ನಿಸ್ಸಾನ್ ನೂತನ NV 200: ರಸ್ತೆಗೆ ಯಾವಾಗ?

ನಿಸ್ಸಾನ್ ನೂತನ ಎನ್ ವಿ ಉತ್ಪಾದನೆ ಮುಂದಿನ ವರ್ಷದ ಆರಂಭದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಕಂಪನಿಯು ಅಶೋಕ್ ಲೇಲ್ಯಾಂಡ್ ನೊಂದಿಗೆ ಜಂಟಿ ಉದ್ಯಮ ಹೊಂದಿದೆ. ಎನ್ ವಿ 200 ಎಂಬ ಎಂಪಿವಿ ಹೆಸರು ಬದಲಾಗುವ ಸಾಧ್ಯತೆಯೂ ಇದೆಯೆಂದು ವರದಿಗಳು ಹೇಳಿವೆ. ಎನ್ವಿ ಎಂಬುದು ತಾತ್ಕಾಲಿಕ ಹೆಸರು ಎನ್ನಲಾಗಿದೆ.
ನೂತನ ನಿಸ್ಸಾನ್ ಎಂಯುವಿ ಕಾರು ಟೊಯೊಟಾ ಇನ್ನೋವಾ ಮತ್ತು ಟಾಟಾ ಆರಿಯಾಕ್ಕೆ ಪ್ರತಿಸ್ಪರ್ಧಿ ನೋಡಲಿದೆ. ನೂತನ ಕಾರು ಅಶೋಕ್ ಲೇಲ್ಯಾಂಡಿನ ಚೆನ್ನೈ ಘಟಕದಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದೇ ಘಟಕದಲ್ಲಿ ಅಶೋಕ್ ಲೇಲ್ಯಾಂಡ್ "ದೋಸ್ತ್" ವಾಣಿಜ್ಯ ವಾಹನ ಉತ್ಪಾದಿಸುತ್ತಿದೆ.
ಚೆನ್ನೈ ಘಟಕದ ಉತ್ಪಾದನಾ ಸಾಮರ್ಥ್ಯ ಪ್ರತಿ ವರ್ಷಕ್ಕೆ ಎರಡು ಲಕ್ಷ ಯೂನಿಟ್ ಆಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಲಾಗಿದೆ ಎಂದು ನಿಸ್ಸಾನ್ ಹೇಳಿದೆ. ಇಲ್ಲಿ ಉತ್ಪಾದನೆಯಾಗುವ ಶೇಕಡ 80ರಷ್ಟು ವಾಹನಗಳನ್ನು ಕಂಪನಿ ರಫ್ತು ಮಾಡುತ್ತಿದೆ. ನೂತನ ಎನ್ ವಿ 200 ಕೂಡ ಜಾಗತಿಕ ಮಾರುಕಟ್ಟೆಗೆ ರಫ್ತಾಗುವ ನಿರೀಕ್ಷೆಯಿದೆ.


Click it and Unblock the Notifications