ಮೂರು ಮಿನಿ ಕಾರು ಬರೋದು ಗ್ಯಾರಂಟಿ

ಮುಂದಿನ ವರ್ಷ ಆರಂಭದಲ್ಲಿಯೇ ಮಿನಿ ಭಾರತಕ್ಕೆ ಪಾದರ್ಪಣೆ ಮಾಡಲಿದೆ. ಅಂದರೆ 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಮೂರು ಮಿನಿ ಆವೃತ್ತಿಗಳು ಪ್ರದರ್ಶನಗೊಳ್ಳಲಿದೆ. ಕಂಪನಿಯು ಮೂರು ಮಿನಿ ಆವೃತ್ತಿಗಳನ್ನು ದೇಶದ ರಸ್ತೆಗೆ ಪರಿಚಯಿಸಲು ಯೋಜಿಸಿದೆ. ಇದನ್ನು ಬಿಎಂಡಬ್ಲ್ಯು ಇಂಡಿಯಾ ಮುಖ್ಯಸ್ಥ ಆಂಡ್ರಿಸ್ ಸ್ಕಾಫ್ ಖಚಿತ ಪಡಿಸಿದ್ದಾರೆ.
ಮಿನಿ ಇಂಡಿಯಾ ಕಂಪನಿಯು ಮೂರು ಡೋರಿನ ಮಿನಿ ಕಾರು, ಮಿನಿ ಕೂಪರ್ ಕನ್ವರ್ಟಿಬಲ್ ಮತ್ತು ಮಿನಿ ಕಂಟ್ರಿಮ್ಯಾನ್ ಎಸ್ ಯುವಿ ಎಂಬ ಮೂರು ಆವೃತ್ತಿಗಳನ್ನು ಪರಿಚಯಿಸಲಿದೆ. ಇದು ಸಣ್ಣ ಕಾರಾಗಿದ್ದರೂ ದುಬಾರಿ. ಇದರಲ್ಲಿ ಎಂಟ್ರಿ ಲೆವೆಲ್ ಆವೃತ್ತಿ ದರವೇ ಸುಮಾರು 25 ಲಕ್ಷ ರು. ಇರಲಿದೆ.


Click it and Unblock the Notifications








