏನು ವಿಷ್ಯ ಅಂತೀರಾ ಮುಂದೆ ಓದಿ..

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ತಮ್ಮ ವಾಹನಗಳ ನಂಬರ್ ಪ್ಲೇಟ್‌ಗಳ ಮೇಲೆ ಕೆಲವು ಸಂಘಗಳ ಅಧ್ಯಕ್ಷ ಕಾರ್ಯದರ್ಶಿ ಉಪಾಧ್ಯಕ್ಷ ಎಂದು ಬೋರ್ಡ್ ಹಾಕೊಂಡಿದ್ದ ಸಂಘಗಳ ಪದಾಧಿಕಾರಿಗಳ ವಾಹನಗಳ ಮೇಲಿನ ನಾಮ ಫಲಕಗಳನ್ನು ನಗರ ಟ್ರಾಫಿಕ್ ಪೊಲೀಸರು ತೆಗೆಸಿ ಹಾಕಿದ್ದಾರೆ.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಅಲ್ಲದೆ, ಈ ರೀತಿಯ ನಂಬರ್ ಪ್ಲೇಟ್ ಬೋರ್ಡ್‌ಗಳನ್ನು ಹಾಕುವುದನ್ನು ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಈ ರೀತಿ ಬೋರ್ಡ್ ಹಾಕಿಕೊಂಡು ಓಡಾಡುವವರು ತಕ್ಷಣ ಅದನ್ನು ತೆಗೆಸಿ ಹಾಕಿ, ಬಿಳಿ ಬಣ್ಣದ ಪ್ಲೇಟ್ ಮೇಲೆ ಕ್ರಮಬದ್ಧ ಆಕಾರದಲ್ಲಿ ಕಪ್ಪು ಬಣ್ಣದಿಂದ ಅಕ್ಷರಗಳನ್ನು ಮುದ್ರಿಸಬೇಕು ಎಂದು ತಿಳಿಸಿದ್ದಾರೆ.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಯಾವುದು ಮಾಡಬಾರದು :

1. ಕೇವಲ ಕಪ್ಪು ಬಣ್ಣದಿಂದ ಮಾತ್ರ ಅಕ್ಷರಗಳನ್ನು ಮುದ್ರಿಸಬೇಕು

2. ಬಿಳಿ ಬಣ್ಣದ ಪ್ಲೇಟ್ ಮೇಲೆ ವಕ್ರ ವಕ್ರ ಆಕಾರದಲ್ಲಿ ಅಕ್ಷರಗಳನ್ನು ಮುದ್ರಿಸಬಾರದು

3. ವಿವಿಧ ಆಕಾರದ ಪ್ಲೇಟ್ ಬಳಸಬಾರದು

4. ನಂಬರ್ ಪ್ಲೇಟ್‌ ಮೇಲೆ ಚಿಹ್ನೆ, ಚಿತ್ರಗಳನ್ನು ಮುದ್ರಿಸಬಾರದು

5. ಈ ಫಲಕವನ್ನು ಆರ್​ಟಿಒ ಕಚೇರಿ ಆವರಣದ ಹೊರಗೆ ಮಾರುವ ಹಾಗಿಲ್ಲ

6. ಫಲಕದಲ್ಲಿ ವಾಹನ ಸಂಖ್ಯೆ ಹೊರತಾಗಿ ಮತ್ಯಾವುದೇ ಅಕ್ಷರಗಳು ಇರಕೂಡದು.

ಎಚ್ಚರ !! ಸಂಘಟನೆಯ ಹೆಸರು ಹೇಳಿಕೊಂಡು ಕಾರಿಗೆ ಹಸಿರು ಬೋರ್ಡ್ ಹಾಕುದ್ರೆ ಬೀಳುತ್ತೆ ದಂಡ

ಪೋಲೀಸರ ಈ ಕ್ರಮ ಸೌಗತಾರ್ಹವಾಗಿದ್ದು, ಮುಂಬರುವ ದಿನಗಳಲ್ಲಿ ಈ ರೀತಿಯ ನಿಯಮ ಬಾಹಿರವಾಗಿ ಹಸಿರು ನಂಬರ್ ಪ್ಲೇಟ್ ಅಳವಡಿಕೆ ಕ್ರಮ ನಿಲ್ಲಲ್ಲಿದೆಯೇ ಎಂಬುದರನ್ನು ಕಾದು ನೋಡಬೇಕಾಗಿದೆ.

English summary
karnataka police removed green boards from vehicles

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark