ಸ್ಕೋಡಾ ರಾಪಿಡ್ ಆನ್ ಲೈನ್ ಬುಕ್ಕಿಂಗ್ ಆರಂಭ

ಸೆಡಾನ್ ಕಾರು ರಾಪಿಡ್ ಅನಾವರಣ ಮಾಡಿದ ನಂತರ ಸ್ಕೊಡಾ ಹೆಚ್ಚು ಹುಮ್ಮಸ್ಸಿನಿಂದಿದೆ. ಕಂಪನಿಯು ನೂತನ ರಾಪಿಡ್ ಪ್ರಚಾರಕ್ಕೆ, ಮಾರಾಟಕ್ಕೆ ಹಲವು ತಂತ್ರಗಳನ್ನು ಆರಂಭಿಸಿದೆ. ಅದರಲ್ಲಿ ಒಂದಂಶದ ಭಾಗವಾಗಿ ಕಂಪನಿಯು ಸದ್ಯ ರಾಪಿಡ್ ಆನ್ ಲೈನ್ ಬುಕ್ಕಿಂಗ್ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

ರಾಪಿಡ್ ಅಂದ್ರೆ ಒಕ್ಟಾವಿಯಾ ಕಾರಿನ ಪಡಿಯಚ್ಚು ಆಗಿದೆ. ಕಂಪನಿಯು ರಾಪಿಡ್ ಮಾರಾಟದ ಕುರಿತು ಸಾಕಷ್ಟು ಆಶಾವಾದ ಹೊಂದಿದೆ. "ಮೊದಲ ದಿನವೇ 18 ಗ್ರಾಹಕರು ರಾಪಿಡ್ ಬುಕ್ಕಿಂಗ್ ಮಾಡಿದ್ದಾರೆ" ಎಂದು ಆನ್ ಲೈನ್ ಬುಕ್ಕಿಂಗ್ ಅನಾವರಣ ಮಾಡಿದ ಸಂದರ್ಭದಲ್ಲಿ ಕಂಪನಿಯ ಮುಖ್ಯಸ್ಥ ಥಾಮಸ್ ಕೊಯಿಲ್ ಹೇಳಿದ್ದಾರೆ.

ರಾಪಿಡ್ ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಬೇಸ್ ಆವೃತ್ತಿ ಹೆಸರು ಆಕ್ಟಿವ್, ಮಧ್ಯಮ ಆವೃತ್ತಿ ಆಂಬಿಷನ್ ಮತ್ತು ಟಾಪ್ ಆವೃತ್ತಿ ಹೆಸರು ಎಲೆಗೆನ್ಸ್. ಎರಡು ಪೆಟ್ರೊಲ್, ಒಂದು ಡೀಸೆಲ್ ಎಂಜಿನ್, ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿ ಸೇರಿದಂತೆ ಒಟ್ಟು 8 ವಿಧದ ರಾಪಿಡ್ ಕಾರು ಮಾರುಕಟ್ಟೆಗೆ ಬಂದಿದೆ. ಈ ಎಲ್ಲಾ ಆವೃತ್ತಿಗಳ ದರ ವೆಂಟೊಗಿಂತ ಕಡಿಮೆ ಇದೆ.

ಸ್ಕೋಡಾ ರಾಪಿಡ್ ಪೆಟ್ರೋಲ್ ದರ: ಆಕ್ಟಿವ್ 6.75 ಲಕ್ಷ ರುಪಾಯಿ, ಆಂಬಿಷನ್ 7.09 ಲಕ್ಷ ರು. ಮತ್ತು ಎಲೆಗೆನ್ಸ್ 7.99 ಲಕ್ಷ ರುಪಾಯಿ ಇದೆ. ಸ್ಕೋಡಾ ರಾಪಿಡ್ ಪೆಟ್ರೋಲ್ ಆಟೋಮ್ಯಾಟಿಕ್ ಆಂಬಿಷನ್ ದರ 8.09 ಲಕ್ಷ ರು ಮತ್ತು ಎಲಿಗೆನ್ಸ್ 8.99 ಲಕ್ಷ ರು. ಇದೆ. ಡೀಸೆಲ್ ಆವೃತ್ತಿ: ಸ್ಕೋಡಾ ರಾಪಿಡ್ ಡೀಸೆಲ್ ಆಕ್ಟಿವಾ ದರ 7.95 ಲಕ್ಷ ರುಪಾಯಿ, ಆಂಬಿಷನ್ ದರ 8.9 ಲಕ್ಷ ರು. ಮತ್ತು ಎಲಿಗೆನ್ಸ್ ದರ 9.19 ಲಕ್ಷ ರು. ಇದೆ.

More from DriveSpark

Article Published On: Friday, November 25, 2011, 13:14 [IST]
English summary
Skoda India Launches Online Booking Of Rapid. Skoda India is very optimistic about the Rapid's sales performance. Skoda India boss Thomas Kuehl while speaking about the Rapid's online booking said the carmaker had already received 18 bookings in the first day of its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+