ಮಾರುತಿ ಸುಜುಕಿ: ಇನ್ನಷ್ಟು ಸಿಎನ್ ಜಿ ಕಾರುಗಳು

ದೇಶದ ರಸ್ತೆಗೆ ಇನ್ನಷ್ಟು ಅನಿಲ ಚಾಲಿತ(ಸಿಎನ್ ಜಿ) ಕಾರುಗಳನ್ನು ಪರಿಚಯಿಸಲು ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ಯೋಜಿಸಿದೆ. ಈಗ ಕಂಪನಿಯ ಆಲ್ಟೊ, ವ್ಯಾಗನರ್, ಎಸ್ಟಿಲೊ, ಇಕೊ ಮತ್ತು ಎಸ್ ಎಕ್ಸ್ 4 ಆವೃತ್ತಿಗಳು ಸಿಎನ್ ಜಿ ಆಯ್ಕೆಯಲ್ಲಿ ದೊರಕುತ್ತಿವೆ.

"ಈಗ ಲಭ್ಯವಿರುವ ಸಿಎನ್ ಜಿ ವಾಹನಗಳಿಗೆ ಮಾರುತಿ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆಯಿದೆ. ಇನ್ನು ಮುಂದೆ ಇನ್ನಷ್ಟು ಕಾರುಗಳು ಸಿಎನ್ ಜಿ ಆಯ್ಕೆಯಲ್ಲಿ ದೊರಕುವಂತೆ ಮಾಡಲಿದ್ದೇವೆ" ಎಂದು ಮಾರುತಿ ಸುಜುಕಿ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದಾರೆ.

ಆದರೆ ಯಾವ ಕಾರುಗಳಿಗೆ ಸಿಎನ್ ಜಿ ಎಂಜಿನ್ ಅಳವಡಿಸಲಾಗುವುದು ಎಂಬ ಪ್ರಶ್ನೆಗೆ ಭಾರ್ಗವ ಉತ್ತರಿಸಲು ನಿರಾಕರಿಸಿದ್ದಾರೆ. ಪರಸರ ಸ್ನೇಹಿ ಪರ್ಯಾಯ ಇಂಧನ ಬಳಕೆಗೆ ಸರಕಾರದ ನೆರವೂ ಅಗತ್ಯವಿದೆ ಎಂದು ಭಾರ್ಗವ ಹೇಳಿದ್ದಾರೆ.

"ದೇಶದ ಎಲ್ಲಾ ಕಡೆಗಳಲ್ಲಿ ಸಿಎನ್ ಜಿ ಲಭ್ಯವಿರುವಂತೆ ನೋಡಿಕೊಳ್ಳಲು ಸರಕಾರದ ಬೆಂಬಲವೂ ಅಗತ್ಯವಿದೆ" ಎಂದರು. ಇದರೊಂದಿಗೆ ಮಾರುತಿ ಸುಜುಕಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಕೂಡ ಯೋಜಿಸಿದೆಯಂತೆ.

"ಭಾರತದ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಮಾರುತಿ ಸುಜುಕಿ ಎಂಜಿನಿಯರ್ ಗಳು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನೂ ಅಭಿವೃದ್ಧಿಪಡಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

More from DriveSpark

Article Published On: Monday, November 21, 2011, 11:58 [IST]
English summary
Maruti Suzuki India is planning to add more models with environment-friendly CNG option. Now company offers five models in CNG options- Alto, WagonR and Estilo, multi-purpose van Eeco, and sedan SX4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+