ಇಂದಿನ ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಸ್ಥಿರ!
ದೈನಂದಿನ ಬಜೆಟ್ ನಿರ್ಧರಿಸುವಲ್ಲಿ ಇಂಧನ ದರದ್ದೇ ಪ್ರಮುಖ ಪಾತ್ರ. ಅಕ್ಟೋಬರ್ 13, ಮಂಗಳವಾರದಂದು ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸ್ಥಿರವಾಗಿವೆ. ರಾಜ್ಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆಯಿಲ್ಲದ ಕಾರಣ ನಗರಗಳ ನಡುವಿನ ದರ ವ್ಯತ್ಯಾಸ ಹಾಗೆಯೇ ಇದೆ. ದಿನನಿತ್ಯ ಸಂಚರಿಸುವ ಸವಾರರು ಸರಿಯಾದ ಡ್ರೈವಿಂಗ್ ಅಭ್ಯಾಸ ಮತ್ತು ಸಣ್ಣಪುಟ್ಟ ಪರಿಶೀಲನೆಗಳ ಮೂಲಕ ಇಂಧನ ವೆಚ್ಚವನ್ನು ಕೊಂಚ ಕಡಿತಗೊಳಿಸಬಹುದು. ದೈನಂದಿನ ಪ್ರಯಾಣದ ವೆಚ್ಚವನ್ನು ಲೆಕ್ಕ ಹಾಕಲು ಮತ್ತು ಉಳಿತಾಯ ಮಾಡಲು ಕೆಳಗಿನ ಕೋಷ್ಟಕ ಮತ್ತು ಕ್ಯಾಲ್ಕುಲೇಟರ್ ಬಳಸಿ.
ತೈಲ ಮಾರಾಟ ಕಂಪನಿಗಳ (OMC) ಡೇಟಾವನ್ನು ಆಧರಿಸಿ ಬೆಳಿಗ್ಗೆ 6:30ಕ್ಕೆ ನಗರವಾರು ದರಗಳನ್ನು ಸರಿಪೂಲಿಸಿ ಪ್ರಕಟಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ ಇಂಧನ ದರ ಪರಿಷ್ಕರಣೆಯಾಗುವ ನಿಯಮವಿದ್ದರೂ, ಮೇ ತಿಂಗಳ ಅಂತ್ಯದಿಂದ ಪ್ರಮುಖ ಮಹಾನಗರಗಳಲ್ಲಿ ದರಗಳಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ. ಇಂದಿನ ಬೆಲೆಗಳ ವಿವರಕ್ಕೆ ಕೆಳಗಿನ ಕೋಷ್ಟಕ ನೋಡಿ. ನಿಮ್ಮ ಏರಿಯಾದ ಪೆಟ್ರೋಲ್ ಬಂಕ್‌ನಲ್ಲಿರುವ ನಿಖರ ದರ ತಿಳಿಯಲು ಕೆಳಗೆ ನೀಡಲಾದ ಆ್ಯಪ್ ಅಥವಾ ಎಸ್‌ಎಂಎಸ್ ವ್ಯವಸ್ಥೆ ಬಳಸಿ.

ಇಂದಿನ ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು-ದೆಹಲಿ-ಮುಂಬೈ-ಚೆನ್ನೈ
| ನಗರ | ಪೆಟ್ರೋಲ್ (₹/ಲೀ) | ಡೀಸೆಲ್ (₹/ಲೀ) |
|---|---|---|
| ಬೆಂಗಳೂರು | 110.89 | 98.80 |
| ದೆಹಲಿ | 102.12 | 95.20 |
| ಮುಂಬೈ | 111.21 | 97.83 |
| ಚೆನ್ನೈ | 107.77 | 99.55 |
ಸಿಎನ್‌ಜಿ (CNG) ವಾಹನ ಚಾಲಕರಿಗೆ ಇಂದಿನ ದರ ಕೊಂಚ ಭಿನ್ನವಾಗಿದೆ. ಆಗಸ್ಟ್ 29ರ ದರ ಏರಿಕೆಯ ನಂತರ ಇಂದ್ರಪ್ರಸ್ಥ ಗ್ಯಾಸ್ ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಕೆಜಿಗೆ ₹86.98 ಎಂದು ನಿಗದಿಪಡಿಸಿದೆ. ಮಹಾನಗರ ಗ್ಯಾಸ್ ಮುಂಬೈನಲ್ಲಿ ₹89 ಹಾಗೂ ಪುಣೆಯ ಎಂಎನ್‌ಜಿಎಲ್ (MNGL) ₹97.75 ದರ ಹೊಂದಿದೆ. ಇನ್ನು ಹಬ್ಬದ ಅಡುಗೆ ತಯಾರಿ ನಡೆಸುತ್ತಿರುವ ಗೃಹಿಣಿಯರಿಗೆ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ದೆಹಲಿಯಲ್ಲಿ ₹942, ಮುಂಬೈನಲ್ಲಿ ₹941.5 ಮತ್ತು ಚೆನ್ನೈನಲ್ಲಿ ₹957.5 ಆಗಿದೆ.
ಅಧಿಕೃತ ಪೆಟ್ರೋಲ್, ಡೀಸೆಲ್ ದರ ಚೆಕ್ ಮಾಡುವುದು ಹೇಗೆ?
ಇಂಧನ ಕಂಪನಿಗಳ ಅಧಿಕೃತ ದರ ತಿಳಿಯುವುದು ತುಂಬಾ ಸುಲಭ. ಇಂಡಿಯನ್ ಆಯಿಲ್ ಗ್ರಾಹಕರು 'IndianOil ONE' ಆ್ಯಪ್ ಬಳಸಬಹುದು ಅಥವಾ 92249 92249 ಸಂಖ್ಯೆಗೆ RSP ಎಂದು ಎಸ್‌ಎಂಎಸ್ ಕಳುಹಿಸಬಹುದು. ಬಿಪಿಸಿಎಲ್ (BPCL) ಗ್ರಾಹಕರು 'Hello BPCL' ಆ್ಯಪ್ ಅಥವಾ 9223112222 ಸಂಖ್ಯೆಗೆ RSP ಎಂದು ಮೆಸೇಜ್ ಕಳುಹಿಸಿ ದರ ತಿಳಿಯಬಹುದು. ಎಚ್‌ಪಿಸಿಎಲ್ (HPCL) ಗ್ರಾಹಕರು 'HP Pay' ಆ್ಯಪ್ ಅಥವಾ 9222201122 ಸಂಖ್ಯೆಗೆ HPPRICE ಎಂದು ಎಸ್‌ಎಂಎಸ್ ಮಾಡಬಹುದು. ಅಂದಹಾಗೆ, ಪೆಟ್ರೋಲ್ ಬಂಕ್‌ನ ಡಿಸ್ಪ್ಲೇನಲ್ಲಿ ತೋರಿಸುವ ದರವೇ ಅಂತಿಮವಾಗಿರುತ್ತದೆ.
ಪ್ರಯಾಣದ ವೆಚ್ಚದ ಲೆಕ್ಕಾಚಾರ ಮತ್ತು ಮೈಲೇಜ್ ಟಿಪ್ಸ್
| ದೂರ | ಪೆಟ್ರೋಲ್ ವೆಚ್ಚ - 16 ಕಿಮೀ/ಲೀ ಮೈಲೇಜ್‌ಗೆ (ದೆಹಲಿ ದರ ₹102.12) | ಡೀಸೆಲ್ ವೆಚ್ಚ - 20 ಕಿಮೀ/ಲೀ ಮೈಲೇಜ್‌ಗೆ (ದೆಹಲಿ ದರ ₹95.20) |
|---|---|---|
| 100 ಕಿಮೀ | ₹638 | ₹476 |
| 300 ಕಿಮೀ | ₹1,915 | ₹1,428 |
| 500 ಕಿಮೀ | ₹3,191 | ₹2,380 |
ದೆಹಲಿ ಇಂಧನ ದರ ಹಾಗೂ ಸಾಧಾರಣ ಮೈಲೇಜ್ ಆಧಾರದ ಮೇಲೆ ಈ ವೆಚ್ಚವನ್ನು ಲೆಕ್ಕ ಹಾಕಲಾಗಿದೆ. ಪೆಟ್ರೋಲ್ ಕಾರಿಗೆ ಲೀಟರ್‌ಗೆ 16 ಕಿಮೀ ಮತ್ತು ಡೀಸೆಲ್ ಕಾರಿಗೆ ಲೀಟರ್‌ಗೆ 20 ಕಿಮೀ ಮೈಲೇಜ್ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ನಿಮ್ಮ ಕಾರಿನ ಮೈಲೇಜ್ ಮತ್ತು ನಿಮ್ಮ ನಗರದ ಇಂಧನ ಬೆಲೆಗೆ ಅನುಗುಣವಾಗಿ ಇದನ್ನು ಬದಲಾಯಿಸಿ ಲೆಕ್ಕ ಹಾಕಿಕೊಳ್ಳಬಹುದು. ಎಕ್ಸಿಲರೇಟರ್ ಮೇಲೆ ಮೃದುವಾದ ಚಾಲನೆ, ಸರಿಯಾದ ಸಮಯಕ್ಕೆ ಗೇರ್ ಬದಲಾವಣೆ, ಸರಿಯಾದ ಟೈರ್ ಗಾಳಿ, ವೀಲ್ ಅಲೈನ್‌ಮೆಂಟ್ ಮತ್ತು ಕಾರಿನ ಹಿಂಭಾಗದಲ್ಲಿ ಅನಗತ್ಯ ತೂಕ ಇಡದಿರುವುದು ತಕ್ಷಣವೇ ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಾಗುತ್ತವೆ.
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ರೂಪಾಯಿ ಮೌಲ್ಯ ಮತ್ತು ರಾಜ್ಯಗಳ ತೆರಿಗೆ ದರಗಳು ಸಮತೋಲನದಲ್ಲಿರುವುದರಿಂದ ಪ್ರಸ್ತುತ ದರಗಳು ಸ್ಥಿರವಾಗಿವೆ. ಸದ್ಯಕ್ಕೆ ತೈಲ ಕಂಪನಿಗಳು ಯಾವುದೇ ಹೊಸ ದರ ಪರಿಷ್ಕರಣೆಗೆ ಕೈಹಾಕಿಲ್ಲ. ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ ದರಗಳು ಅಪ್‌ಡೇಟ್ ಆಗುವುದರಿಂದ, ಆಫೀಸ್‌ಗೆ ಹೊರಡುವ ಮುನ್ನ ಅಥವಾ ಹಬ್ಬದ ಪ್ರಯಾಣ ಆರಂಭಿಸುವ ಮುಂಚೆ ಇಂಧನ ದರ ಚೆಕ್ ಮಾಡುವುದು ಒಳಿತು. ಸಣ್ಣಪುಟ್ಟ ಮೈಲೇಜ್ ಟಿಪ್ಸ್ ಪಾಲಿಸಿದರೂ ಇಡೀ ಹಬ್ಬದ ಋತುವಿನಲ್ಲಿ ದೊಡ್ಡ ಮೊತ್ತದ ಹಣ ಉಳಿತಾಯ ಮಾಡಬಹುದು.


Click it and Unblock the Notifications
