ನಿಸ್ಸಾನ್ ಸನ್ನಿಗೆ 52 ಸಾವಿರ ರು. ಡಿಸ್ಕೌಂಟ್

ನಿಸ್ಸಾನ್ ಸನ್ನಿ ಕಾರಿಗೆ ಒಟ್ಟಾರೆ 52 ಸಾವಿರ ರು. ಮೌಲ್ಯದ ವಿನಾಯಿತಿ ಘೋಷಿಸಲಾಗಿದೆ. ಅಂದರೆ 27 ಸಾವಿರ ರು. ಮೌಲ್ಯದ ವಿಮೆ ಮತ್ತು 25 ಸಾವಿರ ರು. ಕ್ಯಾಷ್ ವಿನಾಯಿತಿ ನೀಡಲಾಗಿದೆ. ಜೊತೆಗೆ ಫ್ಲೋರ್ ಮ್ಯಾಟ್, ಸನ್ ಶೇಡ್, ನೂತನ ಸೀಟ್ ಕವರ್, ನೆಕ್ ದಿಂಬು ಇತ್ಯಾದಿಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ಇಷ್ಟು ಮಾತ್ರವಲ್ಲದೇ ಸನ್ನಿ ಕಾರಿನೊಂದಿಗೆ ಸುಂದರವಾದ ಅಲಾಯ್ ವೀಲ್, ಮಡ್ ಗಾರ್ಡ್, ಪಾರ್ಕಿಂಗ್ ಸೆನ್ಸಾರ್, ಎಲ್ ಇಡಿ ನಂಬರ್ ಪ್ಲೇಟ್, ರಿಮೋಟ್ ಲಾಕಿಂಗ್ ಇತ್ಯಾದಿ ಫೀಚರುಗಳನ್ನು ಉಚಿತವಾಗಿ ನೀಡುತ್ತಿದೆ. ನಿಸ್ಸಾನ್ ಸನ್ನಿ ಕಾರಿನಲ್ಲಿ ಇರುವ ಕೆಲವು ಪ್ರಮುಖ ಫೀಚರುಗಳು ಟಾಪ್ ಎಂಡ್ ಕಾರುಗಳಲ್ಲಿ ಮಾತ್ರ ಕಾಣಸಿಗುತ್ತವೆ.
ನಿಸ್ಸಾನ್ ಕಂಪನಿಯ ಸನ್ನಿ ಕಾರು ಸೆಪ್ಟಂಬರ್ ತಿಂಗಳಲ್ಲಿ ರಸ್ತೆಗಿಳಿದಿತ್ತು. ಇದರ ಆರಂಭಿಕ ದರ 5.85 ಲಕ್ಷ ರುಪಾಯಿ. ಸದ್ಯ ಸನ್ನಿ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಶೀಘ್ರದಲ್ಲಿ ಕಂಪನಿಯು ಡೀಸೆಲ್ ಎಂಜಿನ್ ಸನ್ನಿ ಕಾರನ್ನು ಅನಾವರಣ ಮಾಡುವ ನಿರೀಕ್ಷೆಯಿದೆ.


Click it and Unblock the Notifications