ಹ್ಯುಂಡೈ LPG ಐ10 ರಸ್ತೆಗೆ, ದರ 4.15 ಲಕ್ಷ ರು.

ನೂತನ ಐ10 ಬ್ಲೂಡ್ರೈವ್ ಎಲ್ ಪಿಜಿ ಕಾರು 1.1 ಲೀಟರ್ ಐಆರ್ ಡಿಇ 2 ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದು 1.2 ಲೀಟರ್ ಕಪ್ಪಾ ವಿಟಿವಿಟಿ ಎಂಜಿನ್ ಗೆ ಹೋಲಿಸಿದರೆ ಸಣ್ಣದು ಮತ್ತು ಕಡಿಮೆ ಶಕ್ತಿಶಾಲಿ ಎಂಜಿನ್ ಆಗಿದೆ. ಆದರೆ ನೂತನ ಐ10 ಎಲ್ ಪಿಜಿ ಕಾರು ಅತ್ಯಧಿಕ ಇಂಧನ ದಕ್ಷತೆಯ ಕಾರಾಗಿದೆ.
ಹ್ಯುಂಡೈ ಐ10 ಬ್ಲೂಡ್ರೈವ್ ಎಲ್ ಪಿಜಿ ಸಣ್ಣಕಾರು ಇರಾ ಮತ್ತು ಮ್ಯಾಗ್ನಾ ಎಂಬ ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. ದೆಹಲಿ ಎಕ್ಸ್ ಶೋರೂಂನಲ್ಲಿ ಇರಾ ಆವೃತ್ತಿ ದರ 4.16 ಲಕ್ಷ ರು. ಮತ್ತು ಮ್ಯಾಗ್ನಾ ಆವೃತ್ತಿ ದರ 4.3 ಲಕ್ಷ ರು. ಇದೆ. ಈ ಕಾರಿಗೆ 34 ಲೀಟರ್ ಎಲ್ ಪಿಜಿ ಟ್ಯಾಂಕ್ ಜೋಡಿಸಲಾಗಿದೆ.
ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ನೂತನ ಐ10 ಬ್ಲೂಡ್ರೈವ್ ಎಲ್ ಪಿಜಿ ಕೊಂಚ ದುಬಾರಿ. ಆದರೆ ಸುಮಾರು 25 ಸಾವಿರ ರು. ದುಬಾರಿಯಾದರೂ ಅಗ್ಗದ ಇಂಧನ ಡ್ರೈವ್ ಮಾಡಲು ಇದು ನೆರವಾಗುತ್ತದೆ. ಪೆಟ್ರೋಲ್ ದರ ದುಬಾರಿ ಎಂಬ ಕಾರಣಕ್ಕೆ ಐ10 ಡೀಸೆಲ್ ಕಾರು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿರುವರು ಈ ಎಲ್ ಪಿಜಿ ಕಾರಿನತ್ತ ಒಮ್ಮೆ ದೃಷ್ಟಿ ಹರಿಸುವುದು ಉತ್ತಮ.


Click it and Unblock the Notifications