ದೇವೇಗೌಡ ಆಪ್ತ ಐಪಿಎಸ್ ಅಧಿಕಾರಿಯ ಘೋಸ್ಟ್ ಕಥೆ

ಪ್ರಮುಖವಾಗಿ ರಾಜಮನೆತನದವರ ಮದುವೆಗೆ ಬಳಸುವ ರೋಲ್ಸ್ ರಾಯ್ಸ್ ಕಾರನ್ನು ಐಪಿಎಸ್ ಅಧಿಕಾರಿಯೊಬ್ಬರು ತನ್ನ ಮಗನ ಮದುವೆಗೆ ಬಳಸಿದ್ದರು. ಅದು ಕೂಡ ಮಾಜಿ ಪ್ರಧಾನಿ ದೇವೇಗೌಡರ ಆಪ್ತ ಐಪಿಎಸ್ ಅಧಿಕಾರಿ ನಾರಾಯಣ ಗೌಡ. ನಾರಾಯಣ ಗೌಡರ ಮಗ ಅಭಿಷೇಕ್ ಮದುವೆ ಕೃತ್ತಿಯೊಂದಿಗೆ ನಡೆದಿತ್ತು. ಅಲ್ಲಿ ಎದ್ದು ಕಾಣುತ್ತಿದ್ದದ್ದು ರೋಲ್ಸ್ ರಾಯ್ಸ್ ಘೋಸ್ಟ್ ಕಾರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಧರ್ಮಸಿಂಗ್, ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಮುಂತಾದವರು ಮನೆತನದ ಕಾರ್ಯಕ್ರಮಗಳನ್ನು ಗ್ರಾಂಡ್ ಆಗಿ ಮಾಡುತ್ತಾರೆ. ಆದರೆ ಇವರೆಲ್ಲ ಈ ರಾಜಮನೆತನದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬಳಸಿಲ್ಲ. ಇವರು ಬಿಎಂಡಬ್ಲ್ಯು, ಮರ್ಸಿಡಿಸ್ ಕಾರುಗಳಿಗೆ ತೃಪ್ತಿ ಪಡುತ್ತಾರೆ.
ಆದರೆ ಐಪಿಎಸ್ ಅಧಿಕಾರಿ ನಾರಾಯಣ ಗೌಡ ಘೋಸ್ಟ್ ಕಾರಿನ ಮೂಲಕ ಮದುವೆಯನ್ನು ಭರ್ಜರಿಯಾಗಿಯೇ ನಡೆಸಿದ್ದಾರೆ. ಬಳಸಿದರೆ ತಪ್ಪೇನು ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಮದುವೆಗೆ ಇಷ್ಟು ಖರ್ಚು ಮಾಡಬೇಕೆ ಎಂದು ಕೇಳುವುದಷ್ಟೇ ನನ್ನಂತಹ ಜನಸಾಮನ್ಯರ ಪ್ರಶ್ನೆ.
ಇರಲಿ ಕಾರಿನ ವಿಷ್ಯಕ್ಕೆ ಬರೋಣ. ಈ ಕಾರಿನ ದರ ಸುಮಾರು ಮೂರುವರೆ ಕೋಟಿ ರು. ಇದೆ. ಇದನ್ನು ಎರಡು ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿ ಕೆಲವು ಲಕ್ಷ ಬಾಡಿಗೆ ನೀಡಿ ಬಾಡಿಗೆಗೆ ಪಡೆದಿದ್ದರು.
ಈ ಕಾರನ್ನು ಬಾಡಿಗೆ ಕೊಡುವವರು ಬೆಂಗಳೂರಿನಲ್ಲಿ ಯಾರಿದ್ದಾರೆ? ಬೆಂಗಳೂರಿನ ಸುರೇಶ್ ಬಾಬು ಎಂಬ ಕ್ಷೌರಿಕನ ಬಳಿ ಇಂತಹ ಕಾರುಗಳು ಬಾಡಿಗೆಗೆ ದೊರಕುತ್ತಿವೆ. ಬಾರ್ಬರ್ ಬಳಿ ಲಕ್ಷುರಿ ಕಾರುಗಳಿದೆಯಾ ಎನ್ನುವಿರಾ? ಹೆಸರು ಸುರೇಶ್ ಬಾಬು.. ವೃತ್ತಿಯಲ್ಲಿ ಬಾರ್ಬರ್. ಅವರ ಕಥೆ ಮುಂದಿನ ಪುಟದಲ್ಲಿದೆ ಓದಿ..


Click it and Unblock the Notifications








