ಮೇಡ್ ಇನ್ ಇಂಡಿಯಾ: ಜಾಗ್ವಾರ್ ಲ್ಯಾಂಡ್ ರೋವರ್

ಈಗ ಕಂಪನಿಯು ಒಂದು ಲ್ಯಾಂಡ್ ರೋವರ್ ಕಾರನ್ನು ದೇಶದಲ್ಲಿ ಅಸೆಂಬಲ್ ಮಾಡುತ್ತಿದೆ. ಜಾಗ್ವಾರ್ ಕಾರು ಉತ್ಪಾದನೆ ಇನ್ನೂ ಆರಂಭವಾಗಿಲ್ಲ.
ಲ್ಯಾಂಡ್ ರೋವರ್ ಕಂಪನಿಯು ಕಳೆದ ತಿಂಗಳು ಲ್ಯಾಂಡ್ ರೋವರ್ ಇವೊಕ್ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿತ್ತು. ಇವೊಕ್ ಕಾರಿನ ಪ್ರೀಮಿಯಂ ದರ 44.75 ಲಕ್ಷ ರು. ಈ ದರ ಆಡಿ, ಬೆಂಝ್, ಬಿಎಂಡಬ್ಲ್ಯು ಕಾರುಗಳಿಗೆ ಹೋಲಿಸಿದರೆ ಇವೊಕ್ ದರ ಕೊಂಚ ದುಬಾರಿ.
ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಶೇಕಡ 20ರಷ್ಟು ಪಾಲು ತನ್ನದಾಗಿಸಿಕೊಳ್ಳಲು ಹವಣಿಸುತ್ತಿದೆ. "ಇಲ್ಲಿ ಹೆಚ್ಚು ಹೆಚ್ಚು ಕಾರುಗಳಿಗೆ ಬೇಡಿಕೆಯಾದಂತೆ ನಾವು ಇಲ್ಲೇ ಹೆಚ್ಚು ಕಾರುಗಳನ್ನು ಅಸೆಂಬಲ್ ಮಾಡುತ್ತೇವೆ" ಎಂದು ಜೆಎಲ್ಆರ್ ಇಂಡಿಯಾ ಮುಖ್ಯಸ್ಥ ರೋಹಿತ್ ಸೂರಿ ಹೇಳಿದ್ದಾರೆ.


Click it and Unblock the Notifications








