ಟಾಟಾ ಮಾರಾಟ ಹೆಚ್ಚಳ, ಆದರೆ ನ್ಯಾನೊ ಪಾಪರ್

ಪ್ರಸಕ್ತ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯು ಒಟ್ಟಾರೆ 78,786 ವಾಹನ ಮಾರಾಟ ಮಾಡಿದೆ. 2010ರ ಸೆಪ್ಟೆಂಬರ್ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳ ಮಾರಾಟ ಶೇಕಡ 22ರಷ್ಟು ಏರಿಕೆ ಯಾಗಿದೆ.
ಕಂಪನಿಯ ದೇಶಿಯ ಮಾರಾಟ ಸೆಪ್ಟೆಂಬರ್ ನಲ್ಲಿ 72,566 ಯುನಿಟ್ ಗೆ ತಲುಪಿದ್ದು, ಕಳೆದ ವರ್ಷದ ಸೆಪ್ಟೆಂಬರ್ ನ 59,611 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡಿದೆ.
ದೇಶದಲ್ಲಿ ಒಟ್ಟು 26,319 ಟಾಟಾ ಪ್ರಯಾಣಿಕ ವಾಹನ ಮಾರಾಟವಾಗಿದೆ. ಫಿಯೆಟ್ ಮಾರಾಟ 818 ಯುನಿಟ್ ಆಗಿದೆ.
ಆದರೆ ಟಾಟಾ ಕಂಪನಿಯ ಅಗ್ಗದ ಪುಟ್ಟ ಕಾರು ನ್ಯಾನೊ ಮಾರಾಟ ಇಳಿಕೆ ಮುಂದುವರೆಸಿದೆ. ಕಳೆದ ವರ್ಷದ ಸೆಪ್ಟೆಂಬರ್ ನ್ಯಾನೊ ಮಾರಾಟಕ್ಕೆ ಹೋಲಿಸಿದರೆ ಶೇಕಡ 47ರಷ್ಟು ಇಳಿಕೆ ಕಂಡಿದೆ. ಕಂಪನಿಯು 2011ರ ಸೆಪ್ಟಂಬರ್ ತಿಂಗಳಲ್ಲಿ 2,936 ನ್ಯಾನೊ ಕಾರು ಮಾರಾಟ ಮಾಡಿತ್ತು.
ಕಳೆದ ತಿಂಗಳು ಇಂಡಿಕಾ ಕಾರು ಮಾರಾಟ ಭರ್ಜರಿಯಾಗಿ ಏರಿಕೆ ಕಂಡಿದೆ. ಕಂಪನಿಯು ಸೆಪ್ಟಂಬರ್ ತಿಂಗಳಲ್ಲಿ 10,282 ಯುನಿಟ್ ಇಂಡಿಕಾ ಮಾರಾಟ ಮಾಡಿದ್ದು ಕಳೆದ ವರ್ಷದ ಸೆಪ್ಟೆಂಬರ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 64ರಷ್ಟು ಏರಿಕೆ ಕಂಡಿದೆ. ಇಂಡಿಗೊ ಕಾರು ಮಾರಾಟ 7,793 ಯುನಿಟ್ ತಲುಪಿದ್ದು ಶೇಕಡ 11ರಷ್ಟು ಇಳಿಕೆ ಕಂಡಿದೆ ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications








