ಲಕ್ಷ ಡೀಸೆಲ್ ಎಂಜಿನ್: ಫಿಯೆಟ್ ಜೊತೆ ಮಾರುತಿ ಡೀಲ್

Maruti To Buy One Lakh Diesel Engines From Fiat
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ಇಟಲಿಯ ಫಿಯೆಟ್ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಮಾರುತಿ ಸುಜುಕಿಗೆ ವರ್ಷಕ್ಕೆ ಒಂದು ಲಕ್ಷ ಡೀಸೆಲ್ ಎಂಜಿನ್ ಫಿಯೆಟ್ ಪೂರೈಸಬೇಕಿದೆ.

ಸ್ವಿಫ್ಟ್ ಡೀಸೆಲ್ ಹ್ಯಾಚ್ ಬ್ಯಾಕ್ ಕಾರಿನ ಉತ್ಪಾದನೆ ಹೆಚ್ಚಿಸಲು ಈ ಒಪ್ಪಂದ ನೆರವಾಗಲಿದೆ ಎಂದು ಮಾರುತಿ ಹೇಳಿದೆ. ಡೀಸೆಲ್ ಕಾರಿಗೆ ಅತ್ಯಧಿಕ ಬೇಡಿಕೆಯಿದ್ದರೂ ಎಂಜಿನ್ ಕೊರತೆಯಿಂದ ಡೀಸೆಲ್ ಕಾರುಗಳನ್ನು ಸಮರ್ಪಕವಾಗಿ ಪೂರೈಸಲು ಕಂಪನಿಗೆ ಅಸಾಧ್ಯವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕವಾಗಿ ಬೇಡಿಕೆಯಿದೆ. ಈ ಹಿಂದೆ ಕಂಪನಿಗಳು 80:20 ಅನುಪಾತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಉತ್ಪಾದಿಸುತ್ತಿದ್ದವು. ಅಂದರೆ ಶೇಕಡ 20ರಷ್ಟು ಡೀಸೆಲ್ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಉಲ್ಟಾ ಆಗಿದೆ.

ಕೆಲವು ತಿಂಗಳ ಹಿಂದೆ ಮಾರುತಿ ಸುಜುಕಿ ನೂತನ ಸ್ವಿಫ್ಟ್ ಕಾರನ್ನು ಹೊರತಂದಿತ್ತು. ಇದನ್ನು ಲಕ್ಷ ಸಂಖ್ಯೆಯಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಆದರೆ ಶೇಕಡ 80ರಷ್ಟು ಜನರು ಸ್ವಿಫ್ಟ್ ಡೀಸೆಲ್ ಆವೃತ್ತಿಯನ್ನು ಬುಕ್ ಮಾಡಿರುವುದು ವಿಶೇಷ.

"ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದರೂ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಸಾಮರ್ಥ್ಯ ನಮ್ಮಲ್ಲಿ ಈಗ ಇಲ್ಲ" ಎಂದು ಮಾರುತಿ ಸುಜುಕಿ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದರು.

ಫಿಯೆಟ್ ಕಂಪನಿಯು ಮಾರುತಿಗೆ ಡೀಸೆಲ್ ಎಂಜಿನ್ ಪೂರೈಸುವುದು ಇದೇ ಮೊದಲಲ್ಲ. ಮಾರುತಿಯ ಡೀಸೆಲ್ ಆವೃತ್ತಿಗಳಿಗೆ ಫಿಯೆಟ್ ಎಂಜಿನ್ ಅಳವಡಿಸಲಾಗಿದೆ. ಟಾಟಾ ಮೋಟರ್ಸ್ ಕೂಡ ಡೀಸೆಲ್ ಕಾರುಗಳಿಗೆ ಫಿಯೆಟ್ ಎಂಜಿನ್ ಬಳಸುತ್ತಿದೆ.

More from DriveSpark

Article Published On: Wednesday, November 30, 2011, 9:46 [IST]
English summary
Maruti Suzuki, India's leading carmaker has signed a deal with Italian carmaker Fiat to purchase one lakh diesel engines per year. Maruti has said this deal will help it increase production of the diesel Swift hatchback. Maruti has not been able to respond to the increased demand for diesel cars as it does not have sufficient supply of diesel engines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+