ಮಾರುತಿಯ ಗುಜರಾತ್ ಘಟಕ ಸಂಗತಿ ಏನಾಯ್ತು?

ಕಂಪನಿಯು ಗುಜರಾತಿನಲ್ಲಿ ಘಟಕ ನಿರ್ಮಿಸಲು ಈ ಹಿಂದೆ ಯೋಜಿಸಿತ್ತು. ಈ ಘಟಕಕ್ಕೆ ಸುಮಾರು 4 ಸಾವಿರ ಕೋಟಿ ರುಪಾಯಿಗಿಂತ ಹೆಚ್ಚು ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಆದರೆ ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆ ಮತ್ತು ಕಾರು ಮಾರಾಟ ಇಳಿಕೆಯಿಂದ ಕಂಪನಿಯ ಆದಾಯ ಖೋತಾವಾಗಿತ್ತು. ಪ್ರಮುಖವಾಗಿ ಹಬ್ಬದ ಸೀಸನಿನಲ್ಲೇ ಮಾರಾಟ ಗಮನಾರ್ಹವಾಗಿ ಇಳಿಕೆ ಕಂಡಿತ್ತು.
ಕಂಪನಿಯು ದೀರ್ಘಕಾಲದ ಹೂಡಿಕೆ ಕುರಿತು ಆಲೋಚಿಸುತ್ತಿದೆ. ಆದರೆ ಕೆಲವು ಹೂಡಿಕೆ ಯೋಜನೆಗಳನ್ನು ಮುಂದಿನ ಆರು ತಿಂಗಳ ಕಾಲ ತಡೆ ಹಿಡಿದಿದ್ದೇವೆ ಎಂದು ಮಾರುತಿ ಚೇರ್ಮೆನ್ ಆರ್ ಸಿ ಭಾರ್ಗವ ಹೇಳಿದ್ದಾರೆ. ಗುಜರಾತ್ ಘಟಕಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ ಘಟಕ ನಿರ್ಮಾಣ ಶೀಘ್ರದಲ್ಲಿ ಆರಂಭವಾಗದು ಎಂಧಿದ್ದಾರೆ.
ಗುಜರಾತ್ ಘಟಕ ನಿರ್ಮಾಣ ಮುಂದಿನ ಎರಡು ಅಥವಾ ಮೂರು ವರ್ಷಗಳ ನಂತರ ಆರಂಭವಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಗುಜರಾತ್ ಘಟಕ ಕೂಡ ಮಾನೆಸರ್ ಘಟಕದಂತೆ ಅತ್ಯಧಿಕ ಉತ್ಪಾದನೆ ಸಾಮರ್ಥ್ಯ ಹೊಂದಲಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications








