ರೇಂಜ್ ರೋವರ್ ಇವೊಕ್ ರಸ್ತೆಗೆ, ದರ 44 ಲಕ್ಷ ರು.

ದರ ದುಬಾರಿಯಾಗಲು ಕಾರಣ ಈ ಕಾರನ್ನು ಸಂಪೂರ್ಣವಾಗಿ ಬ್ರಿಟನಿನಲ್ಲಿ ಸಿಬಿಯು ಮೂಲಕ ನಿರ್ಮಿಸಿ ಭಾರತಕ್ಕೆ ಆಮದುಮಾಡಿಕೊಳ್ಳಲಾಗಿದೆ. ಒಂದು ವರದಿಯ ಪ್ರಕಾರ ಕಂಪನಿಯು ಟಾಟಾ ಮೋಟರ್ಸ್ ಜೆಮ್ಷೆಡ್ಪುರ ಘಟಕದ ಹತ್ತಿರ ಇವೊಕ್ ಉತ್ಪಾದನೆ ಕೈಗೊಳ್ಳಲಿದೆಯಂತೆ.
ಇತರ ಭಾರಿ ಗಾತ್ರದ ಸ್ಪೋರ್ಟ್ಸ್ ಕಾರುಗಳಿಗೆ ಹೋಲಿಸಿದರೆ ಇದು ಸ್ವಲ್ಪ ಸಣ್ಣ ಕಾರು. ಇವೊಕ್ ವಿನ್ಯಾಸ ಮತ್ತು ಲುಕ್ ಅದರ ಪ್ರತಿಸ್ಪರ್ಧಿ ಕಂಪನಿಗಳ ಕಾರುಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಸವಾರಿಗೆ ಸಾಥ್ ನೀಡಲು ಕಾರಿನೊಳಗೆ ಹತ್ತಾರು ಫೀಚರುಗಳಿವೆ.
ಹೊರವಿನ್ಯಾಸ ಆಕರ್ಷಕ. ನೋಡಲು ಲ್ಯಾಂಡ್ ರೋವರ್ ಕಾರಿನಂತೆಯೇ ಇದೆ. ದೊಡ್ಡದಾದ ಎಲ್ ಇಡಿ ಲ್ಯಾಂಪ್ ಮತ್ತು ಆಕರ್ಷಕ ಗ್ರಿಲ್ ಎದ್ದು ಕಾಣುತ್ತವೆ. ದೊಡ್ಡದಾದ ಚಕ್ರಗಳು ಕಾರಿಗೆ ಹೆಚ್ಚು ಸ್ಪೋರ್ಟಿ ಲುಕ್ ನೀಡುತ್ತದೆ. ಇವೊಕ್ 5 ಡೋರಿನ ಡೀಸೆಲ್ ಮತ್ತು ಮೂರು ಡೋರಿನ ಪೆಟ್ರೋಲ್ ಆವೃತ್ತಿಗಳಲ್ಲಿ ದೊರಕುತ್ತದೆ.


Click it and Unblock the Notifications








