ಟಾಪ್ 10 ಸ್ಕೂಟರ್ಸ್ - ಹೋಂಡಾ ಆಕ್ಟಿವಾ ಈಗಲೂ ನಂ.1
2018-19ರ ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್ ವಾಹನ ಮಾರಾಟಗಾರರಿಗೆ ಅಷ್ಟೊಂದು ಆಶಾದಾಯಕವಾಗಿರಲಿಲ್ಲ. ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 17.3%ನಷ್ಟು ಇಳಿಮುಖವಾಗಿದೆ.

ತಯಾರಕರು ಅನೇಕ ರಿಯಾಯಿತಿ ಮತ್ತು ಆಫರ್‍ಗಳನ್ನು ನೀಡಿದರೂ ಮಾರ್ಚ್ ತಿಂಗಳಿನಲ್ಲಿ ಸ್ಕೂಟರ್ ಮಾರಾಟವು ಇಳಿಮುಖ ಕಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಅತ್ಯಧಿಕ ಮಾರಾಟವಾಗುವ ಹೊಂಡಾ ಆಕ್ಟಿವಾ ಮಾರಾಟವು ಸಹ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 29% ನಷ್ಟು ಕಡಿಮೆಯಾಗಿದೆ.

ಹೋಂಡಾ ಆಕ್ಟಿವಾ ಈಗಲೂ ನಂ.1
ಹೋಂಡಾ ಆಕ್ಟಿವಾ ಈಗಲೂ ದೇಶಿಯ ಮಾರುಕಟ್ಟೆಯಲ್ಲಿ ನಂ.1 ಆಗಿ ಮುಂದುವರೆದಿದೆ. ಆದರೆ 2019ರ ಮಾರ್ಚ್ ತಿಂಗಳಿನಲ್ಲಿ ಹೊಂಡಾ ಆಕ್ಟಿವಾದ ಮಾರಾಟವು ಗಣನೀಯವಾಗಿ ಕುಸಿತ ಕಂಡಿದೆ. ಒಟ್ಟಾರೆಯಾಗಿ 59,295 ಯೂನಿಟ್ ಗಳನ್ನು ಮಾರ್ಚ್ ತಿಂಗಳಲ್ಲಿ ಮಾರಾಟ ಮಾಡಲಾಗಿದ್ದು, ಇದು ಒಟ್ಟಾರೆಯಾಗಿ ಮಾರಾಟವಾದ ಎಲ್ಲಾ 9 ಸ್ಕೂಟರ್ ಗಳಿಗಿಂತ ಅಧಿಕವಾಗಿದೆ.

2019ಮಾರ್ಚ್ ನಲ್ಲಿ ಹೊಂಡಾದ ಮಾರಾಟ ಪ್ರಮಾಣವು 29% ನಷ್ಟು ಕುಸಿತ ಕಂಡು ಹೀರೋ ಮತ್ತು ಟಿ ವಿ ಎಸ್ ಗಳ ನಂತರ ಮೂರನೇ ಸ್ಥಾನಕ್ಕೆ ಕುಸಿದಿದೆ. ದೇಶಿಯವಾಗಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ದ್ವಿಚಕ್ರ ವಾಹನಗಳಲ್ಲಿ ಸ್ಥಾನ ಪಡೆದಿರುವ ಆಕ್ಟಿವಾ, ಈ ಗೌರವ ಪಡೆದ ಹೋಂಡಾ ಕಂಪನಿಯ ಏಕೈಕ ವಾಹನವಾಗಿದೆ.

ಇನ್ನು ಹೀರೋ ಸ್ಪ್ಲೆಂಡರ್ ಈಗಲೂ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ನಂ 1 ಸ್ಥಾನದಲ್ಲಿದೆ. ಹೋಂಡಾ ಕಂಪನಿಯು ಸದ್ಯಕ್ಕೆ ಆಕ್ಟಿವಾವನ್ನು 110 ಸಿಸಿ ಮತ್ತು 125 ಸಿಸಿ ಎರಡು ಮಾದರಿಯ ಎಂಜಿನ್ ಗಳಲ್ಲಿ ಮಾರಾಟ ಮಾಡುತ್ತಿದೆ.

ಟಿವಿಎಸ್ ನ ಹೆಗ್ಗಳಿಕೆ
ಟಿವಿಎಸ್ ನ ಮೂರು ಸ್ಕೂಟರ್‍ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಜ್ಯೂಪಿಟರ್ ವಾಹನವು 18 % ನಷ್ಟು ಮಾರಾಟದಲ್ಲಿ ಕುಸಿತ ಕಂಡರೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಟಿವಿಎಸ್ ನ 125 ಸಿಸಿ ಸೆಗ್‍ಮೆಂಟ್ ನಲ್ಲಿ ಎನ್‍ಟಾರ್ಕ್ 61% ನಷ್ಟು ಹೆಚ್ಚು ಮಾರಾಟವಾಗಿ ಅತಿ ಹೆಚ್ಚು ಮಾರಾಟವಾಗುವ 10 ಸ್ಕೂಟರ್ ಗಳಲ್ಲಿ ನಂ.1 ಸ್ಥಾನದಲ್ಲಿದೆ. ಟಿವಿಎಸ್ ಸ್ಕೂಟಿಯ ಪೆಪ್+ ನ ಮಾರಾಟವು 32 ಯೂನಿಟ್ ಗಳಷ್ಟು ಕುಸಿತ ದಾಖಲಿಸಿದೆ.
MOST READ: ಮಾಡಿಫೈನಲ್ಲಿ ಮಿಂಚಿದ ಮಹೀಂದ್ರಾ ರೊಕ್ಸರ್

ಡೆಸ್ಟಿನಿ ಮಾರಾಟದೊಂದಿಗೆ ಹೆಚ್ಚು ಮಾರಾಟ ದಾಖಲಿಸುತ್ತಿರುವ ಹೀರೋ
ಹೀರೋ ಡೆಸ್ಟಿನಿ 125 ವಾಹನವನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಈ ಪ್ರೀಮಿಯಂ ಸ್ಕೂಟರ್ ಹೆಚ್ಚಾಗಿ ಮಾರಾಟವಾಗುತ್ತಿದೆ. 110 ಸಿಸಿ ಮತ್ತು 125 ಸಿಸಿ ಎರಡೂ ತರಹದ ಎಂಜಿನ್ ಮಾದರಿಗಳನ್ನು ಹೊಂದಿರುವ ಹೋಂಡಾ ಆಕ್ಟಿವಾದ ನಂತರ 125 ಸಿಸಿ ಸೆಗ್‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನ ಎಂಬ ಖ್ಯಾತಿಯನ್ನು ಹೀರೋ ಡೆಸ್ಟಿನಿ ಪಡೆದಿದೆ.

ಮಾರ್ಚ್ ಅವಧಿಯಲ್ಲಿನ ಸ್ಕೂಟರ್ ಮಾರಾಟ ಪ್ರಮಾಣ
| ಸ್ಥಾನ | ಸ್ಕೂಟರ್ ಮಾದರಿಗಳು | ಮಾರ್ಚ್ 2019 | ಮಾರ್ಚ್ 2018 | ಶೇಕಡವಾರು ಬೆಳವಣಿಗೆ |
| 1 | ಹೋಂಡಾ ಆಕ್ಟಿವಾ | 1,48,241 | 2,07,536 | -29 |
| 2 | ಟಿವಿಎಸ್ ಜ್ಯೂಪಿಟರ್ | 53,424 | 65,308 | -18 |
| 3 | ಸುಜುಕಿ ಆಕ್ಸೆಸ್ | 49,875 | 36,555 | 36 |
| 4 | ಹೀರೋ ಡೆಸ್ಟಿನಿ 125 | 22,564 | 0 | - |
| 5 | ಟಿವಿಎಸ್ ಎನ್‍ಟಾರ್ಕ್ | 18,557 | 11,500 | 61 |
| 6 | ಯಮಹಾ ಫಾಸಿನೊ | 15,739 | 15,944 | -1 |
| 7 | ಯಮಹಾ ರೇ | 12,671 | 12,600 | 1 |
| 8 | ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ | 11,747 | 11,779 | 0 |
| 9 | ಹೀರೋ ಪ್ಲೆಷರ್ | 10,218 | 18,782 | -46 |
| 10 | ಸುಜುಕಿ ಬರ್ಗ್‍ಮನ್ | 8,250 | 0 | - |


Click it and Unblock the Notifications








