ಬ್ರಿಯೊ, ಸಿಟಿ, ಜಾಝ್ ಕಾರುಗಳಿಗೆ ಚೈನಿಸ್ ಬಿಡಿಭಾಗ

Honda To Get Chinese Parts For Brio, City and Jazz
ಜಪಾನಿನ ಕಾರು ಕಂಪನಿ ಹೋಂಡಾ ದೇಶದ ರಸ್ತೆಗೆ ಹಲವು ಕಾರುಗಳನ್ನು ಪರಿಚಯಿಸಿದೆ. ಅದರಲ್ಲಿ ಬ್ರಿಯೊ ಸಣ್ಣ ಮತ್ತು ಅಗ್ಗದ ಕಾರಾಗಿದೆ. ಆದರೆ ಈ ಕಾರಿನ ಮಾರಾಟ ಹೆಚ್ಚು ಆಶಾದಾಯಕವಾಗಿಲ್ಲ. ಥೈಲಾಂಡಿನಲ್ಲಿ ನೆರೆಹಾವಳಿಯಾದ ಹಿನ್ನಲೆಯಲ್ಲಿ ಹೋಂಡಾ ಕಾರು ಉತ್ಪಾದನೆಗೂ ಹಿನ್ನಡೆಯಾಗಿತ್ತು.

ಈ ಎಲ್ಲಾ ಹಿನ್ನಲೆಯಲ್ಲಿ ಬ್ರಿಯೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೋಂಡಾ ಕಳೆದ ವಾರ ಪ್ರಕಟಿಸಿತ್ತು. ಆದರೆ ಕಂಪನಿಯು ಬ್ರಿಯೊ ಬುಕ್ಕಿಂಗ್ ನಿಲ್ಲಿಸಿಲ್ಲ. ಇದೀಗ ಕಂಪನಿಯು ಬಿಡಿಭಾಗಗಳನ್ನು ಚೈನಾದಿಂದ ಪಡೆಯಲು ನಿರ್ಧರಿಸಿದೆ.

ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಶೀಘ್ರದಲ್ಲಿ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಿದೆ. ಕಂಪನಿಯು ಚೀನಾದಲ್ಲೂ ವಹಿವಾಟು ಹೊಂದಿದೆ. ಆದರೆ ಅಲ್ಲಿ ಬಿಡಿಭಾಗಗಳಿಗೆ ಹೆಚ್ಚಿನ ಬೇಡಿಕೆಯಿಲ್ಲ. ಹೀಗಾಗಿ ಥೈಲಾಂಡ್ ಬದಲಿಗೆ ಚೀನಾದಿಂದ ಬಿಡಿಭಾಗ ಹೊರತರುವ ನಿರ್ಧಾರಕ್ಕೆ ಕಂಪನಿ ಬಂದಿದೆ.

2012ರ ಆರಂಭದಿಂದ ಉತ್ಪಾದನೆ ಆರಂಭಿಸಲು ಅನುಕೂಲವಾಗುವಂತೆ ಕಂಪನಿಯು ಚೀನಾ ಮತ್ತು ಜಪಾನಿನ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಬ್ರಿಯೊ ಉತ್ಪಾದನೆ ಮಾತ್ರ ಸ್ಥಗಿತಗೊಂಡಿಲ್ಲ. ಕಂಪನಿಯು ಜಾಝ್ ಉತ್ಪಾದನೆ ನಿಲ್ಲಿಸಲು ನಿರ್ಧರಿಸಿದೆ. ಈಗಾಗಲೇ ಹೋಂಡಾ ಜಾಝ್ ಬುಕ್ಕಿಂಗ್ ಸ್ಥಗಿತಗೊಂಡಿದೆ. 2012ರ ಹೋಂಡಾ ಸಿಟಿ ಕಾರಿಗೆ ಚೀನಾ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ಚೀನಾ ಉತ್ಪನ್ನಗಳಿಗೆ ವಾರೆಂಟಿ ಗ್ಯಾರಂಟಿ ಇದೆಯಾ? ಗೊತ್ತಿಲ್ಲ.

More from DriveSpark

Article Published On: Wednesday, December 14, 2011, 12:25 [IST]
English summary
Honda To Get Chinese Parts For Brio, City and Jazz. Honda Siel Cars India will soon begin getting parts from China. Honda has a large Chinese operation and with sales slowing down in China too, there is no huge demand for parts. Making use of this reduced demand, HSCI wants to compensate the deficit in parts from Thailand through Chinese supply.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+