ಹೋಂಡಾ ಬ್ರಿಯೊ 5 ಸಾವಿರ ಕಾರು ಬುಕ್ಕಿಂಗ್

ನೂತನ ಹೋಂಡಾ ಬ್ರಿಯೊ ಕಾರು ದೇಶದ ರಸ್ತೆಯಲ್ಲಿರುವ ಹ್ಯುಂಡೈ ಐ10 ಮತ್ತು ಮಾರುತಿ ಸುಜುಕಿ ರಿಟ್ಜ್ ಗೆ ಪೈಪೋಟಿ ನೀಡಲಿದೆ. ಈ ಕಾರು 1.2 ಲೀಟರಿನ 4 ಸಿಲಿಂಡರಿನ iVTEC ಎಂಜಿನ್ ಹೊಂದಿದೆ. ಹೋಂಡಾ ಬ್ರಿಯೊ ಮೈಲೇಜ್ ಪ್ರತಿಲೀಟರ್ ಗೆ 17ಕಿ.ಮೀ.ಯಿಂದ 19 ಕಿ.ಮೀ.ವರೆಗಿದೆ.
"ಗ್ರಾಹಕರಿಗೆ ಹೊರೆಯಾಗದಂತೆ ಕೈಗೆಟುಕುವ ದರದಲ್ಲಿ ಬ್ರಿಯೊ ಕಾರನ್ನು ಹೊರತಂದಿದ್ದೇವೆ. ಈ ಕಾರು ಉತ್ಪಾದನೆಗೆ ಹೆಚ್ಚು ಸ್ಥಳೀಯ ಸಂಪನ್ಮೂನ ಬಳಸಿಕೊಂಡಿದ್ದೇವೆ. ಅಂದರೆ ಬಿಡಿಭಾಗಗಳು ಇತ್ಯಾದಿಗಳನ್ನು ಇಲ್ಲಿಂದಲೇ ಪೂರೈಕೆ ಮಾಡಲಾಗಿದೆ. ಹೀಗಾಗಿ ಉತ್ಪಾದನೆ ವೆಚ್ಚವೂ ಕಡಿಮೆಯಾಗಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಜ್ಞಾನೇಶ್ವರ್ ಸೇನ್ ಹೇಳಿದ್ದಾರೆ.
ನೂತನ ಬ್ರಿಯೊ ಆರು ಬಣ್ಣಗಳಲ್ಲಿ ದೊರಕುತ್ತದೆ. ಬ್ರಿಯೊ ಹ್ಯಾಚ್ ಬ್ಯಾಕ್ ಕಾರಿನ ಆರಂಭಿಕ ದರ 3.95 ಲಕ್ಷ ರುಪಾಯಿ.
| ಆವೃತ್ತಿ | ದರ |
| ಬ್ರಿಯೊ ಇ | 3.95 ಲಕ್ಷ ರು |
| ಬ್ರಿಯೊ ಎಸ್ | 4.35 ಲಕ್ಷ ರು. |
| ಬ್ರಿಯೊ ಎಸ್ ಆಪ್ಷನ್ | 4.9 ಲಕ್ಷ ರು. |
| ಬ್ರಿಯೊ ವಿ | 5.1 ಲಕ್ಷ ರುಪಾಯಿ |


Click it and Unblock the Notifications








