ಫೆರಾರಿ ಬುಕ್: ಈ ಪುಸ್ತಕದ ದರ 1.25 ಕೋಟಿ ರುಪಾಯಿ

Ferrari unveils Rs 1.25 cr book Enzo Diamante in India
ಪುಸ್ತಕದ ಮೌಲ್ಯ ಹೆಚ್ಚಿಸುವ ಅಂಶಗಳು ಯಾವುದು ಎಂದು ಕೇಳಬೇಡಿ. ಕೆಲವು ಪುಸ್ತಕಗಳ ದರ ಕಡಿಮೆ ಇದ್ದರೂ ಅದರಲ್ಲಿ ಬೆಲೆಕಟ್ಟಲಾಗದಷ್ಟು ವಿಷಯಗಳಿವೆ. ಕೆಲವು ಪುಸ್ತಕಗಳ ದರ ದುಬಾರಿಯಾಗಿರುತ್ತದೆ... ಇರಲಿ.

ಫೆರಾರಿ ಕಂಪನಿಯು ತನ್ನ ಇತಿಹಾಸ ಸಾರುವ ಐತಿಹಾಸಿಕ ಪುಸ್ತಕವೊಂದನ್ನು ಹೊರತಂದಿದೆ. ಈ ಪುಸ್ತಕ ಹಲವು ವಿಶೇಷಗಳ ಸಾಗರ. ಇದರಲ್ಲಿ ಹಲವು ಅಂಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇದರ ದರವೇ 1.25 ಕೋಟಿ ರುಪಾಯಿ.

ಇದರ ಮೌಲ್ಯ ಹೆಚ್ಚಿಸಿದ್ದು ವಜ್ರ ಮತ್ತು ಇತರ ಬೆಲೆಬಾಳುವ ಹರಳುಗಳು. ಮುಖಪುಟದಲ್ಲಿರುವ ಫೆರಾರಿ ಸಿಂಬಲ್ 30 ಕ್ಯಾರೆಟ್ ವಜ್ರದಿಂದ ಮಾಡಲಾಗಿದೆ. ಜೊತೆಗೆ ಇದರಲ್ಲಿ ಸುಮಾರು 1,500 ಬೆಲೆಬಾಳುವ ಹರಳುಗಳನ್ನು ಜೋಡಿಸಲಾಗಿದೆ. ಈ ಪುಸ್ತಕದ ತೂಕ 34 ಕೆ.ಜಿ.

ಈ ಪುಸ್ತಕದ ತೂಕ/ಮೌಲ್ಯ ಹೆಚ್ಚಿಸಲು ಪ್ರಸಕ್ತ ಫೆರಾರಿ ರೇಸ್ ಡ್ರೈವರ್ ಗಳ ಸಹಿಗಳ ಸಂಗ್ರಹವಿದೆ. ಜೊತೆಗೆ ಮಾಜಿ ಫೆರಾರಿ ಚಾಂಪಿಯನ್ ಗಳ ಸಹಿ ಕೂಡ ಇದರಲ್ಲಿದೆ.

ಫೆರಾರಿ ಪಬ್ಲಿಕೇಷನ್ ಈ ಪುಸ್ತಕದ ಕೆಲವೇ ಪ್ರತಿಗಳನ್ನು ಪ್ರಿಂಟ್ ಮಾಡಿದೆ. ಪ್ರತಿದೇಶದಲ್ಲೂ ಒಂದಕ್ಕಿಂತ ಜಾಸ್ತಿ ಪುಸ್ತಕ ಮಾರಾಟ ಮಾಡಲಾಗುವುದಿಲ್ಲವಂತೆ. ಈ ಪುಸ್ತಕದ ಹೆಸರು Enzo Diamante.

"ಫೆರಾರಿ ಇಂಡಿಯಾ ಮತ್ತು ಓಪಸ್ ಮೀಡಿಯಾ ಗ್ರೂಪ್ ಈ ದುಬಾರಿ ಪುಸ್ತಕವನ್ನು ಹೊರತಂದಿದೆ. ಇದು ಭಾರತದ ಮಾರುಕಟ್ಟೆಯಲ್ಲಿರುವ ದುಬಾರಿ ದರದ ಪುಸ್ತಕವಾಗಲಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

More from DriveSpark

Article Published On: Friday, December 2, 2011, 11:49 [IST]
English summary
Ferrari today unveiled over Rs 1.25 crore diamond encrusted book "Enzo Diamante" in India. In this book- history of the car maker, This book weighs 37 kg, has a 30-carat diamond studded Ferrari horse (Logo) with about 1,500 selected stones. Ferrari drivers signature...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+