ಮಾರುತಿ ಸ್ವಿಫ್ಟ್ ಡೀಸೆಲ್: ಒಂದು ಆಶಾವಾದ

Maruti Suzuki Swift diesel
2011 ವರ್ಷವನ್ನು ಮಾರುತಿ ಸುಜುಕಿ ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಒಂದು ಕಡೆಯಿಂದ ನೌಕರರ ಪ್ರತಿಭಟನೆ ಕಂಪನಿಯನ್ನು ಹಿಂಡಿಹಿಪ್ಪೆ ಮಾಡಿತ್ತು. ಅತ್ಯಧಿಕ ಬಡ್ಡಿದರ, ಆರ್ಥಿಕ ಹಿನ್ನಡೆ, ಇಂಧನ ದರ ಏರಿಕೆ, ಡಾಲರ್ ಮತ್ತು ರೂಪಾಯಿ ಮೌಲ್ಯಗಳ ಕಣ್ಣಾಮುಚ್ಚಾಲೆ ಕಂಪನಿಗೆ ಹೊಡೆತ ನೀಡಿತ್ತು.

ನವೆಂಬರ್ 2010ರಿಂದ ನವೆಂಬರ್ 2011ರವರೆಗೆ ಮಾರುತಿ ಮಾರಾಟ ಶೇಕಡ 18.5ರಷ್ಟು ಇಳಿಕೆ ಕಂಡಿದೆ. ಜೊತೆಗೆ ಕಂಪನಿಯ ಷೇರು ದರ 962 ರುಪಾಯಿಗೆ ತಲುಪಿ ಶೇಕಡ 0.7ರಷ್ಟು ಇಳಿಕೆ ಕಂಡಿತ್ತು.

ಇಂತಹ ಸಮಯದಲ್ಲಿ ಮುಂಬರುವ ವರ್ಷ ಮಾರುತಿಗೆ ಕೊಂಚ ಆಶಾದಾಯಕವಾಗಿದೆ ಎನ್ನಬಹುದು. ಯಾಕೆಂದರೆ ಕಂಪನಿಯ ಡೀಸೆಲ್ ಕಾರು ಉತ್ಪಾದನೆ ಜನವರಿಯಿಂದ ವೇಗ ಪಡೆದುಕೊಳ್ಳಲಿದೆ.

ಪೆಟ್ರೋಲ್ ದರ ಹೆಚ್ಚಾದ ಕಾರಣ ಹೆಚ್ಚಿನ ಜನರು ಡೀಸೆಲ್ ಕಾರುಗಳತ್ತ ಗಮನ ನೀಡಲಾರಂಭಿಸಿದರು. ಡೀಸೆಲ್ ಕಾರುಗಳ ಸಾಧಕ ಬಾಧಕಗಳ ಕುರಿತು ಯೋಚಿಸದೇ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಎಲ್ಲರೂ ಡೀಸೆಲ್ ಕಾರು ಖರೀದಿಸುತ್ತಿದ್ದಾರೆ.

ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಎಂಜಿನ್ ನ್ನು ಫಿಯೆಟ್ ಕಂಪನಿಯಿಂದ ಖರೀದಿಸುತ್ತಿದೆ. ಈ ಕುರಿತು ಕಂಪನಿಯು ಇತ್ತೀಚೆಗೆ ಫಿಯೆಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಜನವರಿ ನಂತರ ಕಂಪನಿಯು ಪ್ರತಿತಿಂಗಳು ಸುಮಾರು 25 ಸಾವಿರ ಡೀಸೆಲ್ ಎಂಜಿನ್ ಪಡೆಯಲಿದೆ.

ಕಳೆದ ಆಗಸ್ಟ್ ನಲ್ಲಿ ಮಾರುತಿ ಹೊರತಂದ ಸ್ವಿಫ್ಟ್ ಡೀಸೆಲ್ ಕಾರಿಗೆ ಸುಮಾರು ಒಂದು ಲಕ್ಷ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಆದರೆ ಮಾನೆಸರ್ ಘಟಕದಲ್ಲಿ ಪ್ರತಿಭಟನೆ ನಡೆದ ಕಾರಣ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಮೂಲಗಳ ಪ್ರಕಾರ ಕಂಪನಿಯು ಮುಂದಿನ ವರ್ಷ ಕಾರು ದರಗಳನ್ನು ತುಸು ತಗ್ಗಿಸಲಿದೆಯಂತೆ.

ಮುಂದಿನ ವರ್ಷದ ಆರಂಭದಿಂದ ಮಾರುತಿ ಸುಜುಕಿಗೆ ಒಳ್ಳೆಯ ದಿನಗಳು ಆರಂಭವಾಗುವ ನಿರೀಕ್ಷೆಯಿದೆ. ಯಾಕೆಂದರೆ ಡೀಸೆಲ್ ಕಾರುಗಳ ಉತ್ಪಾದನೆ ಹೆಚ್ಚಾದರೆ ಇನ್ನಷ್ಟು ಗ್ರಾಹಕರು ಸ್ವಿಫ್ಟ್ ಕಾರು ಬುಕ್ಕಿಂಗ್ ಮಾಡಬಹುದು. ಸದ್ಯ ಕಂಪನಿಗೆ ಮಾರಾಟ ಹೆಚ್ಚಿಸಲು ಸ್ವಿಫ್ಟ್ ಡೀಸೆಲ್ ಕಾರು ಒಂದು ಆಶಾವಾದ.

More from DriveSpark

Article Published On: Monday, December 5, 2011, 10:35 [IST]
English summary
Maruti Suzuki received more than 100,000 units booking for the Swift diesel. But labor strikes, sluggish auto sales, slow economy and high interest rates decreased company car sales. Next year company increasing deasel car sales. It will help increase company sales volume.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+