ಸೆಪ್ಟೆಂಬರ್ ನಲ್ಲಿ ಮಾರುತಿ ಸುಜುಕಿ ಮಾರಾಟ ಇಳಿಕೆ

ಮಾರುತಿ ಸುಜುಕಿ ಸಂಕಷ್ಟಕ್ಕೆ ಪ್ರಮುಖ ಕಾರಣ ಮಾನೆಸರ್ ಘಟಕದಲ್ಲಿನ ನೌಕರರ ಕಿರಿಕಿರಿ. ಇದು ಮಾರಾಟ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೇ ಸಮಯದಲ್ಲಿ ಸ್ವಿಫ್ಟ್ ಉತ್ಪಾದನೆಗೂ ಭಾರಿ ಹಿನ್ನಡೆಯಾಗಿತ್ತು.
"ಕಾರ್ಮಿಕರ ವಿಷಯವು ಸೆಪ್ಟಂಬರ್ ಮಾರಾಟ ಇಳಿಕೆಗೆ ಪ್ರಮುಖ ಕಾರಣ" ಎಂದು ಕಂಪನಿ ಒಪ್ಪಿದೆ. ಕಳೆದ ತಿಂಗಳು ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ 78,816 ಕಾರು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್ ನ 95,148 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 17.2ರಷ್ಟು ಇಳಿಕೆಯಾಗಿದೆ.
ಇದೇ ಸಮಯದಲ್ಲಿ ಕಂಪನಿಯ ಕಾರು ರಫ್ತು 6,749 ಯುನಿಟ್ ತಲುಪಿದ್ದು ಶೇಕಡ 47.5ರಷ್ಟು ಇಳಿಕೆ ಕಂಡಿದೆ. ಕಂಪನಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 12,859 ಕಾರು ರಫ್ತು ಮಾಡಿತ್ತು. ಮಾನೆಸರ್ ಘಟಕದಲ್ಲಿ ಎ-ಸ್ಟಾರ್ ಉತ್ಪಾದನೆ ಸ್ಥಗಿತಗೊಳಿಸಿರುವುದೇ ರಫ್ತು ಇಳಿಕೆಗೆ ಕಾರಣವಾಗಿದೆ.
ಕಳೆದ ತಿಂಗಳು ಕಂಪನಿಯ ಸಣ್ಣ ಕಾರು ಮಾರುತಿ 800, ಎಸ್ಟಾರ್ ಮತ್ತು ವ್ಯಾಗನಾರ್ ಮಾರಾಟ ಶೇ. 23.5ರಷ್ಟು ಇಳಿಕೆ ಕಂಡಿದೆ. ಆದರೆ ಸ್ವಿಫ್ಟ್ ಡಿಜೈರ್ ಮಾರಾಟ ಮಾತ್ರ ಏರಿಕೆ ದಾಖಲಿಸಿ ಕಂಪನಿಗೆ ಸಂತೋಷ ನೀಡಿದೆ. ಕಳೆದ ತಿಂಗಳು ಕಂಪನಿಯು 9,411 ಡಿಜೈರ್ ಕಾರು ಮಾರಾಟ ಮಾಡಿದ್ದು, ಶೇಕಡ 9.9ರಷ್ಟು ಏರಿಕೆ ದಾಖಲಿಸಿದೆ.
ಎಸ್ಎಕ್ಸ್4 ಸೆಡಾನ್ ಕಾರು ಮಾರಾಟ ಶೇಕಡ 90ರಷ್ಟು ಇಳಿಕೆ ಕಂಡಿದೆ. ಮಾರುತಿ ಸುಜುಕಿ ಕಳೆದ ತಿಂಗಳು ಕೇವಲ 14 ಕಿಝಾಷಿ ಕಾರು ಮಾರಾಟ ಮಾಡಿದೆ. ಮುಂದಿನ ಹಬ್ಬದ ಸೀಸನ್ ನಲ್ಲಿ ಕಾರು ಮಾರಾಟ ಹೆಚ್ಚಾಗುವ ಸಕಾರಾತ್ಮಕ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.
ನ್ಯಾನೊ ಮಾರಾಟ ಹೇಗಿದೆ? ಮುಂದಿನ ಪುಟ ನೋಡಿ...


Click it and Unblock the Notifications








