ಮಾರುತಿ ಸ್ವಿಫ್ಟ್ ಬುಕ್ಕಿಂಗ್ ಮಾಡಿರುವರಿಗೆ ಸಿಹಿಸುದ್ದಿ

"ಮಾನೆಸರ್ ಘಟಕದಲ್ಲಿ ಎರಡನೇ ಲೈನ್ ಉತ್ಪಾದನೆ ಜನವರಿಯಿಂದ ಆರಂಭವಾಗಲಿದೆ. ಅಲ್ಲಿ ಪ್ರತಿತಿಂಗಳು ಸುಮಾರು 18-20 ಸಾವಿರ ಸ್ವಿಫ್ಟ್ ಉತ್ಪಾದನೆಯಾಗಲಿದೆ. ಇದರಿಂದ ನಾಲ್ಕೈದು ತಿಂಗಳಲ್ಲಿ ಸ್ವಿಫ್ಟ್ ಕಾರನ್ನು ಗ್ರಾಹಕರಿಗೆ ಪೂರೈಸಲು ಸಾಧ್ಯವಾಗಲಿದೆ" ಎಂದು ಮಾರುತಿ ಸುಜುಕಿ ಉತ್ಪಾದನೆ ವಿಭಾಗದ ವ್ಯವಸ್ಥಾಪಕ ಎಂ. ಎಂ. ಸಿಂಗ್ ಹೇಳಿದ್ದಾರೆ.
ಹೀಗಾಗಿ ಸ್ವಿಫ್ಟ್ ಕಾರುಗಳು ಮುಂದಿನ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಗ್ರಾಹಕರ ಕೈಸೇರುವುದು ಗ್ಯಾರಂಟಿಯಾಗಿದೆ. ಎರಡನೇ ಘಟಕ ಉತ್ಪಾದನೆ ಆರಂಭಿಸಿದ ನಂತರ ಪ್ರತಿದಿನಕ್ಕೆ ಸುಮಾರು 2,100 ಸ್ವಿಫ್ಟ್ ಕಾರುಗಳು ಉತ್ಪಾದನೆಯಾಗಲಿವೆಯಂತೆ. ಈಗ ಪ್ರತಿದಿನಕ್ಕೆ 1,400 ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.


Click it and Unblock the Notifications








