ಕೆಟ್ಟ ಹುಡುಗ ಬಂದನೋ, ಭಾರತಕ್ಕೆ ದುಬಾರಿ ಲಕ್ಷುರಿ ಫೆರಾರಿ

"ನಿನ್ನೆವರೆಗೆ ಫೆರಾರಿ 57 ದೇಶಗಳಿಗೆ ಪ್ರವೇಶಿಸಿತ್ತು. ಇದೀಗ ಭಾರತ ಸೇರಿ 58 ದೇಶದಲ್ಲಿ ಫೆರಾರಿ ಕಚೇರಿಗಳಿವೆ. ಇಲ್ಲಿ, ಮುಂದಿನ 2-3 ವರ್ಷಗಳಲ್ಲಿ ಸುಮಾರು ನೂರು ಫೆರಾರಿ ಕಾರು ಮಾರಾಟವಾಗುವ ನಿರೀಕ್ಷೆಯಿದೆ" ಎಂದು ಫೆರಾರಿ ಸಿಇಒ ಅಮೆಡಿಯೊ ಫೆಲಿಸಾ ಹೇಳಿದ್ದಾರೆ.
ದೇಶಕ್ಕೆ ಫೆರಾರಿ ಕಾರುಗಳ ಅಧಿಕೃತ ರಫ್ತುದಾರ ಕಂಪನಿಯಾಗಿ ಫೆರಾರಿಯು ಶ್ರೇಯನ್ ಗ್ರೂಪನ್ನು ಆಯ್ಕೆ ಮಾಡಿದೆ. ದೆಹಲಿ ಶೋರೂಂನಲ್ಲಿ ಇಂದೇ ಬುಕ್ಕಿಂಗ್ ಆರಂಭವಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಕಂಪನಿಯ ಎರಡನೇ ಶೋರೂಂ ಮುಂಬೈನಲ್ಲಿ ಆರಂಭವಾಗಲಿದೆ.
ಫೆರಾರಿಯು ಆಸ್ಟನ್ ಮಾರ್ಟಿನ್ ಮತ್ತು ಕಿಯೊನ್ಸೆಂಗ್ ನಂತರ ಭಾರತಕ್ಕೆ ಪ್ರವೇಶಿಸಿದ ಮೂರನೇ ಸೂಪರ್ ಲಕ್ಷುರಿ ಕಾರ್ ಕಂಪನಿಯಾಗಿದೆ. ಈ ವರ್ಷ ದೇಶದ ಐಷಾರಾಮಿ ಕಾರು ಮಾರುಕಟ್ಟೆ ಎರಡು ಪಟ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಸೂಕ್ತ ಸಮಯ ನೋಡಿ ಫೆರಾರಿ ಭಾರತ ಪ್ರವೇಶಿಸಿದಂತಿದೆ.
ಭಾರತದಲ್ಲಿ ಫೆರಾರಿ ಕಾರುಗಳು ದರ
ಫೆರಾರಿ ಕ್ಯಾಲಿಫೋರ್ನಿಯಾ: 2.2 ಕೋಟಿ ರು.
ಫೆರಾರಿ 458 ಇಟಲಿಯಾ: 2.56 ಕೋಟಿ ರು.
ಫೆರಾರಿ 599 ಜಿಟಿಬಿ ಫಿಯೊರನೊ: 3.37 ಕೋಟಿ ರು.
ಫೆರಾರಿ ಎಫ್ಎಫ್: 3.41 ಕೋಟಿ ರು.


Click it and Unblock the Notifications








