ಡೀಸೆಲ್ ಕಾರಿಗೆ ಆದ್ಯತೆ ನೀಡಲಿದೆಯೇ ನಿಸ್ಸಾನ್?

Nissan will Craft Diesel Engines in India
ದೇಶದ ವಾಹನ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಜಪಾನಿನ ನಿಸ್ಸಾನ್ ಮೋಟರ್ ಕಂಪನಿ ಕೂಡ ಭಾರತದಲ್ಲಿ ಡೀಸೆಲ್ ಎಂಜಿನ್ ನಿರ್ಮಿಸುವ ಕುರಿತು ಚಿಂತಿಸುತ್ತಿದೆ.

ಅಂದ ಹಾಗೆ ಕಂಪನಿಯು ದೇಶದಲ್ಲಿ ಮುಂದಿನ ವರ್ಷ ದೇಶದಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ. ಕಂಪನಿ ಸ್ಥಳೀಯ ಮಾರುಕಟ್ಟೆಗೆ ಪ್ರಾದೇಶಿಕವಾಗಿ ಬಿಡಿಭಾಗಗಳನ್ನು ಉತ್ಪಾದಿಸಲು ಆದ್ಯತೆ ನೀಡಲಿದೆ ಎಂದು ನಿಸ್ಸಾನ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ನಾವು ದೇಶದ ಘಟಕದಲ್ಲಿ ಡೀಸೆಲ್ ಎಂಜಿನ್ ನಿರ್ಮಿಸುವ ಕುರಿತು ಯೋಚಿಸುತ್ತಿದ್ದೇವೆ. ಇದರಿಂದ ನಮ್ಮ ವಾಹನಗಳ ಸ್ಥಳೀಕರಣ ಶೇಕಡ 80ರಷ್ಟು ಪೂರ್ಣವಾಗಲಿದೆ. ನಮ್ಮ ಒಟ್ಟಾರೆ ಹೂಡಿಕೆ 4,500 ಕೋಟಿ ರು.ನಲ್ಲಿ ಡೀಸೆಲ್ ಎಂಜಿನ್ ಘಟಕದ ಹೂಡಿಕೆಯೂ ಸೇರಿದೆ" ಎಂದು ನಿಸ್ಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮುಖ್ಯ ಹಣಕಾಸು ಅಧಿಕಾರಿ ಸುನಿಲ್ ರೇಖಿ ಹೇಳಿದ್ದಾರೆ.

ಒರಂಗಾಮ್ ನಲ್ಲಿರುವ ನಿಸ್ಸಾನ್ ಘಟಕ ವರ್ಷಕ್ಕೆ 2 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಘಟಕವನ್ನು ಫ್ರಾನ್ಸಿನ ರೆನಾಲ್ಟ್ ಸಹಭಾಗಿತ್ವದಲ್ಲಿ ಕಂಪನಿ ನಿರ್ಮಿಸಿತ್ತು. ಇಲ್ಲಿ ಈಗ 1.2 ಲೀಟರ್ ಮತ್ತು 1.5 ಲೀಟರಿನ ಪೆಟ್ರೋಲ್ ಎಂಜಿನ್ ಉತ್ಪಾದಿಸಲಾಗುತ್ತಿದೆ. ಜೊತೆಗೆ ಇಲ್ಲಿ ಮೈಕ್ರಾ ಮತ್ತು ಸನ್ನಿ ಕಾರುಗಳನ್ನು ಇಲ್ಲೇ ಉತ್ಪಾದಿಸಲಾಗುತ್ತಿದೆ.

More from DriveSpark

Article Published On: Friday, November 18, 2011, 12:13 [IST]
English summary
Nissan Motor India Pvt. Ltd planning to make diesel engines at local manufacturing plant. The plan is likely to be initiated by next year. Company wants to enhance the number of local products crafted for domestic market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+